ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಕುಂಟೆಹೊಳೆಯಲ್ಲಿ ರಭಸವಾಗಿ ಹರಿಯುತ್ತಿದ್ದ ನದಿಯಲ್ಲಿ ಈಜಿ ವಿದ್ಯುತ್ ಲೈನ್ ದುರಸ್ತಿ ಮಾಡಿದ ಮೆಸ್ಕಾಂ ಸಿಬ್ಬಂದಿಯ ಸಾಹಸಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಕುಂಟೆಹೊಳೆಯಲ್ಲಿ ಗಾಳಿ ಮಳೆಗೆ ವಿದ್ಯುತ್ ಲೈನ್ ತುಂಡಾಗಿ ಬಿದ್ದಿದ್ದವು. ರಿಪೇರಿಗೆ ಬಂದ ಮೆಸ್ಕಾಂ ಸಿಬ್ಬಂದಿ ರಭಸವಾಗಿ ಹರಿಯುತ್ತಿರುವ ನದಿಯಲ್ಲಿ ಇಳಿದು ವಿದ್ಯುತ್ ಲೈನ್ ಸರಿಪಡಿಸಿದ್ದಾರೆ.
ಇದನ್ನೂ ಓದಿ > BMW ಕಾರಿನಲ್ಲಿ ಗಾಂಜಾ ಸಾಗಾಟ, ವಿನೋಬನಗರ ಪೊಲೀಸರ ದಾಳಿ, ಗಾಂಜಾ ವಶ
ಮೆಸ್ಕಾಂ ಸಿಬ್ಬಂದಿಗಳಾದ ಆರಗ ಮೂಲದ ಆದರ್ಶ ಹಾಗೂ ಗುಡ್ಡೆಕೊಪ್ಪದ ಅಭಿಷೇಕ್ ತಮ್ಮ ಜೀವದ ಹಂಗನ್ನು ಲೆಕ್ಕಿಸದೆ ನದಿಗೆ ಇಳಿದು ದುರಸ್ತಿ ಕಾರ್ಯ ಕೈಗೊಂಡರು.
ಇದನ್ನೂ ಓದಿ > ಸಾಗರದಲ್ಲಿ ಗಾಂಜಾ, ಎಂಡಿಎಂಎ ಮಾರಾಟ, ಓರ್ವನ ಬಂಧನ
ಅಪಾಯದ ಪರಿಸ್ಥಿತಿಯಲ್ಲಿಯೂ ವಿದ್ಯುತ್ ಲೈನ್ ಅನ್ನು ಯಶಸ್ವಿಯಾಗಿ ಸರಿಪಡಿಸಿದ ಪರಿಣಾಮ, ಸ್ಥಳೀಯರಿಗೆ ಮತ್ತೆ ವಿದ್ಯುತ್ ಸಂಪರ್ಕ ಕಲ್ಪಿಸಲಾಯಿತು.
ಇದನ್ನೂ ಓದಿ > ಮಳೆ ಬಿರುಗಾಳಿಗೆ ಹಾರಿ ಹೋದ ಮನೆಯ ಮೇಲ್ಛಾವಣಿ!
ಈ ಇಬ್ಬರು ಲೈನ್‌ಮನ್‌ಗಳ ಕರ್ತವ್ಯನಿಷ್ಠೆ, ಧೈರ್ಯ ಹಾಗೂ ಸೇವಾ ಮನೋಭಾವಕ್ಕೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.















