• About Us
  • Advertise
  • Privacy & Policy
  • Contact Us
Tuesday, June 23, 2026
ರಾಕೇಶ್ ಸೋಮಿನಕೊಪ್ಪ ಸಾರಥ್ಯದಲ್ಲಿ
yuvadhwani
Subscribe
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
No Result
View All Result
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
No Result
View All Result
yuvadhwani
No Result
View All Result
  • Home
  • ಶಿವಮೊಗ್ಗ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
Home ಶಿವಮೊಗ್ಗ

ಕುಲಪತಿಗಳ ವಿರುದ್ದ ಎನ್‌ಎಸ್‌ಯುಐ ಪ್ರತಿಭಟನೆ , 10 ಬೇಡಿಕೆಗಳೇನು?

ರಾಕೇಶ್ ಸೋಮಿನಕೊಪ್ಪ by ರಾಕೇಶ್ ಸೋಮಿನಕೊಪ್ಪ
April 23, 2026
in ಶಿವಮೊಗ್ಗ
ಕುಲಪತಿಗಳ ವಿರುದ್ದ ಎನ್‌ಎಸ್‌ಯುಐ ಪ್ರತಿಭಟನೆ , 10 ಬೇಡಿಕೆಗಳೇನು?
Share on FacebookShare on TwitterShare on WhatsApp

ಶಂಕರಘಟ್ಟ: ವಿಧ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸುವಂತೆ ಕುವೆಂಪು ವಿಶ್ವವಿದ್ಯಾಲಯದ ಗಮನಕ್ಕೆ ಸಾಕಷ್ಟು ಬಾರಿ ತಂದರೂ ಸ್ಪಂದಿಸದೇ ವಿದ್ಯಾರ್ಥಿ ವಿರೋಧಿ ನೀತಿ ತೋರುತ್ತಿರುವ ಕುಲಪತಿಗಳ ವಿರುದ್ದ ಇಂದು ಎನ್‌ಎಸ್‌ಯುಐ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಕುವೆಂಪು ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಿರಂತರವಾಗಿ ವಿದ್ಯಾರ್ಥಿ ವಿರೋಧಿ ನಡೆ ಅನುಸರಿಸುತ್ತಿದ್ದು, ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡುತ್ತಿರುವ ವಿಶ್ವವಿದ್ಯಾಲಯದ ನಡೆಯನ್ನು ಖಂಡಿಸುವುದಾಗಿ ಪ್ರತಿಭಟನಾಕಾರರು ಹೇಳಿದ್ದಾರೆ. ಕುಲಪತಿಗಳು ಅಧಿಕಾರ ಸ್ವೀಕರಿಸಿದಾಗಿನಿಂದಲೂ ವಿಶ್ವವಿದ್ಯಾಲಯದಲ್ಲಿ ಅಧಿಕಾರಿ ವರ್ಗದವರ ಆಂತರಿಕ ಕಚ್ಚಾಟದಲ್ಲೇ ತೊಡಗಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಕಳೆದ 5 ತಿಂಗಳ ಹಿಂದೆ ಪರೀಕ್ಷೆ ಬರೆದಿದ್ದ 1.3 ಮತ್ತು 5ನೇ ಸೆಮಿಸ್ಟರ್‌ಗಳ ಫಲಿತಾಂಶ ಪ್ರಕಟಿಸಿಲ್ಲ. ಇತ್ತೀಚೆಗೆ ನಡೆದ ಪರೀಕ್ಷೆಗಳ ಮೌಲ್ಯಮಾಪನವನ್ನು ಉಪನ್ಯಾಸಕರಿಗೆ ಮೌಲ್ಯಮಾಪನದ ಗೌರವಧನ ನೀಡದೇ ಇರುವುದರಿಂದ ಉಪನ್ಯಾಸಕರು ಮೌಲ್ಯಮಾಪನವನ್ನು ಬಹಿಷ್ಕರಿಸಿದ್ದಾರೆ ಎಂದರು.

ಅಲ್ಲದೇ 3 ವರ್ಷಗಳಿಂದ ಯಾವುದೇ ಪರೀಕ್ಷೆಗಳ ಅಂಕಪಟ್ಟಿಯನ್ನು ವಿತರಿಸದೇ ಅಂಕಪಟ್ಟಿಗಳನ್ನು ಮುದ್ರಿಸಲು ಟೆಂಡರ್ ಕರೆಯುವುದಾಗಿ ಹೇಳುತ್ತಲೇ ಬರಲಾಗುತ್ತಿದೆ. ಇದರಿಂದಾಗಿ ಪದವಿ ಪೂರೈಸಿದ ವಿದ್ಯಾರ್ಥಿಗಳು ಮುಂದಿನ ವಿದ್ಯಾಭ್ಯಾಸಕ್ಕೆ ಹೋಗಲು, ಉದ್ಯೋಗ ಕಂಡುಕೊಳ್ಳಲು ಆಗುತ್ತಿಲ್ಲ. ಪದವಿ ಪೂರೈಸಿದ ವಿದ್ಯಾರ್ಥಿಗಳಿಗೆ ಪಾಸಿಂಗ್ ಸರ್ಟಿಫಿಕೇಟ್ ಅಥವಾ ಪದವಿ ಪ್ರಮಾಣ ಪತ್ರ ನೀಡುತ್ತಿಲ್ಲ. ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ನೀಡುವಂತೆ ಜಿನ್ಯುಯೆನ್ ಸರ್ಟಿಫಿಕೇಟ್ ಕೊಡದೇ ಇರುವುದರಿಂದಾಗಿ ಕುವೆಂಪು ವಿವಿಯಲ್ಲಿ ವ್ಯಾಸಂಗ ಮಾಡಿದವರಿಗೆ ವಿವಿಧ ಕಂಪನಿಗಳಲ್ಲಿ ಉದ್ಯೋಗ ಸಿಗುವುದು ಕಷ್ಟವಾಗುತ್ತಿದೆ. ವಿಶ್ವವಿದ್ಯಾಲಯದ ಆಂತರಿಕ ಕಚ್ಚಾಟದಿಂದಾಗಿ ಕಳೆದೆರಡು ವರ್ಷ ಗಳಿಂದ ಘಟಿಕೋತ್ಸವ ಸಮಾರಂಭವನ್ನು ಸಹ ಏರ್ಪಡಿಸದೇ ವಿವಿಯ ಮಾನ ಹರಾಜಿಗಿಡಲಾಗಿದೆ ಎಂದರು.
ಕಳೆದ ಬಾರಿ ವಿವಿಯ ವೆಬ್ ಸೈಟ್‌ನಲ್ಲಿ ಪ್ರಕಟಿಸಿದ್ದ ಫಲಿತಾಂಶ ಸಾಕಷ್ಟು ಗೊಂದಲಕ್ಕೀಡು ಮಾಡಿತ್ತು. ನೂರಾರು ವಿದ್ಯಾರ್ಥಿಗಳ ಫಲಿತಾಂಶ ಒಂದು ಬಾರಿ ಪಾಸ್ ಎಂದು ತೋರಿಸಿದ್ದರೆ ಮತ್ತೊಂದು ಬಾರಿ ಫೇಲ್ ಎಂದು ತೋರಿಸುತ್ತಿತ್ತು. ಇದರಿಂದಾಗಿ ವಿದ್ಯಾರ್ಥಿಗಳು ಗೊಂದಲಕ್ಕೀಡಿ ಆತಂಕಕ್ಕೊಳಗಾಗಿದ್ದಾರೆ. ಕುವೆಂಪು ವಿಶ್ವ ವಿದ್ಯಾಲಯದಲ್ಲಿ ಸಾಕಷ್ಟು ಬಡ ಮತ್ತು ಮದ್ಯಮ ವರ್ಗದ ವಿದ್ಯಾರ್ಥಿಗಳು ಓದುತಿದ್ದು ಶುಲ್ಕದ ಹೆಸರಿನಲ್ಲಿ ಏಕಾಏಕಿ ಸಾವಿರಾರು ರುಪಾಯಿ ಪರೀಕ್ಷಾ ಶುಲ್ಕ ಹಾಗು ಪ್ರವೇಶ ಶುಲ್ಕದ ಹೆಸರಿನಲ್ಲಿ ಬಡ ಮತ್ತು ಮದ್ಯಮ ವರ್ಗದ ವಿದ್ಯಾರ್ಥಿಗಳಿಂದ ಸುಲಿಗೆಗೆ ಇಳಿದಿರುವುದು ಖಂಡನೀಯ ಎಂದರು.

ಕೂಡಲೇ ರಾಜ್ಯಪಾಲರು ಆಂತರಿಕ ಕಚ್ಚಾಟದಲ್ಲಿ ತೊಡಗಿರುವ ಕುಲಪತಿಗಳಿಗೆ. ವಿದ್ಯಾರ್ಥಿಗಳ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡಲು ಸೂಚನೆ ನೀಡಿ ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳಲ್ಲಿ ಅವ್ಯವಸ್ಥೆ ಸರಿಪಡಿಸಿ, ಅಕ್ರಮಗಳನ್ನು ತಡೆಯುವ ಕೆಲಸವನ್ನು ಮಾಡುವಂತೆ ಎಚ್ಚರಿಕೆ ನೀಡಬೇಕು ಎಂದು ಒತ್ತಾಯಿಸಿದರು.

ಬೇಡಿಕೆಗಳು :

➢ ಕಳೆದ 5ತಿಂಗಳ ಹಿಂದೆ ನಡೆದಿದ್ದ 1.3 ಮತ್ತು 5ನೇ ಸೆಮಿಸ್ಟರ್ ಪರೀಕ್ಷೆಗಳ ಫಲಿತಾಂಶ
ಪ್ರಕಟಿಸಬೇಕು. ಪದವಿ ಪ್ರಮಾಣ ಪತ್ರ, ಅಂಕಪಟ್ಟಿ, ಜೆನ್ಯೂಯೆನ್ ಸರ್ಟಿಫಿಕೇಟ್ ವಿತರಣೆ ಮಾಡಬೇಕು
➢ ಏಕಾ ಏಕಿ ಏರಿಸಿರುವ ಸಾವಿರಾರು ರುಪಾಯಿ ಪರೀಕ್ಷಾ ಶುಲ್ಕ ಹಾಗು ಪ್ರವೇಶ ಶುಲ್ಕವನ್ನು
ಇಳಿಸಬೇಕು
➢ ಡಿಜಿಟೆಲ್ ಮೌಲ್ಯಮಾಪನದಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು ಕೂಡಲೇ ಡಿಜಿಟೆಲ್
ಮೌಲ್ಯಮಾಪನವನ್ನು ಕೈಬಿಡಬೇಕು
➢ ಭ್ರಷ್ಟಾಚಾರದ ಆರೋಪ ಹಾಗು ವಿಶ್ವ ವಿದ್ಯಾಲಯದಲ್ಲಿ ಕಳಂಕ ಹೊತ್ತಿರುವ ಎಲ್ಲಾ ಅಧಿಕಾರಿಗಳನ್ನೂ
ತಕ್ಷಣ ವಜಾ ಮಾಡಬೇಕು
➢ ಯು.ಯು.ಸಿ.ಎಮ್.ಎಸ್ ನಿಂದ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆಗಳಿಗೆ ಸೂಕ್ತ ಪರಿಹಾರ
ವದಗೆಸಬೇಕು
➢ ವಿವಿ ಯಲ್ಲಿನ ತಾಂತ್ರಿಕ ತೊಂದರೆಗಳಿಗೆ ಸರ್ಕಾರವನ್ನು ದೂರದೆ ಸರಿಪಡಿಸುವ ವ್ಯವಸ್ಥೆ ಮಾಡಬೇಕು
➢ 2021-22ರ ದೂರಶಿಕ್ಷಣ ವಿದ್ಯಾರ್ಥಿಗಳ ಪರೀಕ್ಷೆ ಮತ್ತು ಅಂಕಪಟ್ಟಿ ಹಾಗು ಪಲಿತಾಂಶದ ಬಗ್ಗೆ ಕೂಡಲೆ
ಗಮನಹರಿಸಬೇಕು
➢ ವಿವಿ ವ್ಯಾಪ್ತಿಗೊಳಪಡುವ ಎಲ್ಲಾ ಕಾಲೇಜುಗಳಲ್ಲಿ ಹಾಗು ಹಾಸ್ಟೆಲ್‌ಗಳಲ್ಲಿ ಮೂಲಭೂತ ಸೌಕರ್ಯಗಳನ್ನು
ಸರಿಪಡಿಸಬೇಕು.
➢ ವಿವಿಯ ಎಲ್ಲಾ ಕಾಲೇಜುಗಳಿಗೆ ಕಂಪ್ಯೂಟರ್ ಹಾಗೂ ಲ್ಯಾಬ್ ವ್ಯವಸ್ಥೆ ಮಾಡಬೇಕು.
➢ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಕಾಲೇಜುಗಳಲ್ಲಿ ಹೆಚ್ಚುವರಿ ಕೊಠಡಿ ವ್ಯವಸ್ಥೆ
ಮಾಡಬೇಕು  ಎಂದು  ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಎನ್‌ಎಸ್‌ಯುಐನ ಜಿಲ್ಲಾಧ್ಯಕ್ಷ ವಿಜಯ್, ಕಾರ್ಯಾಧ್ಯಕ್ಷ ರವಿ ಕಟಿಕೆರೆ, ನಗರಾಧ್ಯಕ್ಷರಾದ ರವಿ ಯುವ ಮುಖಂಡರಾದ ಮುರುಗೇಶ್ ನಗರ ಉಪಾಧ್ಯಕ್ಷ ಆದಿತ್ಯ ಸುಭಾನ್ ಪ್ರಧಾನ ಕಾರ್ಯದರ್ಶಿ ಚಂದ್ರೋಜಿ ರಾವ್, ವರುಣ್, ಅಭಿ, ಫರಾಜ್, ಸೃಜನ್, ಚೇತನ್, ಧನುಷ್, ಸೃಜನ್ ಲೋಹಿತ್, ಆಕಾಶ್, ಹಾಲಸ್ವಾಮಿ, ವಿಕಾಸ್ ಯೂಸುಫ್, ರಿಹಾನ್, ಸಾದ್ ಉಲ್ಲಾ, ಇಸ್ಮಾಯಿಲ್, ಅರ್ಮಾನ್, ರಯಾನ್, ಅಡೀಬ್, ರಿಜ್ವಾನ್, ಆಶಿಕ್, ವಾಸೀಮ್, ರಿಹಾನ್, ಅಜೀಂ, ಅರ್ಮಾನ್, ಸಲ್ಮಾನ್ ದೃಶ್ಯ, ಲೋಹಿತ್, ಯಶಸ್, ಉಮೇಶ್, ಅಂತೋನಿ, ಹೇಮಂತ್, ತರುಣ್, ವಿವೇಕ್, ಸಂದೇಶ್, ಮಿಥುನ್, ನವೀನ್, ಅಶೋಕ್, ನಿಖಿಲ್, ಚಂದನ್, ವಿನಯ್, ಮನೀಶ್, ಶ್ರೀಕಾಂತ್, ಪ್ರಜ್ವಲ್, ಪಂಕಜ್ ಪ್ರಭು, ಪ್ರಮೋದ್, ಸುನಿಲ್, ಪ್ರೀತಮ್, ಕುಮಾರ್ ಹಾಗೂ ನೂರಾರು ವಿದ್ಯಾರ್ಥಿ ನಾಯಕರು ಪಾಲ್ಗೊಂಡಿದ್ದರು.

Tags: kannada newskannada news livemalnad newsNSUINSUI protest against the Vice Chancellorshimogashivamoggawhat are the 10 demands?
Previous Post

ರಾಜ್ಯಕ್ಕೆ ಎರಡನೇ ರ‍್ಯಾಂಕ್ ಪಡೆದ ಶಿವಮೊಗ್ಗದ ಅನಘ

Next Post

ಶಿವಮೊಗ್ಗ ರಾಮಕೃಷ್ಣ ವಿದ್ಯಾ ಸಂಸ್ಥೆಯ ಮೂರೂ ಶಾಲೆಗಳಲ್ಲಿ ಶೇ. 100 ಫಲಿತಾಂಶ

ರಾಕೇಶ್ ಸೋಮಿನಕೊಪ್ಪ

ರಾಕೇಶ್ ಸೋಮಿನಕೊಪ್ಪ

Next Post
ಶಿವಮೊಗ್ಗ ರಾಮಕೃಷ್ಣ ವಿದ್ಯಾ ಸಂಸ್ಥೆಯ ಮೂರೂ ಶಾಲೆಗಳಲ್ಲಿ ಶೇ. 100 ಫಲಿತಾಂಶ

ಶಿವಮೊಗ್ಗ ರಾಮಕೃಷ್ಣ ವಿದ್ಯಾ ಸಂಸ್ಥೆಯ ಮೂರೂ ಶಾಲೆಗಳಲ್ಲಿ ಶೇ. 100 ಫಲಿತಾಂಶ

  • Trending
  • Comments
  • Latest
ನ್ಯಾಷನಲ್ ಪಬ್ಲಿಕ್ ಶಾಲೆಯ ಸಾಧನೆ, ಸಿಬಿಎಸ್ಇ 10ನೇ ತರಗತಿಯಲ್ಲಿ 100% ಫಲಿತಾಂಶ

ನ್ಯಾಷನಲ್ ಪಬ್ಲಿಕ್ ಶಾಲೆಯ ಸಾಧನೆ, ಸಿಬಿಎಸ್ಇ 10ನೇ ತರಗತಿಯಲ್ಲಿ 100% ಫಲಿತಾಂಶ

April 16, 2026
ಎಸ್.ಎಸ್.ಎಲ್.ಸಿ: ಎನ್ಇಎಸ್ ಶಾಲೆಗಳಿಗೆ ಉತ್ತಮ ಫಲಿತಾಂಶ

ಎಸ್.ಎಸ್.ಎಲ್.ಸಿ: ಎನ್ಇಎಸ್ ಶಾಲೆಗಳಿಗೆ ಉತ್ತಮ ಫಲಿತಾಂಶ

April 24, 2026
ಜೆ.ಎನ್.ಎನ್.ಸಿ.ಇ ಕಾಲೇಜಿನ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಹಿರಿಯ ವಿದ್ಯಾರ್ಥಿಗಳ ‘ಪವರ್ ಮೀಟ್’

ಜೆ.ಎನ್.ಎನ್.ಸಿ.ಇ ಕಾಲೇಜಿನ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಹಿರಿಯ ವಿದ್ಯಾರ್ಥಿಗಳ ‘ಪವರ್ ಮೀಟ್’

April 25, 2026
ಶಿವಮೊಗ್ಗ | ತುಂಗಾ ನದಿ ಸೇತುವೆ ಮೇಲೆ ಖಾಸಗಿ ಬಸ್-ಟಿಟಿ ಮುಖಾಮುಖಿ ಡಿಕ್ಕಿ

ಶಿವಮೊಗ್ಗ | ತುಂಗಾ ನದಿ ಸೇತುವೆ ಮೇಲೆ ಖಾಸಗಿ ಬಸ್-ಟಿಟಿ ಮುಖಾಮುಖಿ ಡಿಕ್ಕಿ

January 26, 2026
ಶಿವಮೊಗ್ಗ, ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ, ವಿದ್ಯಾರ್ಥಿನಿ ಸಾವು

ಶಿವಮೊಗ್ಗ, ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ, ವಿದ್ಯಾರ್ಥಿನಿ ಸಾವು

4
ಶಿವಮೊಗ್ಗ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು, ಆಗಿದ್ದೇನು?

ಶಿವಮೊಗ್ಗ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು, ಆಗಿದ್ದೇನು?

4
ಶಿಕಾರಿಪುರ | ಶಾಲಾ ಕೊಠಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಶಿಕ್ಷಕ

ಮಾವನನ್ನೇ ಕುತ್ತಿಗೆ ಸೀಳಿ ಹತ್ಯೆಗೆ ಯತ್ನಿಸಿದ ಅಳಿಯ, ಕಾರಣವೇನು?

3
ಶಿವಮೊಗ್ಗ, ಬೈಕ್ ವೀಲಿಂಗ್ ಮಾಡಿ ವಿಡಿಯೋ ಹರಿಬಿಟ್ಟ ಯುವಕರು, ಮುಂದೇನಾಯ್ತು?

ಶಿವಮೊಗ್ಗ, ಬೈಕ್ ವೀಲಿಂಗ್ ಮಾಡಿ ವಿಡಿಯೋ ಹರಿಬಿಟ್ಟ ಯುವಕರು, ಮುಂದೇನಾಯ್ತು?

3
ಎತ್ತಿನಗಾಡಿಯಿಂದ ಬಿದ್ದು ಕಾರ್ಮಿಕ ಸಾವು

ಮೋಟಾರ್ ಆನ್ ಮಾಡುವಾಗ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವು! ಆಗಿದ್ದೇನು?

June 23, 2026
ಎಸ್ಸಿ, ಎಸ್ಟಿ, ಬಿಪಿಎಲ್ ಫಲಾನುಭವಿಗಳು ಆತಂಕಕ್ಕೆ, ಕಲ್ಲೂರು ಮೇಘರಾಜ್ ಅವರ ಆಗ್ರಹವೇನು?

ಎಸ್ಸಿ, ಎಸ್ಟಿ, ಬಿಪಿಎಲ್ ಫಲಾನುಭವಿಗಳು ಆತಂಕಕ್ಕೆ, ಕಲ್ಲೂರು ಮೇಘರಾಜ್ ಅವರ ಆಗ್ರಹವೇನು?

June 23, 2026
ಜೂ.27:ನಾಡಪ್ರಭು ಕೆಂಪೇಗೌಡ  ಜಯಂತಿ, ಕಸಾಪ ಅಧ್ಯಕ್ಷ ಡಿ.ಮಂಜುನಾಥ್‌ ಗೆ ಕೆಂಪೇಗೌಡ ಪ್ರಶಸ್ತಿ

ಜೂ.27:ನಾಡಪ್ರಭು ಕೆಂಪೇಗೌಡ  ಜಯಂತಿ, ಕಸಾಪ ಅಧ್ಯಕ್ಷ ಡಿ.ಮಂಜುನಾಥ್‌ ಗೆ ಕೆಂಪೇಗೌಡ ಪ್ರಶಸ್ತಿ

June 23, 2026
ಶಿವಮೊಗ್ಗ, ಔಷಧ ಮಹಾವಿದ್ಯಾಲಯದಲ್ಲಿ ಔಷಧ ವಿತರಕರಿಗೆ ವಿಶೇಷ ಕಾರ್ಯಾಗಾರ

ಶಿವಮೊಗ್ಗ, ಔಷಧ ಮಹಾವಿದ್ಯಾಲಯದಲ್ಲಿ ಔಷಧ ವಿತರಕರಿಗೆ ವಿಶೇಷ ಕಾರ್ಯಾಗಾರ

June 23, 2026

Recent News

Facebook Twitter
yuvadhwani

ಶಿವಮೊಗ್ಗ ಸುದ್ದಿಗಳ ಜೊತೆಗೆ ರಾಜ್ಯದ ಪ್ರಚಲಿತ ವಿದ್ಯಮಾನಗಳ ಸುದ್ದಿಗಳನ್ನು ಓದಲು ಯುವಧ್ವನಿ ನ್ಯೂಸ್ ಪೋರ್ಟಲ್ ಗೆ ತಮಗೆ ಸುಸ್ವಾಗತ. ವಿಭಿನ್ನ, ವಿಶೇಷ, ಉತ್ತಮ ಗುಣಮಟ್ಟದ ಸುದ್ದಿಗಳನ್ನು ಓದುಗ ಮನಸ್ಸುಗಳಿಗೆ ಮುಟ್ಟಿಸಲು ಬದ್ದರಾಗಿದ್ದೇವೆ.

Follow Us

Browse by Category

  • Uncategorized
  • what is the reason?
  • ಅಂಕಣಗಳು
  • ಆರೋಗ್ಯ
  • ಕ್ರೈಂ ನ್ಯೂಸ್
  • ತೀರ್ಥಹಳ್ಳಿ
  • ದೇಶ
  • ಭದ್ರಾವತಿ
  • ರಾಜ್ಯ
  • ವಿಶೇಷ
  • ಶಿಕಾರಿಪುರ
  • ಶಿವಮೊಗ್ಗ
  • ಸಾಗರ
  • ಸೊರಬ
  • ಹೊಸನಗರ

Recent News

ಎತ್ತಿನಗಾಡಿಯಿಂದ ಬಿದ್ದು ಕಾರ್ಮಿಕ ಸಾವು

ಮೋಟಾರ್ ಆನ್ ಮಾಡುವಾಗ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವು! ಆಗಿದ್ದೇನು?

June 23, 2026
ಎಸ್ಸಿ, ಎಸ್ಟಿ, ಬಿಪಿಎಲ್ ಫಲಾನುಭವಿಗಳು ಆತಂಕಕ್ಕೆ, ಕಲ್ಲೂರು ಮೇಘರಾಜ್ ಅವರ ಆಗ್ರಹವೇನು?

ಎಸ್ಸಿ, ಎಸ್ಟಿ, ಬಿಪಿಎಲ್ ಫಲಾನುಭವಿಗಳು ಆತಂಕಕ್ಕೆ, ಕಲ್ಲೂರು ಮೇಘರಾಜ್ ಅವರ ಆಗ್ರಹವೇನು?

June 23, 2026

Copyright © 2026 Yuva Dhwani. Designed by KIPL