ಶಿವಮೊಗ್ಗ: ಭಾಗವತ ಯಕ್ಷ ಪ್ರೇಮಿಗಳ ಆಯೋಜನೆಯಲ್ಲಿ ನಾಳೆ ಸಂಜೆ 6 ಗಂಟೆಗೆ ನಗರದ ಸೈನ್ಸ್ ಮೈದಾನದಲ್ಲಿ ಯಕ್ಷಗಾನ ಬಯಲಾಟ ಹಮ್ಮಿಕೊಳ್ಳಲಾಗಿದೆ.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪೋಷಿತ ಯಕ್ಷಗಾನ ಮಂಡಳಿ ಧರ್ಮಸ್ಥಳ ಇವರಿಂದ ರಾಜ ದಿಲೀಪ( ನಂದಿ ನಂದಿನಿ) ಎಂಬ ಪೌರಾಣಿಕ ಯಕ್ಷಗಾನ ಬಯಲಾಟ ನಡೆಯಲಿದೆ.
ಸಂಜೆ 6 ಗಂಟೆಯಿಂದ ಯಕ್ಷಗಾನ ಆರಂಭವಾಗಲಿದ್ದು, ಪ್ರವೇಶ ಉಚಿತವಾಗಿದೆ.
ಯಕ್ಷಗಾನ ಅಭಿಮಾನಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ಭಾಗವತ ಯಕ್ಷ ಪ್ರೇಮಿಗಳು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ
ಹೆಚ್ಚಿನ ಮಾಹಿತಿಗಾಗಿ 9480131503 ಗೆ ಸಂಪರ್ಕಿಸಿ.
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ : 7483162573, yuvadhwani@gmail.com













