ಶಿವಮೊಗ್ಗ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದಿ ಕೇಂದ್ರದ 2026-27ನೇ ಸಾಲಿನ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಯಾವುದೇ ಕೊಡುಗೆ ನೀಡದೇ ಅನ್ಯಾಯ ಮಾಡಿದೆ ಎಂದು ಕಾಂಗ್ರೆಸ್‌ನ ಯುವ ಮುಖಂಡ ಸಿ.ಜಿ. ಮಧುಸೂದನ್ ಪತ್ರಿಕಾ ಪ್ರಕಟಣೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ರಾಜ್ಯವು ಕೇಂದ್ರ ಸರ್ಕಾರಕ್ಕೆ ಅತಿ ಹೆಚ್ಚು ತೆರಿಗೆ ನೀಡುತ್ತಿರುವ ಎರಡನೇ ಸ್ಥಾನದಲ್ಲಿರುವ ರಾಜ್ಯವಾಗಿದ್ದು, ನಮ್ಮ ತೆರಿಗೆ ತಕ್ಕ ಪ್ರಮಾಣದಲ್ಲಿ ಕೇಂದ್ರ ಸರ್ಕಾರದ ಅನುದಾನ ನೀಡುತ್ತಿಲ್ಲ. ಕರ್ನಾಟಕಕ್ಕೆ ಕೇಂದ್ರ ಬಿಜೆಪಿ ಸರ್ಕಾರ ಅನ್ಯಾಯ ಮಾಡುತ್ತಿದ್ದು, ಯಾವುದೇ ಹೊಸ ಯೋಜನೆಗಳನ್ನು ರಾಜ್ಯಕ್ಕೆ ನೀಡದೆ ವಂಚಿಸಿದೆ ಎಂದಿದ್ದಾರೆ.
ದೇಶದ ಅಭಿವೃದ್ಧಿಗೂ ಯಾವುದೇ ಒಳ್ಳೆಯ ಯೋಜನೆಗಳು ನೀಡಿರುವುದಿಲ್ಲ. ಅಮೇರಿಕದ ಡಾಲರ್ ಎದುರು ನಮ್ಮ ದೇಶದ ರುಪಾಯಿ ಮೌಲ್ಯ ಚೇತರಿಸಿಕೊಳ್ಳುವ ಯಾವ ಯೋಜನೆಯು ಇಲ್ಲ. ದೇಶದ ರೈತರಿಗೆ ರಸಗೊಬ್ಬರ ದರದಲ್ಲಿ ಹಗಲು ದರೋಡೆ ಮಾಡುತ್ತಿದ್ದು, ಕನಿಷ್ಠ ಪಕ್ಷ ಅದನ್ನು ಇಳಿಸುವ ಕೆಲಸ ಮಾಡಲಿಲ್ಲ. ನಿರುದ್ಯೋಗ ಯುವಕರಿಗೆ ಪ್ರೋತ್ಸಾಹಿಸುವ ಯಾವ ಯೋಜನೆಗಳನು ಜಾರಿಗೆ ಬಂದಿಲ್ಲ. ಒಟ್ಟಾರೆ ಕೇಂದ್ರದ 2026-27 ನೇ ಸಾಲಿನ ಬಜೆಟ್ ಬಲ್ಬ್ ಇಲ್ಲದ ಕಂಬದಂತ್ತಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ : 7483162573, yuvadhwani@gmail.com













