ರಾಕೇಶ್ ಸೋಮಿನಕೊಪ್ಪ ಸಾರಥ್ಯದಲ್ಲಿ

About Us

ತುಂಗೆಯ ಮಡಿಲಿನ ಯುವ ಪಡೆಯ ನೇತೃತ್ವದಲ್ಲಿ ಯುವಧ್ವನಿ ಆರಂಭಿಸುವ ಮೂಲಕ ಮಾದ್ಯಮ ಲೋಕದಲ್ಲೊಂದು ಪುಟ್ಟ ಹೆಜ್ಜೆಯೊಂದನ್ನಿಟ್ಟಿದ್ದೇವೆ. ಶಿವಮೊಗ್ಗ ಸುದ್ದಿಗಳ ಜೊತೆಗೆ ರಾಜ್ಯದ ಪ್ರಚಲಿತ ವಿದ್ಯಮಾನಗಳ ಸುದ್ದಿಗಳನ್ನು ವಿಶೇಷವಾಗಿ, ವಿಭಿನ್ನವಾಗಿ ಓದುಗ ಮನಸ್ಸುಗಳಿಗೆ ನೀಡಬೇಕು ಎಂಬ ಅಭಿಲಾಷೆಯನ್ನು ಹೊಂದಿದ್ದೇವೆ.
ಗುಣಮಟ್ಟ ಹಾಗೂ ಖಚಿತತೆಗೆ ಮೊದಲ ಆದ್ಯತೆ ನೀಡಲಾಗಿದ್ದು, ಶಿವಮೊಗ್ಗದ ಹಲವು ಪತ್ರಿಕೆಗಳಲ್ಲಿ ಕೆಲಸ ನಿರ್ವಹಿಸಿದ ಅನುಭವವಿದ್ದು, ನನ್ನ ಗುರುಗಳು, ಎಸ್.ಕೆ. ಗಜೇಂದ್ರ ಸ್ವಾಮಿ ಸಾರಥ್ಯದಲ್ಲಿ ಮುನ್ನಡೆಯುತ್ತಿರುವ ತುಂಗಾ ತರಂಗ ಕನ್ನಡ ದಿನಪತ್ರಿಕೆಯ ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಮನೆ ಮನೆಗೆ ಪತ್ರಿಕೆ ಹಂಚಲು ಬಂದ ನನಗೆ ಕೆಲಸ ಕಲಿಸಿ, ನನ್ನ ಹಲವು ತಪ್ಪುಗಳನ್ನು ತಿದ್ದುವ ಮೂಲಕ ವರದಿಗಾರ, ಡಿಸೈನರ್ ಆಗಿ ಪತ್ರಿಕಾ ಲೋಕಕ್ಕೆ ಪರಿಚಯಿಸುವ ಮೂಲಕ ಪ್ರೇರಣೆ, ಶಕ್ತಿ ನೀಡಿದ್ದು, ತುಂಗಾ ತರಂಗ ಬಳಗಕ್ಕೆ ನಾನು ಸದಾ ಚಿರಋಣಿ.
ನಮ್ಮ ಈ ಮಾಧ್ಯಮದ ಮೂಲಕ ಶಿವಮೊಗ್ಗ ಸೇರಿದಂತೆ ಮಲೆನಾಡಿನ ಸುದ್ದಿಗಳನ್ನು ಓದುಗರಿಗೆ ಅಚ್ಚುಕಟ್ಟಾಗಿ ತಲುಪಿಸುವುದು ನಮ್ಮ ಗುರಿ. ನಮಗೆ ಸುದ್ದಿಯ ಧಾವಂತವಿಲ್ಲ. ಆದರೆ, ನಿಖರ, ಖಚಿತ ಹಾಗೂ ಸ್ಪಷ್ಟ ಸುದ್ದಿಗಳು ಹಾಗೂ ಲೇಖನಗಳನ್ನು ಪ್ರಕಟಿಸುವುದು ನಮ್ಮ ಆದ್ಯತೆ. ಸುದ್ದಿಯ ಧಾವಂತಕ್ಕಿಂತಲೂ, ಅದರಲ್ಲಿನ ಸತ್ವ ಹಾಗೂ ನಿಖರಗೆ ಓದುಗರನ್ನು ಹಿಡಿದಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ನಂಬಿದವರು ನಾವು. ನಮ್ಮ ಈ ಪ್ರಯತ್ನಕ್ಕೆ ನಿಮ್ಮೆಲ್ಲರ ಒತ್ತಾಸೆಯಿರಲಿ.
ಯುವಧ್ವನಿ ನ್ಯೂಸ್ ಪೋರ್ಟಲ್ ಹೊರ ಜಗತ್ತಿಗೆ ಪರಿಚಯಿಸಲು ನಮ್ಮೊಂದಿಗೆ ಕೈ ಜೋಡಿಸಿದ ನನ್ನ ಆತ್ಮೀಯರಾದ ಕಲ್ಪನ್ಯೂಸ್’ನ ಎಸ್.ಆರ್. ಅನಿರುದ್ಧ ವಸಿಷ್ಠ, ಪತ್ರಕರ್ತರಾದ ರಾಘುಶೆಟ್ಟಿ, ಚಂದ್ರಮೌಳಿ ಕಾರ್ತಿಕ್, ವಕೀಲರಾದ ಗಜಾನನ, ದೈಹಿಕ ಶಿಕ್ಷಕರಾದ ರಾ.ಹ.ತಿಮ್ಮೇನಹಳ್ಳಿ, ಸಹೋದರ ರವಿ ಸೋಮಿನಕೊಪ್ಪ, ಭದ್ರಾವತಿಯ ವಿಶ್ವನಾಥ್ಅ, ಸ್ಟೈಲ್ ಡ್ಯಾನ್ಸ್ ಕ್ರೀವ್ ನ ಸಂಸ್ಥಾಪಕ ಶಶಿಕುಮಾರ್ ಎನ್. ವರಿಗೆ ಅಭಿನಂದನೆಗಳು.

    • ರಾಕೇಶ್ ಸೋಮಿನಕೊಪ್ಪ,
      ಸಂಪಾದಕರು, ಯುವಧ್ವನಿ, ಶಿವಮೊಗ್ಗ