ರಾಕೇಶ್ ಸೋಮಿನಕೊಪ್ಪ ಸಾರಥ್ಯದಲ್ಲಿ

ಶಿವಮೊಗ್ಗ ಲೋಕಲ್ ನ್ಯೂಸ್ ಬೀಟ್

ಮಾರಿಕಾಂಬೆಗೆ ಕುಂಭಾಭಿಷೇಕ

ಶಿವಮೊಗ್ಗ: ಕೋಟೆ ಶ್ರೀ ಮಾರಿಕಾಂಬ ದೇವಾಲಯದಲ್ಲಿ ಮಾ.6 ರಂದು ಮಾರಿಕಾಂಬೆಗೆ ಕುಂಭಾಭಿಷೇಕ ನಡೆಯಲಿದೆ ಎಂದು ಕೋಟೆ ಮಾರಿಕಾಂಬ ಸೇವಾ ಸಮಿತಿ ತಿಳಿಸಿದೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಸಮಿತಿ ಪ್ರಧಾನ ಕಾರ್ಯದರ್ಶಿ ಎನ್‌.ಮಂಜುನಾಥ್‌ ಅವರು, ಮಾ.5 ರ ಗುರುವಾರ ಸಂಜೆ 5 ಕ್ಕೆ ಸುಹಾಸಿನಿಯರಿಂದ ಕಲಶ ಸಹಿತ ಗಂಗೆ ಪೂಜೆ, ಪುಣ್ಯಾಹ, ಬ್ರಹ್ಮ ಕಲಶ ಸ್ಥಾಪನೆ ಇತ್ಯಾಗಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಮಾ.6 ರಂದು ಬೆಳಗ್ಗೆ 8 ರಿಂದ  ಕಲಾ ತತ್ವನ್ಯಾಸ, ಕಲಾ ಹೋಮ, ದುರ್ಗಾ ಹೋಮ, ಕುಂಭಾಭಿಷೇಕ, ಬ್ರಹ್ಮಕಲಶಾಭಿಷೇಕ ಮಧ್ಯಾಹ್ನ 12 ಕ್ಕೆ ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆ ಇರುತ್ತದೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಅವರು ಕೋರಿದ್ದಾರೆ.

ಶಿವಮೊಗ್ಗದಲ್ಲಿ ಉಚಿತ ಶ್ರವಣ ಪರೀಕ್ಷಾ ಶಿಬಿರ 31 ರವರೆಗೆ

ಶಿವಮೊಗ್ಗ: ವಿಶ್ವ ಶ್ರವಣ ದಿನದ ಅಂಗವಾಗಿ, ಶ್ರವಣ ಆರೋಗ್ಯದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ತಿಲಕ್ ನಗರದ ಶ್ರವಣ ಹಿಯರಿಂಗ್ ಏಡ್ ಸೆಂಟರ್ ಮತ್ತು ಸಾಗರದ ಹೊಸ ಖಾಸಗಿ ಬಸ್ ನಿಲ್ದಾಣ ಸೆಂಟರ್ ನಲ್ಲಿ ಉಚಿತ ಶ್ರವಣ ಪರೀಕ್ಷಾ ಶಿಬಿರವನ್ನು ಆಯೋಜಿಸಲಾಗಿದೆ. ಈ ಉಚಿತ ಶಿಬಿರವು 2026 ಮಾರ್ಚ್ 31ರವರೆಗೆ ನಡೆಯಲಿದೆ.
ಶ್ರವಣ ಸಮಸ್ಯೆ ಅನುಭವಿಸುತ್ತಿರುವವರು ಈ ಉಚಿತ ಪರೀಕ್ಷಾ ಶಿಬಿರದ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಕೇಂದ್ರದ ಅರುಣ್ ಅವರು ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9886002083 ಶಿವಮೊಗ್ಗ ಮತ್ತು 9405338800 ಸಾಗರ ಈ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ‌.
ಬಂಜಾರ ಸಂಘಕ್ಕೆ ಕೆ.ಬಿ.ಅಶೋಕ ನಾಯ್ಕ ರಾಜಿನಾಮೆ, ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವಂತೆ  ಮನವಿ
ಶಿವಮೊಗ್ಗ: ಜಿಲ್ಲಾ ಬಂಜಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಕೆ.ಬಿ.ಅಶೋಕ ನಾಯ್ಕ ಅವರು ರಾಜಿನಾಮೆ ನೀಡಿದ್ದು, ಸಂಘದ ಜಿಲ್ಲಾ ಅಧ್ಯಕ್ಷರ ಸ್ಥಾನದಲ್ಲಿ ಮುಂದುವರೆಸುವಂತೆ ಸಂಘದ ಪದಾಧಿಕಾರಿಗಳು, ನಿರ್ದೇಶಕರು ಹಾಗೂ ಸಂಘದ ಸದಸ್ಯರು ಸಮಾಜದ ಮುಖಂಡರೊಂದಿಗೆ ಸೇರಿ ಈಚೆಗೆ ಸಂಘದ ಕಚೇರಿಯಲ್ಲಿ ತುರ್ತು ಸಭೆ ನಡೆಸಿ ಕೆ.ಬಿ‌.ಅಶೋಕ್ ನಾಯ್ಕ ಅವರಿಗೆ ತಮ್ಮ ರಾಜಿನಾಮೆ ಪತ್ರವನ್ನು ಹಿಂಪಡೆಯುವಂತೆ ಮನವಿ ಮಾಡಲಾಗಿದೆ. ಅದೇ ರೀತಿ, ಅಶೋಕ್ ನಾಯ್ಕ ಅವರು ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯಲು ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಲಾಗಿದೆ ಎಂದು ಸಂಘದ ಕಾರ್ಯದರ್ಶಿ ಕೆ.ಆನಂದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

5ಕ್ಕೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸುವರ್ಣ ಮಹೋತ್ಸವ ಕಾರ್ಯಕ್ರಮ

ಶಿವಮೊಗ್ಗ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಾರ್ಚ್ 5 ರಂದು ಬೆಳಿಗ್ಗೆ 10 ಗಂಟೆಗೆ ಸ್ನೇಹ ಸಮುದಾಯ ಭವನ, ಚರ್ಚ್ ಆವರಣ, ಬಿ.ಹೆಚ್. ರಸ್ತೆಯಲ್ಲಿ ನಿರ್ಮಲ ಸೇವಾಕೇಂದ್ರ ಸಂಸ್ಥೆಯ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸುವರ್ಣ ಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ.
ಕಾರ್ಯಕ್ರಮಕ್ಕೆ ನಮ್ಮ ನಿರ್ಮಲ ಸೇವಾ ಸಂಸ್ಥೆಯ ಗಣ್ಯ ಅತಿಥಿಗಳ ಆಗಮನ ಮತ್ತು ಸನ್ಮಾನ ಕಾರ್ಯಕ್ರಮ ಇರುತ್ತದೆ ಹಾಗೂ ವಿವಿಧ ಹಳ್ಳಿಗಳಿಂದ ಸ್ವ-ಸಹಾಯ ಸಂಘದ ಮಹಿಳೆಯರು ಆಗಮಿಸುತ್ತಾರೆ ಎಂದು ಸಂಸ್ಥೆಯ ನಿರ್ದೇಶಕರಾದ ಸಿಸ್ಟರ್ ಎಲೀಜ್‌ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್‌ ಕಾರ್ಯದರ್ಶಿಗಳಾದ ನಾಜಿಮಾ, ವೈ. ತಿಮ್ಮರಾಜು ಪಕ್ಷದಿಂದ ಉಚ್ಚಾಟನೆ
ಶಿವಮೊಗ್ಗ: ಜಿಲ್ಲಾ ಕಾಂಗ್ರೆಸ್‌ ಕಾರ್ಯದರ್ಶಿಗಳಾದ ನಾಜಿಮಾ ಹಾಗೂ ವೈ. ತಿಮ್ಮರಾಜು ಅವರು ಅಸ್ಮಾ ಬಾನು ಎಂಬುವವರಿಗೆ ಗುತ್ತಿಗೆ ಆಧಾರದಲ್ಲಿ ಕೆಲಸ ಕೊಡಿಸುವುದಾಗಿ 3 ಲಕ್ಷ ಹಣ ಪಡೆದು ಪಕ್ಷದ ಹೆಸರು, ಜಿಲ್ಲಾ ಉಸ್ತುವಾರಿ ಸಚಿವರ ಹೆಸರು ಹಾಗೂ ವಿಧಾನ ಪರಿಷತ್‌ನ ಸದಸ್ಯರ ಹೆಸರನ್ನು ದುರುಪಯೋಗ ಪಡೆಸಿಕೊಂಡಿರುತ್ತಾರೆ. ಇವರ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದರಿಂದ ಪಕ್ಷಕ್ಕೆ ಮುಜುಗರವಾಗಿದೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷರಾದ ಶ್ವೇತಾ ಬಂಡಿ ಅವರು, ನಾಜಿಮಾ ರವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಪತ್ರ ಬರೆದಿದ್ದಾರೆ. ಆದ್ದರಿಂದ ನಾಜಿಮಾ ಹಾಗೂ ವೈ. ತಿಮ್ಮರಾಜು ರವರನ್ನು ಕಾಂಗ್ರೆಸ್ ಪಕ್ಷದಿಂದ 6 ವರ್ಷಗಳ ವರಗೆ ಉಚ್ಚಾಟನೆ ಮಾಡುವಂತೆ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಆರ್. ಪ್ರಸನ್ನ ಕುಮಾರ್ ರವರು ಆದೇಶ ಹೊರಡಿಸಿದ್ದಾರೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಎಸ್‌.ಟಿ.ಹಾಲಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾ.7ರಂದು 32ನೇ ವರ್ಧಂತ್ಯೋತ್ಸವ

ಶಿವಮೊಗ್ಗ : ವಿನೋಬನಗರದ ಚಾಚಾ ನೆಹರು ಪಾರ್ಕ್ ಆವರಣದಲ್ಲಿರುವ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದ ಶ್ರೀ ಸ್ವಾಮಿಯ ಸ್ಥಿರಮೂರ್ತಿ ಪ್ರತಿಷ್ಠಾಪನೆಯ 32ನೇ ವರ್ಧಂತ್ಯೋತ್ಸವ ಸಮಾರಂಭವು ಮಾ.7ರಂದು ಜರುಗಲಿದೆ.

ಅಂದು ಬೆಳಿಗ್ಗೆ 8ಗಂಟೆಯಿಂದ ಶ್ರೀ ಸ್ವಾಮಿ ಸನ್ನಿಧಿಯಲ್ಲಿ ಗಣಪತಿ ಪೂಜೆ, ಪುಣ್ಯಾಹ ವಾಚನ, ದೇವನಾಂದಿ, ಋತ್ವಿಕ್ ವರ್ಣನೆ, ಬ್ರಹ್ಮ ಕಳಸ ಸ್ಥಾಪನೆ, ನವಗ್ರಹ ಪೂರ್ವಕ ಅಧಿವಾಸ ಹೋಮ, ಕಲಾತತ್ವ ಹೋಮ, ಪ್ರಕಾರ ಪಲ್ಲಕ್ಕಿ ಉತ್ಸವ, ಬ್ರಹ್ಮ ಕುಂಭಾಭಿಷೆಕ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಇರುತ್ತದೆ. ಸಂಜೆ 6ಗಂಟೆಗೆ  ಶಿವಮೊಗ್ಗದ ವಿನೋಬನಗರದ ಶ್ರೀ ಗೌರಿ ಕಲಾ ಕೇಂದ್ರದ ಭರತ ನಾಟ್ಯ ನೃತ್ಯ ಗುರು ಶ್ರೀಮತಿ ಕವಿತರಾಣಿ ಜಗದೀಶ್ ಮತ್ತು ಅವರ ತಂಡದಿಂದ ಭರತನಾಟ್ಯ ಕಾರ್ಯಕ್ರಮ.

ಈ ದೇವತಾ ಕಾರ್ಯಕ್ಕೆ ಭಕ್ರಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ದೇವಸ್ಥಾನದ ಚೈತನ್ಯ ಸಮಿತಿ ಅಧ್ಯಕ್ಷ ಕೆ.ಸಿ.ಬಿ.ಪಿಳ್ಳೈ ಹಾಗೂ ಪ್ರಧಾನ ಕಾರ್ಯದರ್ಶಿ ಎಚ್.ಎಂ.ಚಂದ್ರಪ್ಪ ಕೋರಿದ್ದಾರೆ.

ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 7483162573, yuvadhwanismg@gmail.com
Next Post
  • Trending
  • Comments
  • Latest

Recent News