ಶಿವಮೊಗ್ಗ : ನಗರದ 100 ಅಡಿ ರಸ್ತೆಯ ಲಕ್ಷ್ಮೀ ಟಾಕೀಸ್ ವೃತ್ತದಿಂದ ರಾಜಕುಮಾರ ವೃತ್ತ ಹಾಗೂ ಮೇದಾರ ಕೇರಿ ರಸ್ತೆ, ಫ್ರೀಡಂ ಪಾರ್ಕ್ ಎದುರು ಭಾಗದಲ್ಲಿ ಪಾಲಿಕೆಯ ಅಧಿಕಾರಿಗಳು, ಸಿಬ್ಬಂದಿಯವರ ಸಹಕಾರದೊಂದಿಗೆ ಫುಟ್‌ಪಾತ್ ತೆರವು ಕಾರ್ಯಾಚರಣೆ ನಡೆಯಿತು.
ಕಾರ್ಯಾಚರಣೆ ವೇಳೆ ಪಾದಚಾರಿ ಮಾರ್ಗದಲ್ಲಿದ್ದ ಅಂಗಡಿ ಫಲಕಗಳು, ಫಾಸ್ಟ್ ಫುಡ್ ಗಾಡಿಗಳು ಹಾಗೂ ಇತರೆ ವಸ್ತುಗಳನ್ನು ತೆರವುಗೊಳಿಸಲಾಯಿತು.
ಪಾದಚಾರಿಗಳು ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುವ ರೀತಿಯಲ್ಲಿ ಪಾದಚಾರಿ ಮಾರ್ಗ ಮತ್ತು ರಸ್ತೆಯ ಮೇಲಿನ ಯಾವುದೇ ವಸ್ತುಗಳನ್ನು ಇಟ್ಟುಕೊಳ್ಳಬಾರದು ಎಂದು ಸಂಬಂಧಿತರಿಗೆ ಕಟ್ಟು ನಿಟ್ಟಿನ ಸೂಚನೆಗಳನ್ನು ನೀಡಲಾಯಿತು.
ಕಾರ್ಯಾಚರಣೆ ವೇಳೆ ಟ್ರಾಫಿಕ್ ಪೊಲೀಸ್ ಠಾಣೆಯ ಸಿಪಿಐ ದೇವರಾಜ್, ಪಾಲಿಕೆಯ ನಲ್ಮ್ ವಿಭಾಗದ ಅನುಪಮ, ಸಿಬ್ಬಂದಿಗಳು ಹಾಗೂ ಟ್ರಾಫಿಕ್ ಪೊಲೀಸ್ ಠಾಣೆಯ ಸಿಬ್ಬಂದಿಗಳು ಭಾಗಿಯಾಗಿದ್ದರು.
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ : 7483162573, yuvadhwanismg@gmail.com













