ಹೊಸನಗರ: ತಾಲ್ಲೂಕಿನ ಬ್ರಹ್ಮೇಶ್ವರದಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಕೃಷಿಕರೊಬ್ಬರ ಮೇಲೆ ಕಲ್ಲು ಬಂಡೆ ಉರುಳಿಬಿದ್ದ ಪರಿಣಾಮ ಅವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ವರದಿಯಾಗಿದೆ.
ಮೃತ ಕೃಷಿಕನನ್ನು ಬ್ರಹ್ಮೇಶ್ವರ ನಿವಾಸಿ ಸತೀಶ್ (೩೫) ಎಂದು ಗುರುತಿಸಲಾಗಿದೆ.
ಸತೀಶ್ ಮಸಗಲಿ ಗ್ರಾಮದಲ್ಲಿರುವ ತಮ್ಮ ಜಮೀನಿನ ಪಕ್ಕದಲ್ಲಿ ತೋಟಕ್ಕೆ ನೀರಿನ ವ್ಯವಸ್ಥೆ ಕಲ್ಪಿಸುವ ಉದ್ದೇಶ ದಿಂದ ಗುಂಡಿ ತೆಗೆಯುವ ಕೆಲಸದಲ್ಲಿ ನಿರತರಾಗಿದ್ದರು. ಈ ಸಮಯದಲ್ಲಿ ಮೇಲ್ಭಾಗದಲ್ಲಿದ್ದ ದೊಡ್ಡ ಕಲ್ಲು ಬಂಡೆಯೊಂದು ಏಕಾಏಕಿ ಜಾರಿ ಅವರ ಮೇಲೆ ಬಿದ್ದಿದೆ. ಬಾರೀ ಗಾತ್ರದ ಬಂಡೆಯ ಅಡಿಗೆ ಸಿಲುಕಿದ ಸತೀಶ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 7483162573, yuvadhwanismg@gmail.com













