• About Us
  • Advertise
  • Privacy & Policy
  • Contact Us
Thursday, March 5, 2026
ರಾಕೇಶ್ ಸೋಮಿನಕೊಪ್ಪ ಸಾರಥ್ಯದಲ್ಲಿ
yuvadhwani
Subscribe
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
No Result
View All Result
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
No Result
View All Result
yuvadhwani
No Result
View All Result
  • Home
  • ಶಿವಮೊಗ್ಗ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
Home ಶಿವಮೊಗ್ಗ

ಶಿವಮೊಗ್ಗ ನಗರ, ಗ್ರಾಮಾಂತರದ ಈ ಮಾರ್ಗದಲ್ಲಿ ಸರ್ಕಾರಿ ಸಿಟಿ ಬಸ್ ಓಡಿಸಲು ಕರುನಾಡು ಸಂರಕ್ಷಣಾ ವೇದಿಕೆ ಮನವಿ

ರಾಕೇಶ್ ಸೋಮಿನಕೊಪ್ಪ by ರಾಕೇಶ್ ಸೋಮಿನಕೊಪ್ಪ
February 20, 2026
in ಶಿವಮೊಗ್ಗ
ಶಿವಮೊಗ್ಗ ನಗರ, ಗ್ರಾಮಾಂತರದ ಈ ಮಾರ್ಗದಲ್ಲಿ ಸರ್ಕಾರಿ ಸಿಟಿ ಬಸ್ ಓಡಿಸಲು ಕರುನಾಡು ಸಂರಕ್ಷಣಾ ವೇದಿಕೆ ಮನವಿ
Share on FacebookShare on TwitterShare on WhatsApp

ಶಿವಮೊಗ್ಗ: ಹಲವು ವರ್ಷಗಳ ಹಿಂದೆ ಇದ್ದಂತೆಯೇ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಸರ್ಕಾರಿ ಸಿಟಿ ಬಸ್ ಓಡಿಸುವಂತೆ ಕರುನಾಡು ಸಂರಕ್ಷಣಾ ವೇದಿಕೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಈ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ವೇದಿಕೆ ಜಿಲ್ಲಾಧ್ಯಕ್ಷ ಎಸ್.ಪಿ. ಶಿವಮೂರ್ತಿ, ದಶಕಗಳ ಹಿಂದಿನಿಂದಲೂ ನಗರದಲ್ಲಿ ಸಂಚರಿಸುತ್ತಿದ್ದ ಸರ್ಕಾರಿ ಸಾರಿಗೆ ಬಸ್ ಸಂಚಾರವನ್ನು ಖಾಸಗಿ ಬಸ್’ನವರ ಒತ್ತಡಕ್ಕೆ ಮಣಿದು ನಿಲ್ಲಿಸಲಾಯಿತು. ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದ್ದು, ನಗರದಲ್ಲಿ ಸರ್ಕಾರಿ ಸಿಟಿ ಬಸ್’ಗಳನ್ನು ಮತ್ತೆ ಆರಂಭಿಸಬೇಕು ಎಂದು ಮನವಿ ಮಾಡಿದರು.
ಶಿವಮೊಗ್ಗ ನಗರದ ಕಾಶಿಪುರದಿಂದ ಕರಿಯಣ್ಣ ಬಿಲ್ಡಿಂಗ್, ಪೊಲೀಸ್ ಚೌಕಿ, ಲಕ್ಷ್ಮೀ ಟಾಕೀಸ್ ಮುಖಾಂತರ, ಉಷಾ ನರ್ಸಿಂಗ್ ಹೋಂ, ಸವಳಂಗ ರಸ್ತೆ ಮುಖಾಂತರ ಕೋರ್ಟ್ ಸರ್ಕಲ್, ನೆಹರೂ ರಸ್ತೆಯಿಂದ ಅರ್ಮಿ ಅಹಮದ್ ಸರ್ಕಲ್ ಮುಖಾಂತರ ಮುಖ್ಯ ಬಸ್ ನಿಲ್ದಾಣ ಹಾಗೂ ಬಸ್ಟಾಂಡ್’ನಿಂದ ಅಣ್ಣಾನಗರ, ಟಿಪ್ಪುನಗರ, ಗೋಪಾಳವರೆಗೂ ಸುಮಾರು ವರ್ಷಗಳಿಂದಲೂ ನಗರ ಸಾರಿಗೆ ಬಸ್’ಗಳು ಸಂಚರಿಸುತ್ತಿದ್ದವು. ಆದರೆ, ಮಧ್ಯಂತರದಲ್ಲಿ ಖಾಸಗಿ ಬಸ್’ನವರ ಒತ್ತಡದ ಮೇರೆಗೆ ನಿಲ್ಲಿಸಿಲಾಗಿದೆ ಎಂದು ಆರೋಪಿಸಿದರು.
ಸರ್ಕಾರಿ ನಗರ ಸಾರಿಗೆ ಬಸ್’ಗಳು ಸಾರ್ವಜನಿಕರಿಗೆ ವಯೋವೃದ್ಧರಿಗೆ, ಕೂಲಿ ಕಾರ್ಮಿಕರಿಗೆ, ಶಾಲಾ ಮಕ್ಕಳಿಗೆ ಮತ್ತು ದಿನನಿತ್ಯ ಕೆಲಸಕ್ಕೆ ಬರುವ ಮಹಿಳೆಯರಿಗೆ ಮತ್ತು ಸಾರ್ವಜನಿಕರಿಗೆ ಅನಾನುಕೂಲವಾಗಿತ್ತು. ಸದರಿ ಬಸ್ಸನ್ನು ಮತ್ತು ಶಿವಮೊಗ್ಗ ನಗರಕ್ಕೆ ಬರುವ ರೈಲುಗಳ ವೇಳಾಪಟ್ಟಿಯಂತೆ ಪ್ರತಿಯೊಂದು ರೈಲಿಗೂ ಒಂದೊಂದು ಬಸ್ಸನ್ನು ಓಡಿಸಬೇಕು ಎಂದು ಮನವಿ ಮಾಡಿದ್ದಾರೆ.
ರೈಲು ನಿಲ್ದಾಣದಿಂದ ಮುಖ್ಯ ಬಸ್ ನಿಲ್ದಾಣದವರೆಗೂ ಹಾಗೂ ಶಿವಮೊಗ್ಗ ನಗರದ ಮುಖ್ಯ ಬಸ್ ನಿಲ್ದಾಣದಿಂದ ಬಿಎಚ್ ರಸ್ತೆಯ ಮುಖಾಂತರ ಹೊಳೆ ಬಸ್ ನಿಲ್ದಾಣ, ಗುರುಪುರ, ಪುರಲೆವರೆಗೂ ಮತ್ತು ರಾಗಿಗುಡ್ಡದಿಂದ ನಗರಕ್ಕೆ ಹಾಗೂ ಬೊಮ್ಮನಕಟ್ಟೆಯಿಂದ ಶಿವಮೊಗ್ಗ ನಗರದ ಒಳಗಡೆ ಈ ಕೂಡಲೇ ಸರ್ಕಾರಿ ಬಸ್ಸುಗಳನ್ನು ವ್ಯವಸ್ಥೆ ಮಾಡಿಕೊಡಬೇಕಾಗಿ ಮನವಿ ಮಾಡಿದ್ದಾರೆ.
ಸುಮಾರು ಆರು ತಿಂಗಳ ಹಿಂದೆ ಕೆಎಸ್’ಆರ್’ಟಿಸಿ ವಿಭಾಗೀಯ ಕಚೇರಿಗೆ ಮನವಿ ಸಲ್ಲಿಸಲಾಗಿದೆ. ಆದರೆ, ಖಾಸಗಿ ಬಸ್’ನವರ ಒತ್ತಡಕ್ಕೆ ಮಣಿದು ಸರ್ಕಾರಿ ನಗರ ಸಾರಿಗೆ ಬಸ್ ಸಂಚಾರ ಆರಂಭಿಸದೇ ಅನ್ಯಾಯ ಮಾಡಲಾಗುತ್ತಿದೆ. ತಕ್ಷಣವೇ ಸಾರ್ವಜನಿಕರ ಅನುಕೂಲಕ್ಕಾಗಿ ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಸರ್ಕಾರಿ ನಗರ ಸಾರಿಗೆ ಬಸ್ ಸಂಚಾರ ಆರಂಭಿಸಬೇಕು. ಒಂದು ವೇಳೆ ಇದನ್ನು ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುತ್ತೇವೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ವೇದಿಕೆಯ ಪಿ. ಶಿವಣ್ಣ, ಈಶ್ವರ, ಸಿ. ಮೂರ್ತಿ, ಅರುಣ, ನಿರಂಜನ್, ಶ್ರೀನಿವಾಸ್, ದೇವೇಂದ್ರಪ್ಪ, ನಾಗರಾಜ್, ದೇವರಾಜ್ ಸೇರಿದಂತೆ ಸಂಘಟನೆಯ ಕಾರ್ಯಕರ್ತರುಗಳು ಮತ್ತು ಪದಾಧಿಕಾರಿಗಳು ಇದ್ದರು.

ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ : 7483162573, yuvadhwanismg@gmail.com

Tags: kannada newskannada news livelatest newsmalnad newsshimogashivamoggaಶಿವಮೊಗ್ಗಸರ್ಕಾರಿ ಸಿಟಿ ಬಸ್
Previous Post

ಶಿವಮೊಗ್ಗದಲ್ಲಿ ಮುಂದುವರೆದ ಕಾಡಾನೆ ಹಾವಳಿ!

Next Post

ಶ್ರೀ ಮಾರಿಕಾಂಬ ಜಾತ್ರೆಗೆ ಎಲ್ಲಾ ರೀತಿಯ ಸಹಕಾರ, ವಿವಿಧ ಇಲಾಖೆಯ ಅಧಿಕಾರಿಗಳ ಭರವಸೆ, ಮಹಾನಗರ ಪಾಲಿಕೆ ವತಿಯಿಂದ ದೇಣಿಗೆ

ರಾಕೇಶ್ ಸೋಮಿನಕೊಪ್ಪ

ರಾಕೇಶ್ ಸೋಮಿನಕೊಪ್ಪ

Next Post
ಮಹಾನಗರ ಪಾಲಿಕೆ ವತಿಯಿಂದ ಮಾರಿಕಾಂಬಾ ಸೇವಾ ಸಮಿತಿಗೆ ೧೦ ಲಕ್ಷ ರೂ.ಗಳ ದೇಣಿಗೆ ಚೆಕ್‌ನ್ನು ಆಯುಕ್ತ ಮಾಯಣ್ಣಗೌಡ ಹಾಗೂ ಇತರರು ಸಮಿತಿಯ ಅಧ್ಯಕ್ಷ ಎಸ್.ಕೆ.ಮರಿಯಪ್ಪ, ಹಾಗೂ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ರವರಿಗೆ ನೀಡಿದರು.

ಶ್ರೀ ಮಾರಿಕಾಂಬ ಜಾತ್ರೆಗೆ ಎಲ್ಲಾ ರೀತಿಯ ಸಹಕಾರ, ವಿವಿಧ ಇಲಾಖೆಯ ಅಧಿಕಾರಿಗಳ ಭರವಸೆ, ಮಹಾನಗರ ಪಾಲಿಕೆ ವತಿಯಿಂದ ದೇಣಿಗೆ

  • Trending
  • Comments
  • Latest
ಶಿವಮೊಗ್ಗ | ತುಂಗಾ ನದಿ ಸೇತುವೆ ಮೇಲೆ ಖಾಸಗಿ ಬಸ್-ಟಿಟಿ ಮುಖಾಮುಖಿ ಡಿಕ್ಕಿ

ಶಿವಮೊಗ್ಗ | ತುಂಗಾ ನದಿ ಸೇತುವೆ ಮೇಲೆ ಖಾಸಗಿ ಬಸ್-ಟಿಟಿ ಮುಖಾಮುಖಿ ಡಿಕ್ಕಿ

January 26, 2026
ಶಿವಮೊಗ್ಗ | ಅಂಗಡಿ ಎದುರು ಇಟ್ಟಿದ್ದ ಹಾಲಿನ ಪ್ಯಾಕೆಟ್‌ಗಳನ್ನೂ ಬಿಡದ ಕಳ್ಳ!

ಶಿವಮೊಗ್ಗ | ಅಂಗಡಿ ಎದುರು ಇಟ್ಟಿದ್ದ ಹಾಲಿನ ಪ್ಯಾಕೆಟ್‌ಗಳನ್ನೂ ಬಿಡದ ಕಳ್ಳ!

January 28, 2026
BREAKING NEWS – ಹೊಳೆಹೊನ್ನೂರು | ಒಂದೇ ದಿನ 11 ಮಂದಿಗೆ ಹುಚ್ಚು ನಾಯಿ ಕಡಿತ

BREAKING NEWS – ಹೊಳೆಹೊನ್ನೂರು | ಒಂದೇ ದಿನ 11 ಮಂದಿಗೆ ಹುಚ್ಚು ನಾಯಿ ಕಡಿತ

January 27, 2026
ಕೇಂದ್ರದ ಬಜೆಟ್ | ಬಲ್ಬ್ ಇಲ್ಲದ ಕಂಬದಂತೆ | ಕಾಂಗ್ರೆಸ್‌ನ ಯುವ ಮುಖಂಡ ಸಿ.ಜಿ. ಮಧುಸೂದನ್

ಕೇಂದ್ರದ ಬಜೆಟ್ | ಬಲ್ಬ್ ಇಲ್ಲದ ಕಂಬದಂತೆ | ಕಾಂಗ್ರೆಸ್‌ನ ಯುವ ಮುಖಂಡ ಸಿ.ಜಿ. ಮಧುಸೂದನ್

February 2, 2026

ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆ | ಡಾ.ಧನಂಜಯ ಸರ್ಜಿ ಮಾಹಿತಿ

0
ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆ | ಡಾ.ಧನಂಜಯ ಸರ್ಜಿ ಮಾಹಿತಿ

ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆ | ಡಾ.ಧನಂಜಯ ಸರ್ಜಿ ಮಾಹಿತಿ

0
ಶಿವಮೊಗ್ಗ ಜಿಲ್ಲಾಧಿಕಾರಿ ಹೆಸರಲ್ಲಿ ನಕಲಿ ವಾಟ್ಸಾಪ್ ಸಂದೇಶ | ಜಿಲ್ಲಾಧಿಕಾರಿಗಳ ಸಲಹೆ ಏನು?

ಶಿವಮೊಗ್ಗ ಜಿಲ್ಲಾಧಿಕಾರಿ ಹೆಸರಲ್ಲಿ ನಕಲಿ ವಾಟ್ಸಾಪ್ ಸಂದೇಶ | ಜಿಲ್ಲಾಧಿಕಾರಿಗಳ ಸಲಹೆ ಏನು?

0
ತೀರ್ಥಹಳ್ಳಿ | ಭಾರತೀಪುರ ಕೆರೆ ಸಮೀಪ ಅಪಘಾತ: ಮೂವರು ಸಾವು!

ತೀರ್ಥಹಳ್ಳಿ | ಭಾರತೀಪುರ ಕೆರೆ ಸಮೀಪ ಅಪಘಾತ: ಮೂವರು ಸಾವು!

0
ಶಿಕಾರಿಪುರ | ಶಾಲಾ ಕೊಠಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಶಿಕ್ಷಕ

ಚಲಿಸುತ್ತಿದ್ದ ಬಸ್ ಸೀಟಿನಿಂದ ಹೊರಗೆ ಬಿದ್ದ ಪ್ರಯಾಣಿಕ

March 5, 2026
ರಾಜ್ಯದಲ್ಲಿ `ಅಪ್ರಾಪ್ತ’ ಹೆಸರಿನ ದುರ್ಬಳಕೆ, ಸಂಕೇತ್‍ ಹತ್ಯೆ ಸಮಗ್ರ ತನಿಖೆಯಾಗಲಿ, ಬಜೆಟ್ ಬಗ್ಗೆ ಶಾಸಕ ಚನ್ನಬಸಪ್ಪ ಹೇಳಿದ್ದೇನು?

ರಾಜ್ಯದಲ್ಲಿ `ಅಪ್ರಾಪ್ತ’ ಹೆಸರಿನ ದುರ್ಬಳಕೆ, ಸಂಕೇತ್‍ ಹತ್ಯೆ ಸಮಗ್ರ ತನಿಖೆಯಾಗಲಿ, ಬಜೆಟ್ ಬಗ್ಗೆ ಶಾಸಕ ಚನ್ನಬಸಪ್ಪ ಹೇಳಿದ್ದೇನು?

March 5, 2026
ಬಿಜೆಪಿ ಪ್ರಭಾರಿಗಳಾಗಿ ಆರ್.ಕೆ. ಸಿದ್ದರಾಮಣ್ಣ, ಟಿ.ಡಿ. ಮೇಘರಾಜ್ ನೇಮಕ

ಬಿಜೆಪಿ ಪ್ರಭಾರಿಗಳಾಗಿ ಆರ್.ಕೆ. ಸಿದ್ದರಾಮಣ್ಣ, ಟಿ.ಡಿ. ಮೇಘರಾಜ್ ನೇಮಕ

March 5, 2026
ಶಿವಮೊಗ್ಗ ಲೋಕಲ್ ನ್ಯೂಸ್ ಬೀಟ್

ಶಿವಮೊಗ್ಗ ಲೋಕಲ್ ನ್ಯೂಸ್ ಬೀಟ್

March 5, 2026

Recent News

Facebook Twitter
yuvadhwani

ಶಿವಮೊಗ್ಗ ಸುದ್ದಿಗಳ ಜೊತೆಗೆ ರಾಜ್ಯದ ಪ್ರಚಲಿತ ವಿದ್ಯಮಾನಗಳ ಸುದ್ದಿಗಳನ್ನು ಓದಲು ಯುವಧ್ವನಿ ನ್ಯೂಸ್ ಪೋರ್ಟಲ್ ಗೆ ತಮಗೆ ಸುಸ್ವಾಗತ. ವಿಭಿನ್ನ, ವಿಶೇಷ, ಉತ್ತಮ ಗುಣಮಟ್ಟದ ಸುದ್ದಿಗಳನ್ನು ಓದುಗ ಮನಸ್ಸುಗಳಿಗೆ ಮುಟ್ಟಿಸಲು ಬದ್ದರಾಗಿದ್ದೇವೆ.

Follow Us

Browse by Category

  • Uncategorized
  • ಅಂಕಣಗಳು
  • ಆರೋಗ್ಯ
  • ಕ್ರೈಂ ನ್ಯೂಸ್
  • ತೀರ್ಥಹಳ್ಳಿ
  • ದೇಶ
  • ಭದ್ರಾವತಿ
  • ರಾಜ್ಯ
  • ವಿಶೇಷ
  • ಶಿಕಾರಿಪುರ
  • ಶಿವಮೊಗ್ಗ
  • ಸಾಗರ
  • ಸೊರಬ
  • ಹೊಸನಗರ

Recent News

ಶಿಕಾರಿಪುರ | ಶಾಲಾ ಕೊಠಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಶಿಕ್ಷಕ

ಚಲಿಸುತ್ತಿದ್ದ ಬಸ್ ಸೀಟಿನಿಂದ ಹೊರಗೆ ಬಿದ್ದ ಪ್ರಯಾಣಿಕ

March 5, 2026
ರಾಜ್ಯದಲ್ಲಿ `ಅಪ್ರಾಪ್ತ’ ಹೆಸರಿನ ದುರ್ಬಳಕೆ, ಸಂಕೇತ್‍ ಹತ್ಯೆ ಸಮಗ್ರ ತನಿಖೆಯಾಗಲಿ, ಬಜೆಟ್ ಬಗ್ಗೆ ಶಾಸಕ ಚನ್ನಬಸಪ್ಪ ಹೇಳಿದ್ದೇನು?

ರಾಜ್ಯದಲ್ಲಿ `ಅಪ್ರಾಪ್ತ’ ಹೆಸರಿನ ದುರ್ಬಳಕೆ, ಸಂಕೇತ್‍ ಹತ್ಯೆ ಸಮಗ್ರ ತನಿಖೆಯಾಗಲಿ, ಬಜೆಟ್ ಬಗ್ಗೆ ಶಾಸಕ ಚನ್ನಬಸಪ್ಪ ಹೇಳಿದ್ದೇನು?

March 5, 2026

Copyright © 2026 Yuva Dhwani. Designed by KIPL