ಶಿವಮೊಗ್ಗ: ನಗರದ ಜೆ.ಎನ್.ಎನ್ ಇಂಜಿನಿಯರಿಂಗ್ ಕಾಲೇಜಿನ ಸಾಂಸ್ಕೃತಿಕ ತಂಡವು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಏರ್ಪಡಿಸಿದ್ದ ಅಂತರ ಕಾಲೇಜು ಸಾಂಸ್ಕೃತಿಕ ಉತ್ಸವ ‘ಯುಕ್ತಿ-2026’ ನಲ್ಲಿ ಅಸಾಧಾರಣ ಪ್ರದರ್ಶನ ನೀಡಿ ಚಾಂಪಿಯನ್ ಟ್ರೋಫಿ ಮುಡಿಗೇರಿಸಿಕೊಂಡಿದ್ದಾರೆ.

ಮೈಸೂರಿನ ವಿಟಿಯು ವಲಯ ಕೇಂದ್ರದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಛಾಯಾಗ್ರಹಣ ಸ್ಪರ್ಧೆಯಲ್ಲಿ ಭುವನ್.ಜಿ.ಆರ್ (ಪ್ರಥಮ), ಕೊಲಾಜ್ ಸ್ಪರ್ಧೆಯಲ್ಲಿ ಅಪೂರ್ವ ಹರೀಶ್ (ಪ್ರಥಮ), ಸಮೂಹ ಗಾಯನ ಸ್ಪರ್ಧೆಯಲ್ಲಿ ವಿಕಾಸ್.ಬಿ.ಎಚ್, ಮೈತ್ರೇಯಿ, ಲಿಂಗೇಶ್.ಆರ್, ಸಾನಿಧ್ಯ ಹಮ್ಮಿಗೆ, ಸಿಂಚನ.ಆರ್ ತಂಡ (ಪ್ರಥಮ), ರಂಗೋಲಿ ಸ್ಪರ್ಧೆಯಲ್ಲಿ ಅಪೂರ್ವ ಹರೀಶ್ (ದ್ವಿತೀಯ), ಸಮೂಹ ನೃತ್ಯ ಸ್ಪರ್ಧೆಯಲ್ಲಿ ಶರಧಿ, ಅಪೂರ್ವ ಹರೀಶ್, ಅನಿಶಾ, ಭುವನ್, ಶ್ರೀವಿದ್ಯಾ, ಅಮೂಲ್ಯ ಡುಮ್ಮರ್, ಇಂಪನಾ (ದ್ವಿತೀಯ), ಗಾಯನದಲ್ಲಿ ಮೈತ್ರೇಯಿ.ಬಿ.ವಿ (ದ್ವಿತೀಯ) ಬಹುಮಾನ ಪಡೆದಿದ್ದಾರೆ.
ವಿಟಿಯು ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ರಂಗೋಲಿ ಸ್ಪರ್ಧೆಯಲ್ಲಿ ಅಪೂರ್ವ ಹರೀಶ್ (ಪ್ರಥಮ), ಸಮೂಹ ಗಾಯನ ಸ್ಪರ್ಧೆಯಲ್ಲಿ ವಿಕಾಸ್, ಅನುಶ್ರೀ, ಮೈತ್ರೇಯಿ, ಲಿಂಗೇಶ್, ರತನ್ ಕುಮಾರ್, ಯದುನಂದನ, ಸಾನಿಧ್ಯ ಹಮ್ಮಿಗೆ, ಸಿಂಚನ.ಆರ್ (ಪ್ರಥಮ), ಗಾಯನದಲ್ಲಿ ಅನುಶ್ರೀ.ಎಂ (ದ್ವಿತೀಯ), ಲೋಗೊ ವಿನ್ಯಾಸ ಸ್ಪರ್ಧೆಯಲ್ಲಿ ಭುವನ್. ಜಿ.ಆರ್ (ದ್ವಿತೀಯ) ಬಹುಮಾನ ಪಡೆದಿದ್ದಾರೆ. ಸಾಂಸ್ಕೃತಿಕ ವಿಭಾಗದ ಸಂಯೋಜಕರಾದ ಡಾ.ಶಶಿಕಿರಣ್ ತಂಡವನ್ನು ಮುನ್ನಡೆಸಿದರು.
ವಿದ್ಯಾರ್ಥಿಗಳ ಈ ಸಾಧನೆಗೆ ರಾಷ್ಟ್ರೀಯ ಶಿಕ್ಷಣ ಸಮಿತಿ ಆಡಳಿತ ಮಂಡಳಿ ಸದಸ್ಯರು, ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್ ಮತ್ತು ಸಿಬ್ಬಂದಿ ವರ್ಗ ಅಭಿನಂದಿಸಿದೆ.
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 7483162573, yuvadhwanismg@gmail.com













