ಸಾಗರ : ಮಾರಿಕಾಂಬಾ ಜಾತ್ರೆ ಸಂದರ್ಭದಲ್ಲಿ ಗಾಂಧಿನಗರದ ಸಂಗೊಳ್ಳಿ ರಾಯಣ್ಣ ಕ್ರೀಡಾಂಗಣದಲ್ಲಿ ಉದ್ದೇಶಿತ ತಾತ್ಕಾಲಿಕ ಹೆಲಿಪ್ಯಾಡ್‌ಗೆ ಅವಕಾಶ ನೀಡದಂತೆ ಗಾಂಧಿನಗರ ಬಡಾವಣೆ ನಿವಾಸಿಗಳು ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಫೆ. ೩ರಿಂದ ಪ್ರಾರಂಭವಾಗುವ ಮಾರಿಜಾತ್ರೆ ಸಂದರ್ಭದಲ್ಲಿ ಹೆಲಿ ಟೂರಿಸಂ ಹೆಸರಿನಲ್ಲಿ ಗಾಂಧಿನಗದ ಸಂಗೊಳ್ಳಿ ರಾಯಣ್ಣ ಕ್ರೀಡಾಂಗಣದಲ್ಲಿ ತಾತ್ಕಾಲಿಕ ಹೆಲಿಪ್ಯಾಡ್ ರಚಿಸಲು ಮುಂದಾಗಿರುವುದು ನಮ್ಮ ಗಮನಕ್ಕೆ ಬಂದಿದೆ. ಹೆಲಿಕ್ಯಾಪ್ಟರ್ ಏರಿಳಿಸುವ ವ್ಯವಸ್ಥೆ ಸಂದರ್ಭದಲ್ಲಿ ಸದ್ದು ಮತ್ತು ವಿಪರೀತ ಧೂಳು ಎದ್ದು ಸ್ಥಳೀಯರಿಗೆ ಸಮಸ್ಯೆ ಉಂಟಾಗುವ ಸಾಧ್ಯತೆ ಇರುತ್ತದೆ. ಸ್ಥಳೀಯ ನಿವಾಸಿಗಳಿಗೆ ಇದೊಂದೆ ಆಟದ ಮೈದಾನವಾಗಿದೆ. ಮಹಿಳೆಯರು, ವಯಸ್ಸಾದವರು ಪ್ರತಿದಿನ ಬೆಳಿಗ್ಗೆ ರಾತ್ರಿ ವಾಯುವಿಹಾರ ಮಾಡುತ್ತಾರೆ. ಮೈದಾನಕ್ಕೆ ಹೊಂದಿಕೊಂಡಂತೆ ಶಿವಪ್ಪಲಿಂಗಪ್ಪ ಪ್ರೌಢಶಾಲೆ, ಎದುರು ಭಾಗದಲ್ಲಿ ಗಂಗಾಪರಮೇಶ್ವರಿ ದೇವಸ್ಥಾನ ಇರುತ್ತದೆ. ಸುತ್ತಲೂ ನೂರಾರು ಮನೆಗಳು ಇವೆ. ಇದು ನಾಲ್ಕೈದು ರಸ್ತೆಗಳು ಸೇರುವ ಪ್ರದೇಶ ಆಗಿರುತ್ತದೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಈ ಸಂದರ್ಭದಲ್ಲಿ ಮಂಜುನಾಥ ಜೇಡಿಕುಣಿ, ಎಸ್.ವಿ.ಹಿತಕರ ಜೈನ್ ಮಾತನಾಡಿದರು. ಮನವಿ ಸಲ್ಲಿಕೆ ಸಂದರ್ಭದಲ್ಲಿ ಎಸ್.ವಿ.ಕೃಷ್ಣಮೂರ್ತಿ, ಸುಂದರ ರಾಜ್, ವಿಶ್ವೇಶ್ವರಯ್ಯ ಕೋಳಿವಾಡ, ಮಾ.ಸ.ನಂಜುಂಡಸ್ವಾಮಿ, ಮೋಹನ್ ಪ್ರಕಾಶ್, ಸುರೇಶ್ ಎಚ್.ಪಿ., ಗಣಪತಿ ಎನ್.ಕೆ., ನಂದಕಿಶೋರ್ ಇನ್ನಿತರರು ಹಾಜರಿದ್ದರು.













