ಶಿವಮೊಗ್ಗ : ನಗರದ ದುರ್ಗಿಗುಡಿ ಮುಖ್ಯ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಹಲವು ಅಡೆತಡೆಗಳ ದೂರು ಬಂದ ಹಿನ್ನಲೆಯಲ್ಲಿ ಸಂಚಾರಿ ವೃತ್ತ ನಿರೀಕ್ಷಕ ಟಿ.ವಿ. ದೇವರಾಜ್ ನೇತೃತ್ವದಲ್ಲಿ ಸಂಚಾರಿ ಪೊಲೀಸರ ತಂಡ, ದುರ್ಗಿಗುಡಿ ಮುಖ್ಯರಸ್ತೆಯಲ್ಲಿ ಹಲವು ದಿಟ್ಟ ಕ್ರಮಗಳನ್ನು ಕೈಗೊಂಡಿದೆ.
ದುರ್ಗಿಗುಡಿ ಮುಖ್ಯರಸ್ತೆಯಲ್ಲಿ ಸಿಂಗರ್ ಶೋರೂಂ ವೃತ್ತದಿಂದ ಗೋಪಿವೃತ್ತದವರೆಗೆ ಏಕಮುಖ ಸಂಚಾರವಿದ್ದು ಬ್ಯಾರಿಕೇಡ್ ಹಾಕಿ ಫಲಕಗಳನ್ನು ಹಾಕಿದ್ದರೂ ಸಹ ನಿರಂತರವಾಗಿ ವಾಹನ ಸವಾರರು ನಿಯಮ ಉಲ್ಲಂಘಿಸುತ್ತಿದ್ದು, ಇನ್ನು ಮುಂದೆ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಸಂಚಾರಿ ವೃತ್ತ ನಿರೀಕ್ಷಕ ಟಿ.ವಿ. ದೇವರಾಜ್ ಅವರ ಸೂಚನೆಗಳೇನು?
-
ಫುಟ್‍ಪಾತ್ ಮೇಲೆ ವ್ಯಾಪಾರಸ್ಥರು ಯಾವುದೇ ರೀತಿಯ ಅತಿಕ್ರಮಣ ಮಾಡುವ ಹಾಗಿಲ್ಲ.
-
ತಮ್ಮ ಅಂಗಡಿಯ ಬೋರ್ಡ್‍ಗಳನ್ನು ಇಡುವ ಹಾಗಿಲ್ಲ.
-
ಹೂ-ಹಣ್ಣು ವ್ಯಾಪಾರಿಗಳು ಮನಬಂದಂತೆ ತಮ್ಮ ಗಾಡಿಗಳನ್ನು ಶಾಶ್ವತವಾಗಿ ನಿಲ್ಲಿಸುತ್ತಿದ್ದು, ಅದಕ್ಕೆ ಅವಕಾಶವಿಲ್ಲ.
-
ದುರ್ಗಿಗುಡಿ ಮುಖ್ಯ ರಸ್ತೆಯಲ್ಲಿ ಸುಗಮ ಸಂಚಾರದ ದೃಷ್ಠಿಯಿಂದ ತಳ್ಳುವ ಗಾಡಿಗಳಿಗೆ ಶಾಶ್ವತವಾಗಿ ನಿಲ್ಲಲ್ಲು ಅವಕಾಶವಿಲ್ಲ.
-
ಅಲ್ಲದೆ ಆಟೋ ಚಾಲಕರು ಕೂಡ ಮನಬಂದಂತೆ ಆಟೋಗಳನ್ನು ನಿಲ್ಲಿಸುತ್ತಿದ್ದು, ಅವರು ನಿಗಧಿತ ಜಾಗದಲ್ಲೇ ಪಾರ್ಕಿಂಗ್ ಮಾಡಬೇಕು.
-
ಸಂಚಾರಿ ನಿಯಮಗಳನ್ನು ಸಾರ್ವಜನಿಕರು ಪಾಲಿಸಬೇಕು. ವ್ಯಾಪಾರಸ್ಥರು ಕೂಡ ಅದನ್ನು ಪಾಲಿಸಬೇಕು.
-
ಕನ್ಸರ್‍ವೆನ್ಸಿಗಳನ್ನು ತಮ್ಮ ದ್ವಿಚಕ್ರ ವಾಹನಗಳ ನಿಲುಗಡೆಗೆ ಬಳಸಿಕೊಳ್ಳಬೇಕು.
ವಿಪರ್ಯಾಸವೆಂದರೆ ಸಂಚಾರಿ ಪೊಲೀಸರು ಫುಟ್‍ಪಾತ್ ಮೇಲಿದ್ದ ಬೋರ್ಡ್‍ಗಳನ್ನು ತೆರವುಗೊಳಿಸಿ, ಎಚ್ಚರಿಕೆ ನೀಡಿ, ತೆರಳಿದ ಕೆಲವೇ ಕ್ಷಣಗಳಲ್ಲಿ ಮತ್ತೆ ಎಂದಿನಂತೆ ವ್ಯಾಪಾರಿಗಳು ಮತ್ತು ಸಾರ್ವಜನಿಕರಿಂದ ನಿಯಮಗಳ ಉಲ್ಲಂಘನೆ ಯಥಾಪ್ರಕಾರ ಮುಂದುವರೆದಿದೆ.
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 7483162573, yuvadhwanismg@gmail.com












