ಶಿವಮೊಗ್ಗ : ಶಿವಮೊಗ್ಗವೂ ಸೇರಿದಂತೆ ರಾಜ್ಯದಲ್ಲಿ `ಅಪ್ರಾಪ್ತ’ ಹೆಸರಿನ ದುರ್ಬಳಕೆ ಆಗುತ್ತಿದ್ದು, ಇದರ ಸಮಗ್ರ ತನಿಖೆಯನ್ನು ಎನ್ಐಎ(ರಾಷ್ಟ್ರೀಯ ತನಿಖಾ ದಳ)ಗೆ ವಹಿಸಬೇಕು ಎಂದು ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಮಾ.6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಲಿರುವ ಬಜೆಟ್ ಮೇಲೆ ನನಗೆ ಯಾವ ನಿರೀಕ್ಷೆಯೂ ಇಲ್ಲ. ಕಳೆದ ಮೂರು ವರ್ಷಗಳಲ್ಲಿ ಅವರು ಬಜೆಟ್ ನಲ್ಲಿ ನೀಡಿದ ಯಾವ ಭರವಸೆಯೂ ಈಡೇರಿಲ್ಲ. ಆದ್ದರಿಂದ ಶಿವಮೊಗ್ಗಕ್ಕೆ ಏನು ಬೇಕು ಎಂದು ಕೇಳುವ ಮನಸ್ಸೂ ಇಲ್ಲ. ಸರ್ಕಾರದ ಬಗ್ಗೆ ಸಂಪೂರ್ಣ ಭ್ರಮನಿರಸನವಾಗಿದೆ. ಬಜೆಟ್ ಅಧಿವೇಶನದಲ್ಲಿ ಗಂಭೀರವಾಗಿ ಚರ್ಚಿಸುವೆ.
-ಎಸ್.ಎನ್.ಚನ್ನಬಸಪ್ಪ, ಶಾಸಕ ರು
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಪ್ರಾಪ್ತ ವಯಸ್ಸಿನ ಮುಸಲ್ಮಾನ್ ಮಕ್ಕಳೇ ಮಾದಕವಸ್ತು, ಗಾಂಜಾ ಸೇವನೆ ಮಾಡಿ, ಹಿಂದೂ ಯುವಕರನ್ನು ಹತ್ಯೆಮಾಡುವ ಕೃತ್ಯ ಹೆಚ್ಚಾಗುತ್ತಿದೆ. ಅದಕ್ಕೆ ಉದಾಹರಣೆ ಇತ್ತೀಚೆಗೆ ನಗರದ ಹೊರವಲಯದ ಸೂಳೆಬೈಲಿನಲ್ಲಿ ನಡೆದ ಸಂಕೇತ್ ಎಂಬ ಎಸ್ಎಸ್ಎಲ್ಸಿ ವಿದ್ಯಾರ್ಥಿಯ ಹತ್ಯೆ. ಮುಸಲ್ಮಾನ್ ಅಪ್ರಾಪ್ತರಿಂದಲೇ ಗಾಂಜಾ ಸೇವಿಸಿ ಅನೇಕ ಕಡೆ ಕಲ್ಲು ತೂರಾಟ, ಗಲಭೆ ಆಗಿವೆ. 8-9ನೇ ತರಗತಿಯಲ್ಲಿ ಫೇಲಾದ ಮುಸ್ಲಿಂ ಅಪ್ರಾಪ್ತರೇ ಎಲ್ಲಾ ಕುಕೃತ್ಯಗಳಿಗೆ ಕಾರಣರಾಗುತ್ತಿದ್ದಾರೆ. ಅಪ್ರಾಪ್ತರು ಎನ್ನುವ ಕಾರಣಕ್ಕಾಗಿ ಪೊಲೀಸರು ಇವರ ವಿರುದ್ಧ ಏನನ್ನೂ ಮಾಡಲಾಗುತ್ತಿಲ್ಲ. ಪ್ರಸ್ತುತ ಕಾನೂನಿನ ತೊಡಕು ಇವರಿಗೆ ಎದುರಾಗುತ್ತಿದೆ. ರಕ್ಷಣಾ ಇಲಾಖೆ ಅಸಹಾಯಕವಾಗಿದೆ. ಅಪ್ರಾಪ್ತರು ಕೊಲೆ ಮಾಡಿದರೂ ಅವರಿಗೆ ಶಿಕ್ಷೆಯಾಗುತ್ತಿಲ್ಲ. ಈ ಗಂಭೀರತೆಯನ್ನು ಸರ್ಕಾರ ಮನಗಾಣಬೇಕು 2025-26ರ ಸಾಲಿನಲ್ಲೇ ಬಾಲಾಪರಾಧಿಗಳ ಪ್ರಮಾಣ ಶಿವಮೊಗ್ಗದಲ್ಲಿ ಶೇ.15ರಷ್ಟು ಹೆಚ್ಚಾಗಿದೆ. ಅದರಲ್ಲಿ ಮಾದಕವಸ್ತು ಸೇವನೆ, ಕಳ್ಳತನ, ಹೆಚ್ಚಳವಾಗಿದೆ. 50ಶೇಕಡಕ್ಕಿಂತ ಹೆಚ್ಚಿನ ಪ್ರಕರಣಗಳಲ್ಲಿ ಎಸ್ಎಸ್ಎಲ್ಸಿಗಿಂತ ಕಡಿಮೆ ಓದಿದವರು ಇದ್ದಾರೆ. ಬಾಲಾಪರಾಧಿಗಳಿಂದ ನಡೆದ ಒಟ್ಟು 67 ಪ್ರಕರಣಗಳಲ್ಲಿ ಪೋಕ್ಸೋ 24, ಕೊಲೆ 1, ಕೊಲೆಯತ್ನ 19, ದರೋಡೆ 3, ಗಾಂಜಾ ಸೇವನೆ-ಮಾರಾಟ 4, ಕಳ್ಳತನ ಮತ್ತು ಡಕಾಯಿತಿ 5 ಹಾಗೂ ಇನ್ನಿತರ ಪ್ರಕರಣಗಳಿದ್ದು, ಇದನ್ನು ಗಂಭೀರವಾಗಿ ಗೃಹ ಇಲಾಖೆ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಮುಸಲ್ಮಾನ್ ಅಪ್ರಾಪ್ತರು ಸಮಾಜ ಘಾತುಕ ಕೃತ್ಯ ಎಸಗುವುದರ ಹಿಂದೆ ಇರುವ ಬಲವಾದ ಕಾರಣವನ್ನು ಹುಡುಕುವ ಕೆಲಸ ಆಗಬೇಕು. ಅಪ್ರಾಪ್ತರನ್ನು ಸೃಷ್ಟಿ ಮಾಡುವ ಕಿಡಿಗೇಡಿಗಳು ಯಾರು ? ಎಂಬುದರ ಬಗ್ಗೆ ಪೊಲೀಸ್ ಇಲಾಖೆ ತನ್ನದೇ ಆದ ರೀತಿಯ ತನಿಖೆ ಮಾಡಬೇಕು ಎಂದು ಆಗ್ರಹಿಸಿದ ಅವರು, ಪಿಎಫ್ಐ ಸಂಘಟನೆಯನ್ನು ನಿಷೇಧಿಸಿದರೂ ಬೇರೆ ಮುಖವಾಡದಲ್ಲಿ ಅದರ ಕಾರ್ಯಾಚರಣೆ ನಡೆಯುತ್ತಿದೆ. ಈ ಅಂಶವನ್ನು ಬರುವ ವಿಧಾನಸಭಾ ಅಧಿವೇಶನದಲ್ಲಿ ಗಂಭೀರವಾಗಿ ಚರ್ಚೆಗೆ ತೆಗೆದುಕೊಳ್ಳಲಾಗುವುದು. ಸರ್ಕಾರ ಇದೇ ರೀತಿ ಮುಸ್ಲಿಂರ ಬಗ್ಗೆ ನಿರ್ಲಿಪ್ತ ಭಾವನೆಯನ್ನು ತಾಳಿದರೆ ಪೊಲೀಸ್ ಇಲಾಖೆ ಹಿಂದೂಗಳ ಹೆಣ ಹೋರುವ ಇಲಾಖೆ ಎಂಬ ಬೋರ್ಡ್ ಹಾಕಿಕೊಳ್ಳಬೇಕಾಗುತ್ತದೆ ಎಂದು ವ್ಯಂಗ್ಯವಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ನಗರಾಧ್ಯಕ್ಷ ಮೋಹನ್ ರೆಡ್ಡಿ, ಪ್ರಧಾನ ಕಾರ್ಯದರ್ಶಿ ದೀನ್ದಯಾಳ್, ಕೆ.ಜಿ. ಕುಮಾರಸ್ವಾಮಿ ಇದ್ದರು.
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 7483162573, yuvadhwanismg@gmail.com













