ತೀರ್ಥಹಳ್ಳಿ: ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಕಂಪ್ಯೂಟರ್ ಕಲಿಕೆ ಅಗತ್ಯ. ಉಪಕರಣಗಳನ್ನು ಜೋಪಾನವಾಗಿ ಬಳಕೆ ಮಾಡಿಕೊಂಡು ಅದರ ನಿರ್ವಹಣೆಯನ್ನು ಕಾಲಕಾಲಕ್ಕೆ ಮಾಡಬೇಕು ಎಂದು ಲಯನ್ಸ್ ಕ್ಲಬ್ ಬೆಂಗಳೂರು ಮೆಟ್ರೊ ಅಧ್ಯಕ್ಷ ರಾಮಚಂದ್ರಯ್ಯ ಹೇಳಿದರು.
ಲಯನ್ಸ್ ಕ್ಲಬ್ ಹೊಸನಗರ ಸಹಯೋಗದಲ್ಲಿ ಕಲ್ಕೊಪ್ಪ ತಿಪ್ಪೇಸ್ವಾಮಿ ಕನ್ನಡ ಮಾಧ್ಯಮ ಪ್ರೌಢಶಾಲೆ, ಕನ್ನಂಗಿ ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆ, ಕುಡುಮಲ್ಲಿಗೆ ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆಗಳಿಗೆ ಕಂಪ್ಯೂಟರ್ ವಿತರಣೆ ಮತ್ತು ದಂತ ತಪಾಸಣಾ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಧರ್ಮಪ್ಪ, ಬೇಗುವಳ್ಳಿ ಸತೀಶ್, ಸಾಲೇಕೊಪ್ಪ ರಾಮಚಂದ್ರ, ತೂದೂರು ಶಿವಾನಂದ, ಬೇಗುವಳ್ಳಿ ನಾಗರಾಜ್, ಕವಿರಾಜ್ ಇದ್ದರು.













