ಹೊಳೆಹೊನ್ನೂರು: ಹೊಳೆಹೊನ್ನೂರು ಗ್ರಾಮದ ನಿವಾಸಿ ರಾಮಪ್ಪ ಅವರಿಗೆ ಸಿಕ್ಕಿದ್ದ 14 ಗ್ರಾಂ ತೂಕದ ಬಂಗಾರದ ತಾಳಿಸರವನ್ನು ಪೊಲೀಸರ ಸಮ್ಮುಖದಲ್ಲಿ ಅದರ ಮಾಲೀಕರಿಗೆ ಒಪ್ಪಿಸಿದ ಘಟನೆ ನಡೆದಿದೆ.
ಕೊಪ್ಪ ಗ್ರಾಮದ ನಿವಾಸಿ ಮಂಜಮ್ಮ ಅವರು ಜುಲೈ 9ರಂದು ಹೊಳೆಹೊನ್ನೂರು ಗ್ರಾಮಕ್ಕೆ ಬಂದ ಸಂದರ್ಭದಲ್ಲಿ ಆಕಸ್ಮಿಕವಾಗಿ ತಮ್ಮ ಕೊರಳಲ್ಲಿದ್ದ ಸುಮಾರು 14 ಗ್ರಾಂ ತೂಕದ ಬಂಗಾರದ ತಾಳಿಸರವನ್ನು ಕಳೆದುಕೊಂಡಿದ್ದರು.
ಇದನ್ನೂ ಓದಿ > ಶಿವಮೊಗ್ಗ ಗ್ರಾಮಾಂತರ ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರ ಶ್ಲಾಘನೆ
ಕಳೆದುಹೋಗಿದ್ದ ತಾಳಿಸರವು ಹೊಳೆಹೊನ್ನೂರು ಗ್ರಾಮದ ನಿವಾಸಿ ರಾಮಪ್ಪ ಎಂಬುವವರಿಗೆ ಸಿಕ್ಕಿದ್ದು, ತಕ್ಷಣವೇ ಅವರು ಹೊಳೆಹೊನ್ನೂರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದೇ ವೇಳೆ ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದ ಮಂಜಮ್ಮ ಅವರಿಗೆ ಪೊಲೀಸರ ಸಮ್ಮುಖದಲ್ಲಿ ರಾಮಪ್ಪ ಹಾಗೂ ಅವರ ಪುತ್ರ ವಿನಯ್ ಅವರು ತಾಳಿಸರವನ್ನು ಮಂಜಮ್ಮ ಅವರಿಗೆ ಹಸ್ತಾಂತರಿಸಿದರು.
ಇದನ್ನೂ ಓದಿ >ನಾಳೆ ಶಿವಮೊಗ್ಗದ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಎಲ್ಲೇಲ್ಲಿ?
ಪ್ರಾಮಾಣಿಕತೆ ಮೆರೆದ ರಾಮಪ್ಪ, ಅವರ ಪುತ್ರ ವಿನಯ್ ಅವರ ನಡೆಗೆ ಪೊಲೀಸ್ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಎಎಸ್‌ಐ ಕೃಷ್ಣನಾಯ್ಕ್ ಉಪಸ್ಥಿತರಿದ್ದರು.















