ಶಿವಮೊಗ್ಗ: ನಗರದ ತುಂಗಾ ನದಿ ಸೇತುವೆ ಮೇಲಿನಿಂದ ಯುವತಿಯೊಬ್ಬಳು ನದಿಗೆ ಜಿಗಿದಿದ್ದು, ಅದೃಷ್ಟವಶಾತ್ ಆಕೆಯನ್ನು ರಕ್ಷಿಸಲಾಗಿದೆ.
ಯುವತಿಯೊಬ್ಬರು ರೈಲ್ವೆ ಸೇತುವೆ ಮೇಲಿನಿಂದ ತುಂಗಾ ನದಿಗೆ ಹಾರಿದ್ದಾರೆ. ನದಿಯಲ್ಲಿ ನೀರಿನ ಹರಿವು ಕಡಿಮೆ ಇದ್ದು, ಆಕೆಯು ಬಂಡೆಯೊಂದರ ಬಳಿ ಗಿಡಗಳ ಆಸರೆಯಲ್ಲಿ ನದಿ ಮಧ್ಯೆ ನಿಂತಿದ್ದರು. ವಿಷಯ ತಿಳಿದು ಅಗ್ನಿಶಾಮಕ ಸಿಬ್ಬಂದಿ ರಬ್ಬರ್ ಬೋಟ್ ಬಳಸಿ ಯುವತಿಯನ್ನು ರಕ್ಷಿಸಿದ್ದಾರೆ.
ಇದನ್ನೂ ಓದಿ > > ವಾಮಾಚಾರದ ಭಯ ಹುಟ್ಟಿಸಿ ಚಿನ್ನಾಭರಣ ವಂಚನೆ, ಕೆಲವೇ ಗಂಟೆಯಲ್ಲಿ ಆರೋಪಿ ಬಂಧನ, ಆಗಿದ್ದೇನು?
ಸದ್ಯ ಯುವತಿಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಕೆಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ > >ಕೆರೆಗೆ ಬಿದ್ದ ಕಾರಿನಿಂದ ಪೊಲೀಸ್ ಕಾನ್ಸ್ಟೆಬಲ್ ರಕ್ಷಣೆ, ಜೀವದ ಹಂಗು ತೊರೆದು ಯುವಕನ ಸಾಹಸ!
ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಹೆಚ್ ರಾಜು, ಡಿಎಫ್’ಓ ಅಶೋಕ್ ಕುಮಾರ್, ಅಗ್ನಿಶಾಮಕ ಠಾಣಾಧಿಕಾರಿ ಮಕ್ದು ಹುಸೇನ್ ಮತ್ತವರ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.














