ತೀರ್ಥಹಳ್ಳಿ, : ಪ್ರೀತಿ ನಿರಾಕರಿಸಿದಕ್ಕೆ ಬಿಯರ್ ಬಾಟಲಿಯಿಂದ ಪಾಗಲ್ ಪ್ರೇಮಿಯೊಬ್ಬ ಯುವತಿಗೆ ಚುಚ್ಚಿದ್ದಾನೆ. ಯುವತಿಯ ಮನೆ ಒಳಗೆ ನುಗ್ಗಿ ಯುವತಿಗೆ ಘಾಸಿಗೊಳಿಸಿದ್ದಾನೆ.
ತೀರ್ಥಹಳ್ಳಿಯ ತೂದೂರು ಗ್ರಾಮದ ಯುವಕನಿಂದ ಕೃತ್ಯ ನಡೆದಿದೆ. ಆರು ತಿಂಗಳಿಂದ ಪ್ರೀತಿಸುವಂತೆ ಪೀಡಿಸುತ್ತಿದ್ದ ಯುವಕ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದನು. ಪ್ರೀತಿಯನ್ನು ನಿರಾಕರಿಸಿದ್ದ ಯುವತಿಯನ್ನು ಬಿಯರ್ ಬಾಟಲಿನಿಂದ ಹಲ್ಲೆಗೊಳಿಸಿದ್ದಾನೆ.
ನಿನ್ನೆ ಸಂಜೆ ವೇಳೆ ಏಕಾಏಕಿ ಮನೆಗೆ ನುಗ್ಗಿ ದಾಂದಲೇ ನಡೆಸಿದ ಸ್ವರೂಪ್ ಕಂಠ ಪೂರ್ತಿ ಕುಡಿದು ಬಂದು ಯುವತಿಯಛಿ ಮನೆಗೆ ನುಗ್ಗಿದ್ದ. ಮನೆಗೆ ನುಗ್ಗುತ್ತಿದಂತೆ ವಿರೋಧ ವ್ಯಕ್ತ ಪಡಿಸಿದ ಯುವತಿಯ ತಾಯಿಯನ್ನು ಹೊರಗೆ ತಳ್ಳಿದ್ದಾನೆ. ತಾಯಿಯನ್ನು ಹೊರಗೆ ತಳ್ಳಿ ಮನೆಯ ಬಾಗಿಲು ಹಾಕಿ ಯುವತಿ ಮೇಲೆ ಹಲ್ಲೆ ನಡೆಸಿದ್ದಾನೆ. ಮನೆಯ ಒಳಗೆ ಲಾಕ್ ಮಾಡಿ ಮೊದಲೇ ತಂದಿದ್ದ ಬಿಯರ್ ಬಾಟಲ್ ನಿಂದ ಮನಸೋಚ್ಚೆ ಚುಚ್ಚುದ್ದಾನೆ. ಯುವತಿ ಕತ್ತಿನ ಭಾಗ ಹಾಗೂ ಹೊಟ್ಟೆ, ಬೆನ್ನಿನ ಭಾಗಕ್ಕೆ ಬಾಟಲಿಯಿಂದ ಹಲ್ಲೆ ನಡೆಸಿದ್ದಾನೆ. ನಂತರ ಸ್ವಲ್ಪ ದೂರದಲ್ಲೇ ಇದ್ದ ಯುವತಿಯ ತಂದೆ ಬಾಗಿಲು ಒಡೆದು ಯುವತಿಯ ರಕ್ಷಣೆ ಮಾಡಿದ್ದಾರೆ. ಈ ವೇಳೆ ಘಟನಾ ಸ್ಥಳದಿಂದ ಸ್ವರೂಪ್ ಕಾಲುಕಿತ್ತಿ ದ್ದಾನೆ ಎನ್ನಲಾಗಿದೆ.
ಹತ್ತಿರದ ತಾಲೂಕು ಆಸ್ಪತ್ರೆಯಲ್ಲಿ ಯುವತಿಗೆ ಚಿಕಿತ್ಸೆ ಕೊಡಿಸಲಾಗಿದೆ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಿಗೆ ಸಾಗಿಸಲಾಗಿದೆ. ಪಾಗಲ್ ಪ್ರೇಮಿಯನ್ನು ತೀರ್ಥಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ : 7483162573, yuvadhwani@gmail.com













