ಶಿವಮೊಗ್ಗ: ನಗರದಲ್ಲಿ ಮುಂಜಾನೆ ಸಮಯದಲ್ಲಿ ಹಾಲಿನ ಪ್ಯಾಕೆಟ್ಗಳನ್ನು ಕದ್ದೊಯ್ದಿರುವ ಘಟನೆ ಸವಳಂಗ ರಸ್ತೆಯಲ್ಲಿರುವ ನಂದಿನಿ ಹಾಲಿನ ಡೈರಿಯ ಬಳಿ ನಡೆದಿದೆ.
ಸವಳಂಗ ರಸ್ತೆಯಲ್ಲಿರುವ ನಂದಿನಿ ಹಾಲಿನ ಡೈರಿ ಬಳಿ ಮುಂಜಾನೆ ಡೈರಿಯ ಮುಂಭಾಗ ಹಾಲಿನ ಕ್ರೇಟ್ಗಳನ್ನು ಇಡಲಾಗಿತ್ತು. ಈ ವೇಳೆ ಬೈಕ್ನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ಯಾರೂ ಇಲ್ಲದ ಸಮಯ ನೋಡಿ ಹಾಲಿನ ಪ್ಯಾಕೆಟ್ಗಳನ್ನು ಕದ್ದು ಪರಾರಿಯಾಗಿದ್ದಾನೆ.
ಸಿಸಿಟಿವಿಯಲ್ಲಿ ಕಳ್ಳನ ಕೈಚಳಕ ಸೆರೆ:
ಬೈಕ್ನಲ್ಲಿ ಬಂದ ಕಳ್ಳ ಹಾಲಿನ ಪ್ಯಾಕೆಟ್ ಕಳ್ಳತನ ಮಾಡುತ್ತಿರುವ ದೃಶ್ಯವು ಡೈರಿಯ ಮುಂಭಾಗ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕಿಲಾಡಿ ಕಳ್ಳನ ಪತ್ತೆಗಾಗಿ ಪೊಲೀಸರು ಮುಂದಾಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆ ನಡೆಯುತ್ತಿದೆ.













