ಶಿವಮೊಗ್ಗ: ಬಿಎಂಡಬ್ಲ್ಯು ಕಾರಿನಲ್ಲಿ ಮಾದಕ ವಸ್ತು ಗಾಂಜಾವನ್ನು ಸಾಗಿಸುತ್ತಿದ್ದ ಆರೋಪಿಯನ್ನು ವಿನೋಬನಗರ ಠಾಣೆಯ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. #Vinobanagar police station.
ಇದನ್ನೂ ಓದಿ > ಹೊಳೆಹಟ್ಟಿ ಬಳಿ ಮರಕ್ಕೆ ಡಿಕ್ಕಿ ಹೊಡೆದ ಬಸ್, ತಪ್ಪಿದ ಭಾರಿ ಅನಾಹುತ!
ಬಂಧಿತ ಆರೋಪಿಯನ್ನು ಮೌಲಾಸಾಬಾ ಕರ್ಜಗಿ (46) ಎಂದು ಗುರುತಿಸಲಾಗಿದೆ.
ಜುಲೈ 06 ರಂದು ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮಿನಕೊಪ್ಪ ಮಾರ್ಗವಾಗಿ ಮಾದಕ ವಸ್ತುವನ್ನು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ತಕ್ಷಣವೇ ಕಾರ್ಯಪ್ರವೃತ್ತರಾದ ವಿನೋಬನಗರ ಪಿಎಸ್‌ಐ ಹಾಗೂ ಸಿಬ್ಬಂದಿಗಳ ತಂಡವು ಸ್ಥಳದ ಮೇಲೆ ದಾಳಿ ನಡೆಸಿ ಬಂಧಿತ ಆರೋಪಿಯಿಂದ ಅಂದಾಜು 1,10,000/- ರೂಪಾಯಿ ಮೌಲ್ಯದ ಒಟ್ಟು 02 ಕೆಜಿ 110ಗ್ರಾಂ ತೂಕದ ಗಾಂಜಾ, ಸಾಗಾಟಕ್ಕೆ ಬಳಸಲಾಗಿದ್ದ ಐಷಾರಾಮಿ ಬಿಎಂಡಬ್ಲ್ಯು ಕಾರು ಹಾಗೂ ಒಂದು ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ > ಶಿವಮೊಗ್ಗ, ಬೆಳ್ಳಂಬೆಳಗ್ಗೆ ಎಸಿಎಫ್ ಕಿರಣ್ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ
ಈ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.















