ವಿಶೇಷ ವರದಿ : ರವಿ ಶಿವಮೊಗ್ಗ
ಶಿವಮೊಗ್ಗ: ಜಿಲ್ಲೆಯಲ್ಲಿ ಸಾರ್ವಜನಿಕರೊಂದಿಗೆ ಬಾಲ ಬಿಚ್ಚುವ ರೌಡಿಗಳನ್ನು ಹಾಗೂ ಸಮಾಜ ಘಾತುಕ ಶಕ್ತಿಗಳನ್ನು ಮಟ್ಟ ಹಾಕುವುದಲ್ಲದೇ ಜಿಲ್ಲೆಯಲ್ಲಿ ನಡೆಯುವ ಅಕ್ರಮ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದರ ಜೊತೆಗೆ ಸಾರ್ವ ಜನಿಕರಿಗೆ, ನೊಂದವರಿಗೆ ನ್ಯಾಯ ಕೊಡಿಸುವುದರ ಜೊತೆಗೆ ಮಾನವೀಯತೆ ಕಾಳಜಿ ಯಿಂದ ಕೆಲಸ ನಿರ್ವಹಿಸುತ್ತಿರುವ ಶಿವಮೊಗ್ಗ ಜಿಲ್ಲಾ ಪೊಲೀಸರ ಒಳ್ಳೆಯ ಕಾರ್ಯಕ್ಕೆ ಸಾರ್ವಜನಿಕರಿಂದ ಅಧಿಕಾರಿಗಳಿಂದ, ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.
ಇದಕ್ಕೆ ಶಿವಮೊಗ್ಗ ಗ್ರಾಮಾಂತರ ಪೊಲೀಸರ ತಂಡ ಸಾಕ್ಷಿಯಾಗಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ ಜಿಲ್ಲೆಯಲ್ಲಿ ಯಾವುದೇ ಮಕ್ಕಳು ತಮ್ಮ ಬಡತನದ ಕಾರಣದಿಂದಾಗಲೀ ಅಥವಾ ತಮ್ಮ ಸಮಸ್ಯೆಗಳಿಂದಾಗಲೀ ಶಿಕ್ಷಣ ದಿಂದ ವಂಚಿತರಾಗದೇ ಸರ್ಕಾರ ನೀಡುತ್ತಿರುವ ಉಚಿತ ಶಿಕ್ಷಣ, ಸೌಲಭ್ಯಗಳನ್ನು ಬಳಸಿಕೊಂಡು ಸಮಾಜದಲ್ಲಿ ಉನ್ನತ ಶಿಕ್ಷಣ ಪಡೆದು ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಗಳಾಗಿ ಬೆಳೆಯಲಿ. ತಮ್ಮ ಅಮೂಲ್ಯ ಜೀವನವನ್ನು ಹಾಳು ಮಾಡುವಂ ತಹ ನಶೆ ನೀಡುವ ಗಾಂಜಾ, ಅಫೀಮುಗಳಂತಹ ಚಟಕ್ಕೆ ಬಿದ್ದು ಬಲಿಯಾಗಬಾರದೆಂದು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮಾಡುವ ಕಾರ್ಯವನ್ನು ಶಿವಮೊಗ್ಗ ಗ್ರಾಮಾಂತರ ಪೊಲೀಸರು ಮಾಡಿದ್ದಾರೆ.
ಶಿಕ್ಷಣವೇ ಎಲ್ಲಾ ಮಕ್ಕಳ ಭವಿಷ್ಯ. ಶಾಲೆ ಬಿಟ್ಟ ಮಕ್ಕಳನ್ನು ಹುಡುಕಿ ಶಾಲೆಗೆ ಸೇರಿಸುವುದೂ ಸಹ ನಮ್ಮ ಕರ್ತವ್ಯ. ಗ್ರಾಮಾಂತರ ಸರಹದ್ದಿನ ರೌಡಿಗಳನ್ನು, ಗಾಂಜಾ ಜಾಲವನ್ನು ಬೇರು ಸಹಿತ ಕಿತ್ತುಹಾಕುತ್ತೇವೆ. ಶಿವಮೊಗ್ಗ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಶಾಲಾ ಮಕ್ಕಳಿಗೆ, ಯುವಕರಿಗೆ, ಗಾಂಜಾ ಮಾರಾಟ ಮಾಡಿದರೆ ಅಂತಹ ರೌಡಿಗಳ ವಿರುದ್ಧ ಯಾವುದೇ ಮುಲಜಿಲ್ಲದೇ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಮಕ್ಕಳನ್ನು ಗಾಂಜಾ ಅಫೀಮುಗಳಂತಹ ಚಟಕ್ಕೆ ಬಲಿಯಾಗಿಸಿ ಹಣ ಮಾಡುವವರ ಮೇಲೆ ಈಗಾಗಲೇ ನಿಗಾ ಇರಿಸಲಾಗಿದೆ. ಮಕ್ಕಳ ಭವಿಷ್ಯದ ಜೊತೆ ಯಾರಿಗೂ ಅಟ ಆಡಲು ಬಿಡುವುದಿಲ್ಲ. ಮುಂದಿನ ದಿನಗಳಲ್ಲಿ ವಿಶೇಷ ಕಾರ್ಯಾಚರಣೆ ಮಾಡಿ ಗ್ರಾಮಾಂತರ ಠಾಣಾ ಭಾಗದಲ್ಲಿ ಎಲ್ಲಾ ಪುಡಿ ರೌಡಿಗಳನ್ನು ಕ್ಲೀನ್ ಮಾಡುತ್ತೇವೆ. ಸಾರ್ವಜನಿಕರು ಅನುಮಾನಸ್ಪದ ವ್ಯಕ್ತಿಗಳು ಕಂಡರೆ ಕೂಡಲೇ ಪೊಲೀಸ್ ಇಲಾಖೆಗೆ ಮಾಹಿತಿ ಕೊಡಿ. ಮಾಹಿತಿದಾರರ ಹೆಸರನ್ನು ಬಹಿರಂಗಪಡಿಸುವುದಿಲ್ಲ.
– ರಾಘವೇಂದ್ರ ಖಾಂಡ್ಕೆ, ಪೊಲೀಸ್ ಇನ್ಸ್ ಸ್ಪೆಕ್ಟರ್, ಗ್ರಾಮಾಂತರ ಠಾಣೆ, ಶಿವಮೊಗ್ಗ
ಮಕ್ಕಳು ಶಿಕ್ಷಣ ಕಲಿತು ಸಮಾ ಜದಲ್ಲಿ ಉನ್ನತ ವ್ಯಕ್ತಿಗಳಾಗಿ ಬೆಳೆದು ತಂದೆ ತಾಯಿಯರಿಗೆ ಒಳ್ಳೆಯ ಮಕ್ಕಳಾಗಿ ಸಮಾಜ ದಲ್ಲಿ ಗೌರವದ ಜೊತೆಗೆ ತಮ್ಮ ಸುಂದರ ಜೀವನವನ್ನು ರೂಪಿಸಿಕೊಳ್ಳಲಿ ಎಂದು ಮರಳಿ ಶಾಲೆಗೆ ಕರೆತರುವ ಜಿಲ್ಲಾ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯ ಕಾರ್ಯಕ್ರ ಮದ ಭಾಗವಾಗಿ ಮಾಡಿದ್ದಾರೆ.
ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಹಾಗೂ ಗ್ರಾಮಾಂತರ ಠಾಣೆಯ ಇನ್ಸ್ ಪೆಕ್ಟರ್ ರಾಘವೇಂದ್ರ ಖಾಂಡ್ಕೆ ಅವರ ಮಾರ್ಗದರ್ಶನದಲ್ಲಿ ಪಿಎಸ್.ಐ ನಂದಿನಿ ಅವರ ತಂಡದ ಸಿಪಿಸಿ ನವೀನ್ ರವರು ಶಿವಮೊಗ್ಗ ಗ್ರಾಮಾಂತರ ಠಾಣಾ ಭಾಗದಲ್ಲಿ ಯಾವುದೇ ಮಕ್ಕಳು ತಮ್ಮ ಅರ್ಥಿಕ ಕಾರಣದಿಂದ ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಅರ್ಥಿಕ ಕಾರಣದಿಂದ ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟು ಶಿಕ್ಷಣದಿಂದ ವಂಚಿತರಾದ ಮಕ್ಕಳನ್ನು ಹುಡುಕಿ ಹುಡುಕಿ ಅವರಿಗೆ ಧೈರ್ಯ ತುಂಬಿ ಮಕ್ಕಳು ಹಾಗೂ ಅವರ ತಂದೆ ತಾಯಂದಿರ ಸಮಸ್ಯೆಗಳನ್ನು ಕೇಳಿ ಸ್ಥಳದಲ್ಲೇ ಅದಕ್ಕೊಂದು ಸರಿಯಾದ ಪರಿಹಾರ ನೀಡಿದ್ದಾರೆ.
ಇದನ್ನೂ ಓದಿ > ರಭಸವಾಗಿ ಹರಿಯುತ್ತಿರುವ ನದಿಯಲ್ಲಿ ಮೆಸ್ಕಾಂ ಸಿಬ್ಬಂದಿ ಕೆಲಸ!
ನಿಮ್ಮ ಜೊತೆ ಯಾವಾಗಲೂ ಪೊಲೀಸ್ ಇಲಾಖೆ ಇರುತ್ತದೆ. ನೀವು ಮಕ್ಕಳನ್ನು ಶಿಕ್ಷಣದಿಂದ ಯಾವುದೇ ಕಾರಣಕ್ಕೂ ಮಕ್ಕಳನ್ನು ವಂಚಿಸಬೇಡಿ. ಮಕ್ಕಳಿಗೆ ಸಮಾಜದಲ್ಲಿ ಶಿಕ್ಷಣ ಎಷ್ಟು ಮುಖ್ಯ? ಸಮಾಜದಲ್ಲಿ ಶಿಕ್ಷಣದ ಮಹತ್ವ ಏನು? ಶಿಕ್ಷಣದಿಂದ ವಂಚಿತರಾದರೇ ಮಕ್ಕಳಿಗೆ ಏನೆಲ್ಲಾ ಅಪಾಯ ಎಂಬುದನ್ನು ಶಾಲೆ ಬಿಟ್ಟ ಮಕ್ಕಳಿಗೆ, ಅವರ ತಂದೆ ತಾಯಂದಿರಿಗೆ ಅರಿವು ಮೂಡಿಸಿದ್ದಾರೆ. ತಮ್ಮ ವಿದ್ಯಾಭ್ಯಾಸವನ್ನು ನಾನಾ ಕಾರಣದಿಂದ ಅರ್ಧಕ್ಕೆ ನಿಲ್ಲಿಸಿದ ವಿದ್ಯಾರ್ಥಿ ಗಳನ್ನು ಗುರುತಿಸಿ ಅವರನ್ನು ಪೊಲೀಸರೇ ಶಾಲೆಗೆ ಸೇರಿಸುತ್ತಿದ್ದಾರೆ.
ಇದನ್ನೂ ಓದಿ > ಪೊಲೀಸ್ ಕವಾಯತು ಮೈದಾನ ಉದ್ಘಾಟಿಸಿದ ಐಜಿಪಿ
ಗ್ರಾಮಾಂತರ ಭಾಗದ ಮಡಿಕೆ ಚೀಲೂರು ಮತ್ತು ಹೊಳೆ ಮಡಿಕೆ ಚೀಲೂರಿನಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಅ ಮಕ್ಕಳ ಸಮಸ್ಯೆಗಳನ್ನು ಕೇಳಿ ಅವರ ಪೋಷಕರೊಂದಿಗೆ ಸಮಾಲೋಚನೆ ನಡೆಸಿ ಮಕ್ಕಳ ಮನವೊಲಿಸಿ ಶಾಲೆಗೆ ಮಕ್ಕಳನ್ನು ಕರೆದುಕೊಂಡು ಪುನಃ ಶಾಲೆಗೆ ಸೇರಿಸಿದ್ದಾರೆ ಜಿಲ್ಲೆಯಲ್ಲಿ ಇಂತಹ ಉತ್ತಮ ಕಾರ್ಯನಿರ್ವ ಹಿಸುತ್ತಿರುವ ಶಿವಮೊಗ್ಗ ಗ್ರಾಮಾಂತರ ಪೊಲೀಸರ ಈ ಒಳ್ಳೆಯ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದ್ದು, ಪೊಲೀಸರೆಂದರೆ ಭಯ ಅಲ್ಲ ಭರವಸೆ ಎಂದು ಶಿವಮೊಗ್ಗ ಪೊಲೀಸ್ ಇಲಾಖೆ ಸಾಭೀತುಪಡಿಸಿದೆ.















