ಶಿರಾಳಕೊಪ್ಪ: ಜಾವಗಟ್ಟಿ ಗ್ರಾಮದಲ್ಲಿ ಬೈಕ್ ಮತ್ತು ಟ್ರ್ಯಾಕ್ಟರ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಮೃತರನ್ನು ಬಸವನಂದಿಹಳಿ ಮಲ್ಲಿಕಾರ್ಜುನಪ್ಪ ಕಂಡೇರ (56) ಎಂದು ಗುರುತಿಸಲಾಗಿದೆ.
ಘಟನೆ ಹೇಗಾಯ್ತು?
ಪತ್ನಿ ಪಾರ್ವತಮ್ಮ ಅವರ ಜೊತೆ ಶಿರಾಳಕೊಪ್ಪದಿಂದ ಸೊರಬ ತಾಲ್ಲೂಕಿನ ಗಂಗೊಳ್ಳಿ ಯಲ್ಲಿದ್ದ ಮಗಳ ಮನೆಗೆ ಹೊರಟಾಗ ಎದುರಿಗೆ ಬಂದ ಟ್ರ್ಯಾಕ್ಟರ್ ಚಾಲಕ ಮಳೂರಿಗೆ ತೆರೆಳುವ ರಸ್ತೆಯ ಬಲಕ್ಕೆ ಸಂಚರಿಸಿದಾಗ ಬೈಕ್‌ಗೆ ಡಿಕ್ಕಿಯಾಗಿ ಸವಾರನ ತಲೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಪತ್ನಿಗೆ ಗಾಯಗಳಾಗಿದ್ದು, ಶಿವಮೊಗ್ಗದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಶಿರಾಳಕೊಪ್ಪ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ : 7483162573, yuvadhwani@gmail.com













