• About Us
  • Advertise
  • Privacy & Policy
  • Contact Us
Thursday, March 5, 2026
ರಾಕೇಶ್ ಸೋಮಿನಕೊಪ್ಪ ಸಾರಥ್ಯದಲ್ಲಿ
yuvadhwani
Subscribe
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
No Result
View All Result
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
No Result
View All Result
yuvadhwani
No Result
View All Result
  • Home
  • ಶಿವಮೊಗ್ಗ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
Home ಶಿವಮೊಗ್ಗ

ತಹಶೀಲ್ದಾರ್ ಕಿರುಕುಳಕ್ಕೆ ಬೇಸತ್ತು ಗ್ರಾಮ ಲೆಕ್ಕಾಧಿಕಾರಿ ಆತ್ಮಹತ್ಯೆಗೆ ಯತ್ನ!: ವೈರಲ್ ಆದ ಪತ್ರದಲ್ಲೇನಿದೆ?

ರಾಕೇಶ್ ಸೋಮಿನಕೊಪ್ಪ by ರಾಕೇಶ್ ಸೋಮಿನಕೊಪ್ಪ
February 4, 2026
in ಶಿವಮೊಗ್ಗ
ತಹಶೀಲ್ದಾರ್ ಕಿರುಕುಳಕ್ಕೆ ಬೇಸತ್ತು ಗ್ರಾಮ ಲೆಕ್ಕಾಧಿಕಾರಿ ಆತ್ಮಹತ್ಯೆಗೆ ಯತ್ನ!: ವೈರಲ್ ಆದ ಪತ್ರದಲ್ಲೇನಿದೆ?
Share on FacebookShare on TwitterShare on WhatsApp

ಹೊಳೆಹೊನ್ನೂರು: ತಾಲೂಕಿನ ಅಗರದಹಳ್ಳಿಯ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ತಹಶೀಲ್ದಾರ್ ನೀಡುತ್ತಿರುವ ಮಾನಸಿಕ ಕಿರುಕುಳ ಹಾಗೂ ಒತ್ತಡಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಪತ್ರ ಬರೆದಿರುವುದು ಈಗ ಭದ್ರಾವತಿ ಕಂದಾಯ ಇಲಾಖೆಯಲ್ಲಿ ಸಂಚಲನ ಮೂಡಿಸಿದೆ.
ಘಟನೆಯ ಹಿನ್ನೆಲೆ:
ಅಗರದಹಳ್ಳಿ ಗ್ರಾಮ ಲೆಕ್ಕಾಧಿಕಾರಿ (VA) ಅಭಿಷೇಕ್ ಎಂಬುವವರು ಈ ಆತಂಕಕಾರಿ ಪತ್ರವನ್ನು ಬರೆದಿದ್ದಾರೆ. ಭದ್ರಾವತಿ ತಹಶೀಲ್ದಾರ್ ಪರಸಪ್ಪ ಕುರಬರ್ ಅವರು ತಮ್ಮ ಮೇಲೆ ಅತಿಯಾದ ಒತ್ತಡ ಹೇರುತ್ತಿದ್ದಾರೆ ಎಂದು ಪತ್ರದಲ್ಲಿ ನೇರವಾಗಿ ಆರೋಪಿಸಲಾಗಿದೆ. ಅಗರದಹಳ್ಳಿಯ ಸರ್ವೆ ನಂಬರ್ 56, 49 ಹಾಗೂ 50ರ ಪೌತಿ ಖಾತೆ ಮಾಡಿಸುವ ಜವಾಬ್ದಾರಿಯನ್ನು ತಹಶೀಲ್ದಾರ್ ಅವರು ವಹಿಸಿಕೊಂಡಿದ್ದು, ಆ ಕೆಲಸಕ್ಕಾಗಿ ತಮ್ಮ ಮೇಲೆ ನಿರಂತರ ಮಾನಸಿಕ ಒತ್ತಡ ಹೇರುತ್ತಿದ್ದಾರೆ ಎಂದು ವಿಎ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

“ಕಳೆದ 21 ವರ್ಷಗಳಿಂದ ಗ್ರಾಮ ಲೆಕ್ಕಾಧಿಕಾರಿಯಾಗಿ ಯಾವುದೇ ಲೋಪವಿಲ್ಲದೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನನ್ನ ಕುಟುಂಬಕ್ಕೆ ನಾನೊಬ್ಬನೇ ದುಡಿಯುವ ವ್ಯಕ್ತಿಯಾಗಿದ್ದು, ಅನಾರೋಗ್ಯ ಪೀಡಿತ ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ. ಈ ಬಗ್ಗೆ ತಹಶೀಲ್ದಾರ್ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದರೂ, ಅವರು ಪದೇ ಪದೇ ಕಿರುಕುಳ ನೀಡುತ್ತಿದ್ದಾರೆ. ಈ ಮಾನಸಿಕ ಕಿರುಕುಳ ತಾಳಲಾರದೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ” ಎಂದು ಪತ್ರದಲ್ಲಿ ಹೃದಯವಿದ್ರಾವಕವಾಗಿ ಬರೆಯಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್:
ವಿಎ ಅಭಿಷೇಕ್ ಬರೆದಿರುವ ಈ ಪತ್ರವನ್ನು ಭದ್ರಾವತಿಯ ಅಜಿತ್ ಗೌಡ ಎಂಬುವವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅದು ಕ್ಷಣಾರ್ಧದಲ್ಲಿ ವೈರಲ್ ಆಗಿದೆ. ಭದ್ರಾವತಿಯಲ್ಲಿ ಈಗಾಗಲೇ ಮರಳು ಮತ್ತು ಇಸ್ಪೀಟು ದಂಧೆಯ ಕುರಿತಾದ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಈ ಘಟನೆ ಈಗ ಜಿಲ್ಲಾಡಳಿತದ ಗಮನ ಸೆಳೆದಿದೆ.
ಪತ್ರ ವೈರಲ್ ಆಗಿ ಗದ್ದಲ ಸೃಷ್ಟಿಸಿದ ಬೆನ್ನಲ್ಲೇ, ತಹಶೀಲ್ದಾರ್ ಹಾಗೂ ಗ್ರಾಮ ಲೆಕ್ಕಾಧಿಕಾರಿ ನಡುವೆ ರಾಜಿಯಾಗಿದೆ ಎಂಬ ಮಾಹಿತಿ ದೊರಕಿದೆ.
ಆದರೆ, ಸರ್ಕಾರಿ ಅಧಿಕಾರಿಯೊಬ್ಬರು ಬಹಿರಂಗವಾಗಿ ಆತ್ಮಹತ್ಯೆ ಪತ್ರ ಬರೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ : 7483162573, yuvadhwani@gmail.com
Tags: kannada newskannada news livemalnad newsshimogashivamogga
Previous Post

ಸುದ್ದಿ ಸುತ್ತು 03-02-26 | ಸಾಗರ ಶ್ರೀ ಮಾರಿಕಾಂಬಾ ಜಾತ್ರೆ, ದರ್ಶನಕ್ಕೆ ಕಿ.ಮೀ.ಗಟ್ಟಲೆ ಸಾಲು | ನಗರಾಭಿವೃದ್ದಿ ಪ್ರಾಧಿಕಾರ ಕಾಮಗಾರಿ ತನಿಖೆಗೆ ಸಹಮತ | ಸಾಗರ-ಸಿಗಂದೂರು ಬಸ್‌ಗೆ ಚಾಲನೆ,

Next Post

ಶಿವಮೊಗ್ಗದ ಕಾರ್ಖಾನೆಗೆ ನಕಲಿ ಇಮೇಲ್, ಮ್ಯಾನೇಜರ್ ಗೆ ಕಾದಿತ್ತು ಶಾಕ್!

ರಾಕೇಶ್ ಸೋಮಿನಕೊಪ್ಪ

ರಾಕೇಶ್ ಸೋಮಿನಕೊಪ್ಪ

Next Post
ಶಿವಮೊಗ್ಗದ ಕಾರ್ಖಾನೆಗೆ ನಕಲಿ ಇಮೇಲ್, ಮ್ಯಾನೇಜರ್ ಗೆ ಕಾದಿತ್ತು ಶಾಕ್!

ಶಿವಮೊಗ್ಗದ ಕಾರ್ಖಾನೆಗೆ ನಕಲಿ ಇಮೇಲ್, ಮ್ಯಾನೇಜರ್ ಗೆ ಕಾದಿತ್ತು ಶಾಕ್!

  • Trending
  • Comments
  • Latest
ಶಿವಮೊಗ್ಗ | ತುಂಗಾ ನದಿ ಸೇತುವೆ ಮೇಲೆ ಖಾಸಗಿ ಬಸ್-ಟಿಟಿ ಮುಖಾಮುಖಿ ಡಿಕ್ಕಿ

ಶಿವಮೊಗ್ಗ | ತುಂಗಾ ನದಿ ಸೇತುವೆ ಮೇಲೆ ಖಾಸಗಿ ಬಸ್-ಟಿಟಿ ಮುಖಾಮುಖಿ ಡಿಕ್ಕಿ

January 26, 2026
ಶಿವಮೊಗ್ಗ | ಅಂಗಡಿ ಎದುರು ಇಟ್ಟಿದ್ದ ಹಾಲಿನ ಪ್ಯಾಕೆಟ್‌ಗಳನ್ನೂ ಬಿಡದ ಕಳ್ಳ!

ಶಿವಮೊಗ್ಗ | ಅಂಗಡಿ ಎದುರು ಇಟ್ಟಿದ್ದ ಹಾಲಿನ ಪ್ಯಾಕೆಟ್‌ಗಳನ್ನೂ ಬಿಡದ ಕಳ್ಳ!

January 28, 2026
BREAKING NEWS – ಹೊಳೆಹೊನ್ನೂರು | ಒಂದೇ ದಿನ 11 ಮಂದಿಗೆ ಹುಚ್ಚು ನಾಯಿ ಕಡಿತ

BREAKING NEWS – ಹೊಳೆಹೊನ್ನೂರು | ಒಂದೇ ದಿನ 11 ಮಂದಿಗೆ ಹುಚ್ಚು ನಾಯಿ ಕಡಿತ

January 27, 2026
ಕೇಂದ್ರದ ಬಜೆಟ್ | ಬಲ್ಬ್ ಇಲ್ಲದ ಕಂಬದಂತೆ | ಕಾಂಗ್ರೆಸ್‌ನ ಯುವ ಮುಖಂಡ ಸಿ.ಜಿ. ಮಧುಸೂದನ್

ಕೇಂದ್ರದ ಬಜೆಟ್ | ಬಲ್ಬ್ ಇಲ್ಲದ ಕಂಬದಂತೆ | ಕಾಂಗ್ರೆಸ್‌ನ ಯುವ ಮುಖಂಡ ಸಿ.ಜಿ. ಮಧುಸೂದನ್

February 2, 2026

ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆ | ಡಾ.ಧನಂಜಯ ಸರ್ಜಿ ಮಾಹಿತಿ

0
ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆ | ಡಾ.ಧನಂಜಯ ಸರ್ಜಿ ಮಾಹಿತಿ

ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆ | ಡಾ.ಧನಂಜಯ ಸರ್ಜಿ ಮಾಹಿತಿ

0
ಶಿವಮೊಗ್ಗ ಜಿಲ್ಲಾಧಿಕಾರಿ ಹೆಸರಲ್ಲಿ ನಕಲಿ ವಾಟ್ಸಾಪ್ ಸಂದೇಶ | ಜಿಲ್ಲಾಧಿಕಾರಿಗಳ ಸಲಹೆ ಏನು?

ಶಿವಮೊಗ್ಗ ಜಿಲ್ಲಾಧಿಕಾರಿ ಹೆಸರಲ್ಲಿ ನಕಲಿ ವಾಟ್ಸಾಪ್ ಸಂದೇಶ | ಜಿಲ್ಲಾಧಿಕಾರಿಗಳ ಸಲಹೆ ಏನು?

0
ತೀರ್ಥಹಳ್ಳಿ | ಭಾರತೀಪುರ ಕೆರೆ ಸಮೀಪ ಅಪಘಾತ: ಮೂವರು ಸಾವು!

ತೀರ್ಥಹಳ್ಳಿ | ಭಾರತೀಪುರ ಕೆರೆ ಸಮೀಪ ಅಪಘಾತ: ಮೂವರು ಸಾವು!

0
ಶಿಕಾರಿಪುರ | ಶಾಲಾ ಕೊಠಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಶಿಕ್ಷಕ

ಚಲಿಸುತ್ತಿದ್ದ ಬಸ್ ಸೀಟಿನಿಂದ ಹೊರಗೆ ಬಿದ್ದ ಪ್ರಯಾಣಿಕ

March 5, 2026
ರಾಜ್ಯದಲ್ಲಿ `ಅಪ್ರಾಪ್ತ’ ಹೆಸರಿನ ದುರ್ಬಳಕೆ, ಸಂಕೇತ್‍ ಹತ್ಯೆ ಸಮಗ್ರ ತನಿಖೆಯಾಗಲಿ, ಬಜೆಟ್ ಬಗ್ಗೆ ಶಾಸಕ ಚನ್ನಬಸಪ್ಪ ಹೇಳಿದ್ದೇನು?

ರಾಜ್ಯದಲ್ಲಿ `ಅಪ್ರಾಪ್ತ’ ಹೆಸರಿನ ದುರ್ಬಳಕೆ, ಸಂಕೇತ್‍ ಹತ್ಯೆ ಸಮಗ್ರ ತನಿಖೆಯಾಗಲಿ, ಬಜೆಟ್ ಬಗ್ಗೆ ಶಾಸಕ ಚನ್ನಬಸಪ್ಪ ಹೇಳಿದ್ದೇನು?

March 5, 2026
ಬಿಜೆಪಿ ಪ್ರಭಾರಿಗಳಾಗಿ ಆರ್.ಕೆ. ಸಿದ್ದರಾಮಣ್ಣ, ಟಿ.ಡಿ. ಮೇಘರಾಜ್ ನೇಮಕ

ಬಿಜೆಪಿ ಪ್ರಭಾರಿಗಳಾಗಿ ಆರ್.ಕೆ. ಸಿದ್ದರಾಮಣ್ಣ, ಟಿ.ಡಿ. ಮೇಘರಾಜ್ ನೇಮಕ

March 5, 2026
ಶಿವಮೊಗ್ಗ ಲೋಕಲ್ ನ್ಯೂಸ್ ಬೀಟ್

ಶಿವಮೊಗ್ಗ ಲೋಕಲ್ ನ್ಯೂಸ್ ಬೀಟ್

March 5, 2026

Recent News

Facebook Twitter
yuvadhwani

ಶಿವಮೊಗ್ಗ ಸುದ್ದಿಗಳ ಜೊತೆಗೆ ರಾಜ್ಯದ ಪ್ರಚಲಿತ ವಿದ್ಯಮಾನಗಳ ಸುದ್ದಿಗಳನ್ನು ಓದಲು ಯುವಧ್ವನಿ ನ್ಯೂಸ್ ಪೋರ್ಟಲ್ ಗೆ ತಮಗೆ ಸುಸ್ವಾಗತ. ವಿಭಿನ್ನ, ವಿಶೇಷ, ಉತ್ತಮ ಗುಣಮಟ್ಟದ ಸುದ್ದಿಗಳನ್ನು ಓದುಗ ಮನಸ್ಸುಗಳಿಗೆ ಮುಟ್ಟಿಸಲು ಬದ್ದರಾಗಿದ್ದೇವೆ.

Follow Us

Browse by Category

  • Uncategorized
  • ಅಂಕಣಗಳು
  • ಆರೋಗ್ಯ
  • ಕ್ರೈಂ ನ್ಯೂಸ್
  • ತೀರ್ಥಹಳ್ಳಿ
  • ದೇಶ
  • ಭದ್ರಾವತಿ
  • ರಾಜ್ಯ
  • ವಿಶೇಷ
  • ಶಿಕಾರಿಪುರ
  • ಶಿವಮೊಗ್ಗ
  • ಸಾಗರ
  • ಸೊರಬ
  • ಹೊಸನಗರ

Recent News

ಶಿಕಾರಿಪುರ | ಶಾಲಾ ಕೊಠಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಶಿಕ್ಷಕ

ಚಲಿಸುತ್ತಿದ್ದ ಬಸ್ ಸೀಟಿನಿಂದ ಹೊರಗೆ ಬಿದ್ದ ಪ್ರಯಾಣಿಕ

March 5, 2026
ರಾಜ್ಯದಲ್ಲಿ `ಅಪ್ರಾಪ್ತ’ ಹೆಸರಿನ ದುರ್ಬಳಕೆ, ಸಂಕೇತ್‍ ಹತ್ಯೆ ಸಮಗ್ರ ತನಿಖೆಯಾಗಲಿ, ಬಜೆಟ್ ಬಗ್ಗೆ ಶಾಸಕ ಚನ್ನಬಸಪ್ಪ ಹೇಳಿದ್ದೇನು?

ರಾಜ್ಯದಲ್ಲಿ `ಅಪ್ರಾಪ್ತ’ ಹೆಸರಿನ ದುರ್ಬಳಕೆ, ಸಂಕೇತ್‍ ಹತ್ಯೆ ಸಮಗ್ರ ತನಿಖೆಯಾಗಲಿ, ಬಜೆಟ್ ಬಗ್ಗೆ ಶಾಸಕ ಚನ್ನಬಸಪ್ಪ ಹೇಳಿದ್ದೇನು?

March 5, 2026

Copyright © 2026 Yuva Dhwani. Designed by KIPL