
ಶಿವಮೊಗ್ಗ: ಫೆ.24ರಿಂದ 28ರ ವರೆಗೆ ಐದು ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ನಡೆಯುವ ಇತಿಹಾಸ ಮತ್ತು ಪುರಾಣ ಪ್ರಸಿದ್ಧವಾದ ಕೋಟೆ ಶ್ರೀ ಮಾರಿಕಾಂಬ ಜಾತ್ರೆಗೆ ಅಂತಿಮ ಕ್ಷಣದ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಕಳೆದ ಬಾರಿಗಿಂತ ಈ ಬಾರಿ ದೇವಾಲಯದಲ್ಲಿ ವಿಶೇಷ ಅಲಂಕಾರವನ್ನು ಮಾಡಲಾಗುತ್ತಿದೆ.
ಕೋಟೆ ಶ್ರೀ ಮಾರಿಕಾಂಬ ದೇವಿಯನ್ನು ಗಾಂಧಿ ಬಜಾರ್‌ನ ತವರು ಮನೆಯಲ್ಲಿ ಮೊದಲ ದಿನ ಪ್ರತಿಷ್ಠಾಪಿಸಲಾಗುತ್ತದೆ. ಅಲ್ಲಿ ನಡೆಯುವ ವಿಶೇಷ ಪೂಜೆ, ದರ್ಶನಕ್ಕೆ ಸಿದ್ಧತೆಗಳನ್ನು ಸಹ ಕೈಗೊಳ್ಳಲಾಗುತ್ತಿದೆ. ಭಕ್ತಾಧಿಗಳಿಗೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಅಂಗವಿಕಲರಿಗೆ, ವಯಸ್ಸಾದವರಿಗೆ ವಿಶೇಷ ಮಾರ್ಗವನ್ನು ಕಲ್ಪಿಸಲಾಗಿದೆ. ಭಕ್ತಾಧಿಗಳಿಗೆ ಮಡಿಲಕ್ಕಿ, ಸೀರೆ ತೆಗೆದುಕೊಳ್ಳಲು ವ್ಯವಸ್ಥಿತವಾಗಿ ಅವಕಾಶ ಹಾಗೂ ಎಲ್ಲಾ ಕಡೆ ಸಿಸಿ ಟಿ.ವಿಯನ್ನು ಸಹ ಅಳವಡಿಸಲಾಗಿದೆ.
ಜಿಲ್ಲಾ ರಕ್ಷಣಾಧಿಕಾರಿ ಕೋಟೆ ಮಾರಿಕಾಂಬ ದೇವಸ್ಥಾನಕ್ಕೆ ಭೇಟಿ ನೀಡಿ, ಜಾತ್ರಾ ಕಮಿಟಿಯವರ ಜೊತೆ ಸಭೆ ನಡೆಸುವ ಮೂಲಕ ಸಾರ್ವಜನಿಕರ ಸುರಕ್ಷತೆಗಾಗಿ ಕೈಗೊಂಡ ಕ್ರಮಗಳ ಬಗ್ಗೆ ಚರ್ಚಿಸಿ, ಬಂದೋಬಸ್ತ್ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ ಸೂಚನೆಯನ್ನು ನೀಡಿದರು.
ನಗರದ ಬಹಳಷ್ಟು ಕಡೆ ಅತ್ಯಂತ ವ್ಯವಸ್ಥಿತವಾಗಿ ನಡೆಸಲಾಗುತ್ತಿರುವ ವಿದ್ಯುತ್ ದೀಪಾಲಂಕಾರ ಜನರ ಕಣ್ಮನ ಸೆಳೆಯುವಂತೆ ಮಾಡುತ್ತಿದೆ.
ದೇಗುಲದಲ್ಲಿ ಬ್ಯೂಟಿಫುಲ್ ಆಗಿ ವಿಭಿನ್ನ ಅಲಂಕಾರ
ಕಳೆದ ಬಾರಿಗಿಂತ ಈ ಬಾರಿ ಜಾತ್ರೆಗೆ ದೇವಾಲಯದಲ್ಲಿ ಬ್ಯೂಟಿಫುಲ್ ಆಗಿ ವಿಭಿನ್ನ ಪರಿಕಲ್ಪನೆಯಲ್ಲಿ ಅಲಂಕಾರಕ್ಕೆ ಒತ್ತು ನೀಡಲಾಗಿದ್ದು, ಈ ಅಲಂಕಾರ ದೇವಸ್ಥಾನಕ್ಕೆ ಬರುವ ಭಕ್ತಾಧಿಗಳನ್ನು ಸೆಳೆಯುತ್ತಿವೆ. ಅಲ್ಲದೇ ಭಕ್ತಾಧಿಗಳು ಈ ಅಲಂಕಾರದ ಫೋಟೋಗಳನ್ನು ತೆಗೆಯುವ ಮೂಲಕ ವಾಟ್ಸಪ್, ಫೆಸ್‌ಬುಕ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗುತ್ತಿದೆ.
ಮಾರಿ ಗದ್ದುಗೆ, ಮಾರಿಕಾಂಬ ದೇವಸ್ಥಾನದ ಒಳಾಂಗಣದಲ್ಲಿ ಕಲ್ಲಂಗಡಿ, ಕಬ್ಬು, ಖರ್ಬೂಜ, ಕೃತಕ ಹೂವುಗಳನ್ನು ಬಳಸಿ ಅಲಂಕಾರ ಮಾಡಲಾಗುತ್ತಿದೆ. ದೇವಸ್ಥಾನದ ಆವರಣದಲ್ಲಿಯೂ ಸಹ ನಡೆಸುತ್ತಿರುವ ಅಲಂಕಾರ ಕಣ್ಮನ ಸೆಳೆಯುತ್ತಿದೆ.
ಅಲಂಕಾರದ ಫೋಟೊಗಳು ಇಲ್ಲಿವೆ.










ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ : 7483162573, yuvadhwanismg@gmail.com













