ಶಿವಮೊಗ್ಗ: ಬೆಂಗಳೂರಿನ ಆಚಾರ್ಯ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ವಿಟಿಯು ಅಂತರ ಕಾಲೇಜು ಸಾಂಸ್ಕೃತಿಕ ಉತ್ಸವದಲ್ಲಿ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ತಂಡ 5 ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆದು ಸಾಂಸ್ಕೃತಿಕ ಪಥಸಂಚಲನದಲ್ಲಿ ರ್‍ಯಾಲಿ ಚಾಂಪಿಯನ್ಸ್ ಬಹುಮಾನ ಪಡೆದಿದ್ದಾರೆ.
ಇದನ್ನೂ ಓದಿ > ಶಿವಮೊಗ್ಗ, ಮಂಗಳಮುಖಿಯ ದರೋಡೆ, 12 ಗಂಟೆಯಲ್ಲಿ ಆರೋಪಿಯ ಬಂಧನ
ಛಾಯಗ್ರಹಣ ಸ್ಪರ್ಧೆಯಲ್ಲಿ ವಿದ್ಯಾರ್ಥಿ ಭುವನ್ ಚಿನ್ನದ ಪದಕ, ಜಾನಪದ ನೃತ್ಯದಲ್ಲಿ ಶರಧಿ ಮತ್ತು ಅಪೂರ್ವ ತಂಡ ಚಿನ್ನದ ಪದಕ, ಮೈಮ್ ಪ್ರದರ್ಶನದಲ್ಲಿ ಶರಧಿ ಮತ್ತು ತಂಡ ಕಂಚಿನ ಪದಕ, ಭಾರತೀಯ ವೃಂದ ಗಾಯನ ಸ್ಪರ್ಧೆಯಲ್ಲಿ ವಿಕಾಸ್ ಮತ್ತು ತಂಡ ಕಂಚಿನ ಪದಕ, ರಂಗೋಲಿ ಸ್ಪರ್ಧೆಯಲ್ಲಿ ಅಪೂರ್ವ ಕಂಚಿನ ಪದಕ ಪಡೆದಿದ್ದಾರೆ. ಹರೀಶ್ ಮತ್ತು ಅಕ್ಷತ ತಂಡವನ್ನು ಸಂಯೋಜಿಸಿದ್ದರು.
ಇದನ್ನೂ ಓದಿ > ಜೆ.ಎನ್.ಎನ್.ಸಿ.ಇ ಕಾಲೇಜಿನ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಹಿರಿಯ ವಿದ್ಯಾರ್ಥಿಗಳ ‘ಪವರ್ ಮೀಟ್’
ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್ ಮತ್ತು ಸಿಬ್ಬಂದಿ ವರ್ಗ, ಎನ್ಇಎಸ್ ಆಡಳಿತ ಮಂಡಳಿ ಅಭಿನಂದಿಸಿದೆ.















