ಶಿವಮೊಗ್ಗ: ಶಿವಮೊಗ್ಗ, ಸಾಗರದಲ್ಲಿ ನಡೆದ ಮಾರಿಹಬ್ಬಕ್ಕೆ ಸಾರ್ವಜನಿಕರಿಗೆ ಓಡಾಡಲು ಬೆಂಗಳೂರಿನಿಂದ ವಿಶೇಷ ರೈಲು ಸಂಚಾರಕ್ಕೆ ಅವಕಾಶ ಕಲ್ಪಿಸಿದ ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ರವರಿಗೆ ಜಿಲ್ಲಾ ಸಂಗೊಳ್ಳಿರಾಯಣ್ಣ ಕುರುಬರ ವೇದಿಕೆ ಅಧ್ಯಕ್ಷ ರಾಮಕೃಷ್ಣ ಮೂಡ್ಲಿ ಮತ್ತು ಈ ಸಂಘದ ನಿಕಟಪೂರ್ವ ಅಧ್ಯಕ್ಷ ಸಿ.ಹೆಚ್. ಮಾಲತೇಶ್ ಅಭಿನಂದನೆ ಸಲ್ಲಿಸಿದ್ದಾರೆ.
ಶಿವಮೊಗ್ಗ ನಗರದ ಸುತ್ತಮುತ್ತಲಿನ ಪ್ರದೇಶಗಳಿಂದ ಹಬ್ಬಗಳಿಗೆ ಹೋಗಿಬರಲು ಅನುಕೂಲವಾಗುವಂತೆ ಬೆಂಗಳೂರಿ ನಿಂದ ವಿಶೇಷ ರೈಲು ಸಂಚಾರವನ್ನು ಕಲ್ಪಿಸಿ, ಸುಮಾರು 1 ಲಕ್ಷ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಇದರಿಂದ ಪ್ರಯಾಣಿಕರು ಸುಗಮವಾಗಿ ಪ್ರಯಾಣಿಸಿದ್ದಾರೆ. ಮುಂದಿನ ದಿನಗಳಲ್ಲಿ ನಡೆಯುವ ಎಲ್ಲಾ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಿಗೂ ಇದೇ ರೀತಿಯ ಸಹಕಾರ ನೀಡುತ್ತೀರೆಂದು ಈ ಎಲ್ಲಾ ಪ್ರಯಾಣಿಕರ ಪರವಾಗಿ ನಾವು ಇವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 7483162573, yuvadhwanismg@gmail.com













