• About Us
  • Advertise
  • Privacy & Policy
  • Contact Us
Thursday, March 5, 2026
ರಾಕೇಶ್ ಸೋಮಿನಕೊಪ್ಪ ಸಾರಥ್ಯದಲ್ಲಿ
yuvadhwani
Subscribe
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
No Result
View All Result
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
No Result
View All Result
yuvadhwani
No Result
View All Result
  • Home
  • ಶಿವಮೊಗ್ಗ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
Home ಶಿವಮೊಗ್ಗ

ಶರಾವತಿ ಪಂಪ್ಡ್ ಸ್ಟೋರೇಜ್ | ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಸಭೆ, ಇಲ್ಲಿವೆ ಪ್ರಮುಖ ನಿರ್ಧಾರಗಳು

ರಾಕೇಶ್ ಸೋಮಿನಕೊಪ್ಪ by ರಾಕೇಶ್ ಸೋಮಿನಕೊಪ್ಪ
February 8, 2026
in ಶಿವಮೊಗ್ಗ
ಶರಾವತಿ ಪಂಪ್ಡ್ ಸ್ಟೋರೇಜ್ | ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಸಭೆ, ಇಲ್ಲಿವೆ  ಪ್ರಮುಖ ನಿರ್ಧಾರಗಳು
Share on FacebookShare on TwitterShare on WhatsApp
ಶಿವಮೊಗ್ಗ : ಸಾವಿರಾರು ಹೆಕ್ಟೇರ್ ಅರಣ್ಯ ನಾಶಮಾಡುವ ಮುನ್ನ ಯಾವುದೇ ತಲಸ್ಪರ್ಶಿ ಅಧ್ಯಯನವಿಲ್ಲದೆ 2000 ಮೇಗಾವ್ಯಾಟ್ ಸಾಮಾರ್ಥ್ಯದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಅನುಷ್ಟಾನಕ್ಕೆ ಮುಂದಾಗಿರುವ ಕೆಪಿಸಿಎಲ್ ಧೋರಣೆಯನ್ನು ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಜನರು ಒಕ್ಕೊರಲಿನಿಂದ ವಿರೋಧಿಸುತ್ತಿದ್ದಾರೆ ಎಂದು ಖ್ಯಾತ ಪರಿಸರ ಹೋರಾಟಗಾರ ಪ್ರೊ.ಬಿ.ಎಂ. ಕುಮಾರಸ್ವಾಮಿ ತಿಳಿಸಿದರು.
ಜಿಲ್ಲಾಧಿಕಾರಿ ಕಛೇರಿಯಲ್ಲಿ ಇಂದು ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ಅವರ ನೇತೃತ್ವದಲ್ಲಿ ಹಾಗೂ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರ ಅಧ್ಯಕ್ಷತೆಯಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಸಾಧಕ-ಬಾಧಕ ಕುರಿತು ಕರೆದ ವಿವಿಧ ಪರಿಸರ ಸಂಘಟನೆಗಳ ಪ್ರಮುಖರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಜಗತ್ತಿನ ಎಂಟು ಜೀವ ವೈವಿಧ್ಯ ತಾಣಗಳಲ್ಲಿ ಶರಾವತಿ ಯೋಜನಾ ಪ್ರದೇಶವಿರುವ ಪಶ್ಚಿಮಘಟ್ಟ ಪ್ರಮುಖವಾಗಿದ್ದು, ಈ ಪ್ರದೇಶದಲ್ಲಿ ಪ್ರಸ್ತಾವಿತ ಯೋಜನೆ ಬೇಡವೇ ಬೇಡ ಎಂಬ ಒತ್ತಾಯ ಉಭಯ ಜಿಲ್ಲೆಗಳ ಜನರದ್ದಾಗಿದೆ. ದಕ್ಷಿಣ ಭಾರತದಲ್ಲಿ ಹರಿಯುವ ಎಲ್ಲಾ ನದಿಗಳ ಉಗಮಸ್ಥಾನ ಪಶ್ಚಿಮಘಟ್ಟವಾಗಿದ್ದು, ಈಗಾಗಲೇ ಪಶ್ಚಿಮಘಟ್ಟದ ನಾಶವಾಗಿದೆ.  ಈ ರೀತಿ ಹಾಳು ಮಾಡುತ್ತಾ ಹೋದರೆ ಇಡೀ ಜಗತ್ತಿಗೆ ಕಂಠಕ ಎದುರಾಗಲಿದೆ ಎಂಬ ಎಚ್ಚರಿಕೆ ನೀಡಿದರು.
ಈ ಯೋಜನೆಯಿಂದ ಕೇವಲ 54 ಹೆಕ್ಟೇರ್ ಅರಣ್ಯ ನಾಶವಾಗಲಿದೆ. ಕೇವಲ 16 ಸಾವಿರ ಮರಗಳನ್ನು ಕಡಿಯಲಾಗುವುದು ಎಂಬ ಕೆಪಿಸಿಎಲ್‍ನ ಹೇಳಿಕೆ ಸಂಪೂರ್ಣ ಸುಳ್ಳು. ಈಗಾಗಲೇ ಶರಾವತಿ ಕಣಿವೆಯಲ್ಲಿ 18 ಸಾವಿರ ಎಕರೆ ಅರಣ್ಯ ನಾಶವಾಗಿದೆ. ಗೇರುಸೊಪ್ಪ ಜಲಾಶಯ ನಿರ್ಮಾಣಕ್ಕೆ 600 ಹೆಕ್ಟೇರ್ ಅರಣ್ಯ ನಾಶವಾಗಿದೆ. ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯ ಅಧಿಕಾರಿಗಳಲ್ಲೊಬ್ಬರಾದ ಪ್ರಣೀತಪೌಲ್ ಎಂಬುವವರು ಈ ಪ್ರದೇಶದ ಅಧ್ಯಯನ ಮಾಡಿ ಇಲ್ಲಿ ಸುಮಾರು 700ಕ್ಕೂ ಹೆಚ್ಚು ಸಿಂಗಳಿಕಗಳಿವೆ. ಅತ್ಯಂತ ವಿನಾಶದ ಅಂಚಿನಲ್ಲಿರುವ ಮಂಗಟ್ಟೆ ಹಕ್ಕಿಗಳಿವೆ. ಇಂತಹ ಸೂಕ್ಷ್ಮಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳ ಕೂಡದು ಎಂದು  ಅವರು ವರದಿ ನೀಡಿದ್ದಾರೆ. ಆದರೆ ಆ ವರದಿಯನ್ನು ಕೆಪಿಸಿಎಲ್ ಪರಿಗಣಿಸದೆ ಮಾರಕ ಯೋಜನೆಗೆ ಮುಂದಾಗಿರುವುದು ಅಕ್ಷಮ್ಯ ಅಪರಾಧ ಎಂದರು.
ಅರಣ್ಯನಾಶದ ಬದಲಾಗಿ ಬ್ಯಾಟರಿ ಎನರ್ಜಿ, ಅಸಂಪ್ರದಾಯ ಇಂಧನ ಬಳಸಿ ವಿದ್ಯುತ್ತನ್ನು ಉತ್ಪಾದಿಸುವತ್ತ ಕೆಪಿಸಿಎಲ್ ಗಮನಹರಿಸಬೇಕು. ಅವರು ಹೇಳಿರುವ ಹಾಗೆ ರಾಜ್ಯದ ಏಳು ಬೇರೆ ಬೇರೆ ಸ್ಥಳಗಳಲ್ಲಿರುವ ಬ್ಯಾಟರಿ ಎನರ್ಜಿ ಕೇಂದ್ರಗಳಲ್ಲಿ ಇದಕ್ಕೆ ಬೇಕಾಗುವ ಯಂತ್ರಗಳನ್ನು ಅಳವಡಿಸಿಕೊಳ್ಳಬೇಕು. ಈಗಾಗಲೇ ಐದು ಗಿಗಾಮೆಗಾವ್ಯಾಟ್ ಬ್ಯಾಟರಿ ಎನರ್ಜಿ ಉತ್ಪಾದನಾ ಕೇಂದ್ರದ  ಉದ್ಘಾಟನೆಯನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ನೆರವೇರಿಸಿದ್ದಾರೆ. ಅದರಂತೆ ವಿದ್ಯುತ್ ಉತ್ಪಾದನೆಗೆ ಅರಣ್ಯನಾಶ ಬಿಟ್ಟು ಅನ್ಯ ಮಾರ್ಗವನ್ನು ಅನುಸರಿಸಬೇಕು ಎಂದು ಸಲಹೆ ನೀಡಿದರು.
ವನ್ಯಪ್ರಾಣಿಗಳಿಗೆ ಅನುಕೂಲವಾಗುವಂತೆ ಕೆನೋಪಿ ನಿರ್ಮಾಣ ಅವೈಜ್ಞಾನಿಕವಾಗಿದೆ. ಕೆಪಿಸಿಎಲ್ ನುಡಿದಂತೆ ನಡೆದುಕೊಳ್ಳದ ಇಲಾಖೆಯಾಗಿದೆ. ಹಸುವಿನ ಹಾಲು ಕರೆಯುವ ಬದಲು ಅದರ ಕೆಚ್ಚಲನ್ನೇ ಕೊಯ್ಯುಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ವಿ. ಅಭಿಷೇಕ್, ರಾಷ್ಟ್ರಭಕ್ತರ ಬಳಗದ ಕೆ.ಎಸ್. ಈಶ್ವರಪ್ಪ, ಕೆ.ಇ.ಕಾಂತೇಶ್, ಈ.ವಿಶ್ವಾಸ್, ಮೋಹನ್ ಜಾದವ್, ಪ್ರಮುಖರಾದ ಶೇಖರ್ ಗೌಳೇರ್, ಗಿರೀಶ್‍ಪಟೇಲ್, ರಮೇಶ್‍ಬಾಬು, ಕೆಪಿಸಿಎಲ್ ಅಧಿಕಾರಿಗಳಾದ ವಿಜಯ್ ಮೊದಲಾದವರಿದ್ದರು.
Tags: DCkannada newskannada news livekseshwarappalatest newsmalnad newsSharavathi Pumped Storageshimogashivamogga
Previous Post

ಊರುಗಡೂರು ಬಳಿ ಧಗ ಧಗನೆ ಹೊತ್ತಿ ಉರಿದ ಅಂಗಡಿ

Next Post

ಪರೀಕ್ಷಾ ಒತ್ತಡ ನಿವಾರಣೆಗೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು ಇಲ್ಲಿವೆ

ರಾಕೇಶ್ ಸೋಮಿನಕೊಪ್ಪ

ರಾಕೇಶ್ ಸೋಮಿನಕೊಪ್ಪ

Next Post
ಪರೀಕ್ಷಾ ಒತ್ತಡ ನಿವಾರಣೆಗೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು ಇಲ್ಲಿವೆ

ಪರೀಕ್ಷಾ ಒತ್ತಡ ನಿವಾರಣೆಗೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು ಇಲ್ಲಿವೆ

  • Trending
  • Comments
  • Latest
ಶಿವಮೊಗ್ಗ | ತುಂಗಾ ನದಿ ಸೇತುವೆ ಮೇಲೆ ಖಾಸಗಿ ಬಸ್-ಟಿಟಿ ಮುಖಾಮುಖಿ ಡಿಕ್ಕಿ

ಶಿವಮೊಗ್ಗ | ತುಂಗಾ ನದಿ ಸೇತುವೆ ಮೇಲೆ ಖಾಸಗಿ ಬಸ್-ಟಿಟಿ ಮುಖಾಮುಖಿ ಡಿಕ್ಕಿ

January 26, 2026
ಶಿವಮೊಗ್ಗ | ಅಂಗಡಿ ಎದುರು ಇಟ್ಟಿದ್ದ ಹಾಲಿನ ಪ್ಯಾಕೆಟ್‌ಗಳನ್ನೂ ಬಿಡದ ಕಳ್ಳ!

ಶಿವಮೊಗ್ಗ | ಅಂಗಡಿ ಎದುರು ಇಟ್ಟಿದ್ದ ಹಾಲಿನ ಪ್ಯಾಕೆಟ್‌ಗಳನ್ನೂ ಬಿಡದ ಕಳ್ಳ!

January 28, 2026
BREAKING NEWS – ಹೊಳೆಹೊನ್ನೂರು | ಒಂದೇ ದಿನ 11 ಮಂದಿಗೆ ಹುಚ್ಚು ನಾಯಿ ಕಡಿತ

BREAKING NEWS – ಹೊಳೆಹೊನ್ನೂರು | ಒಂದೇ ದಿನ 11 ಮಂದಿಗೆ ಹುಚ್ಚು ನಾಯಿ ಕಡಿತ

January 27, 2026
ಕೇಂದ್ರದ ಬಜೆಟ್ | ಬಲ್ಬ್ ಇಲ್ಲದ ಕಂಬದಂತೆ | ಕಾಂಗ್ರೆಸ್‌ನ ಯುವ ಮುಖಂಡ ಸಿ.ಜಿ. ಮಧುಸೂದನ್

ಕೇಂದ್ರದ ಬಜೆಟ್ | ಬಲ್ಬ್ ಇಲ್ಲದ ಕಂಬದಂತೆ | ಕಾಂಗ್ರೆಸ್‌ನ ಯುವ ಮುಖಂಡ ಸಿ.ಜಿ. ಮಧುಸೂದನ್

February 2, 2026

ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆ | ಡಾ.ಧನಂಜಯ ಸರ್ಜಿ ಮಾಹಿತಿ

0
ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆ | ಡಾ.ಧನಂಜಯ ಸರ್ಜಿ ಮಾಹಿತಿ

ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆ | ಡಾ.ಧನಂಜಯ ಸರ್ಜಿ ಮಾಹಿತಿ

0
ಶಿವಮೊಗ್ಗ ಜಿಲ್ಲಾಧಿಕಾರಿ ಹೆಸರಲ್ಲಿ ನಕಲಿ ವಾಟ್ಸಾಪ್ ಸಂದೇಶ | ಜಿಲ್ಲಾಧಿಕಾರಿಗಳ ಸಲಹೆ ಏನು?

ಶಿವಮೊಗ್ಗ ಜಿಲ್ಲಾಧಿಕಾರಿ ಹೆಸರಲ್ಲಿ ನಕಲಿ ವಾಟ್ಸಾಪ್ ಸಂದೇಶ | ಜಿಲ್ಲಾಧಿಕಾರಿಗಳ ಸಲಹೆ ಏನು?

0
ತೀರ್ಥಹಳ್ಳಿ | ಭಾರತೀಪುರ ಕೆರೆ ಸಮೀಪ ಅಪಘಾತ: ಮೂವರು ಸಾವು!

ತೀರ್ಥಹಳ್ಳಿ | ಭಾರತೀಪುರ ಕೆರೆ ಸಮೀಪ ಅಪಘಾತ: ಮೂವರು ಸಾವು!

0
ಶಿಕಾರಿಪುರ | ಶಾಲಾ ಕೊಠಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಶಿಕ್ಷಕ

ಚಲಿಸುತ್ತಿದ್ದ ಬಸ್ ಸೀಟಿನಿಂದ ಹೊರಗೆ ಬಿದ್ದ ಪ್ರಯಾಣಿಕ

March 5, 2026
ರಾಜ್ಯದಲ್ಲಿ `ಅಪ್ರಾಪ್ತ’ ಹೆಸರಿನ ದುರ್ಬಳಕೆ, ಸಂಕೇತ್‍ ಹತ್ಯೆ ಸಮಗ್ರ ತನಿಖೆಯಾಗಲಿ, ಬಜೆಟ್ ಬಗ್ಗೆ ಶಾಸಕ ಚನ್ನಬಸಪ್ಪ ಹೇಳಿದ್ದೇನು?

ರಾಜ್ಯದಲ್ಲಿ `ಅಪ್ರಾಪ್ತ’ ಹೆಸರಿನ ದುರ್ಬಳಕೆ, ಸಂಕೇತ್‍ ಹತ್ಯೆ ಸಮಗ್ರ ತನಿಖೆಯಾಗಲಿ, ಬಜೆಟ್ ಬಗ್ಗೆ ಶಾಸಕ ಚನ್ನಬಸಪ್ಪ ಹೇಳಿದ್ದೇನು?

March 5, 2026
ಬಿಜೆಪಿ ಪ್ರಭಾರಿಗಳಾಗಿ ಆರ್.ಕೆ. ಸಿದ್ದರಾಮಣ್ಣ, ಟಿ.ಡಿ. ಮೇಘರಾಜ್ ನೇಮಕ

ಬಿಜೆಪಿ ಪ್ರಭಾರಿಗಳಾಗಿ ಆರ್.ಕೆ. ಸಿದ್ದರಾಮಣ್ಣ, ಟಿ.ಡಿ. ಮೇಘರಾಜ್ ನೇಮಕ

March 5, 2026
ಶಿವಮೊಗ್ಗ ಲೋಕಲ್ ನ್ಯೂಸ್ ಬೀಟ್

ಶಿವಮೊಗ್ಗ ಲೋಕಲ್ ನ್ಯೂಸ್ ಬೀಟ್

March 5, 2026

Recent News

Facebook Twitter
yuvadhwani

ಶಿವಮೊಗ್ಗ ಸುದ್ದಿಗಳ ಜೊತೆಗೆ ರಾಜ್ಯದ ಪ್ರಚಲಿತ ವಿದ್ಯಮಾನಗಳ ಸುದ್ದಿಗಳನ್ನು ಓದಲು ಯುವಧ್ವನಿ ನ್ಯೂಸ್ ಪೋರ್ಟಲ್ ಗೆ ತಮಗೆ ಸುಸ್ವಾಗತ. ವಿಭಿನ್ನ, ವಿಶೇಷ, ಉತ್ತಮ ಗುಣಮಟ್ಟದ ಸುದ್ದಿಗಳನ್ನು ಓದುಗ ಮನಸ್ಸುಗಳಿಗೆ ಮುಟ್ಟಿಸಲು ಬದ್ದರಾಗಿದ್ದೇವೆ.

Follow Us

Browse by Category

  • Uncategorized
  • ಅಂಕಣಗಳು
  • ಆರೋಗ್ಯ
  • ಕ್ರೈಂ ನ್ಯೂಸ್
  • ತೀರ್ಥಹಳ್ಳಿ
  • ದೇಶ
  • ಭದ್ರಾವತಿ
  • ರಾಜ್ಯ
  • ವಿಶೇಷ
  • ಶಿಕಾರಿಪುರ
  • ಶಿವಮೊಗ್ಗ
  • ಸಾಗರ
  • ಸೊರಬ
  • ಹೊಸನಗರ

Recent News

ಶಿಕಾರಿಪುರ | ಶಾಲಾ ಕೊಠಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಶಿಕ್ಷಕ

ಚಲಿಸುತ್ತಿದ್ದ ಬಸ್ ಸೀಟಿನಿಂದ ಹೊರಗೆ ಬಿದ್ದ ಪ್ರಯಾಣಿಕ

March 5, 2026
ರಾಜ್ಯದಲ್ಲಿ `ಅಪ್ರಾಪ್ತ’ ಹೆಸರಿನ ದುರ್ಬಳಕೆ, ಸಂಕೇತ್‍ ಹತ್ಯೆ ಸಮಗ್ರ ತನಿಖೆಯಾಗಲಿ, ಬಜೆಟ್ ಬಗ್ಗೆ ಶಾಸಕ ಚನ್ನಬಸಪ್ಪ ಹೇಳಿದ್ದೇನು?

ರಾಜ್ಯದಲ್ಲಿ `ಅಪ್ರಾಪ್ತ’ ಹೆಸರಿನ ದುರ್ಬಳಕೆ, ಸಂಕೇತ್‍ ಹತ್ಯೆ ಸಮಗ್ರ ತನಿಖೆಯಾಗಲಿ, ಬಜೆಟ್ ಬಗ್ಗೆ ಶಾಸಕ ಚನ್ನಬಸಪ್ಪ ಹೇಳಿದ್ದೇನು?

March 5, 2026

Copyright © 2026 Yuva Dhwani. Designed by KIPL