ತರೀಕೆರೆ: ಚಲಿಸುತ್ತಿದ್ದ ಕ್ಯಾಂಟರ್.ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ನಂದಿಸಲು ಬಂದ ಅಗ್ನಿಶಾಮಕ ದಳ ಸಿಬ್ಬಂದಿಗೂ ಟಯರ್ ಬ್ಲಾಸ್ಟ್ ಆದ ರಭಸಕ್ಕೆ ಗಾಯಗಳಾದ ಘಟನೆ ಸಮೀಪದ ಲಿಂಗದಹಳ್ಳಿ ಹೋಬಳಿ ಶಾಂತವೇರಿ ಘಾಟ್.ನಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.
ಶಿವಮೊಗ್ಗದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಾಟ್ಸಪ್ ಗ್ರೂಪ್ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ
ಕ್ಯಾಂಟರ್ ಶಿವಮೊಗ್ಗದಿಂದ ಚಿಕ್ಕಮಗಳೂರಿಗೆ ಹೋಗುತ್ತಿತ್ತು ಎನ್ನಲಾಗಿದೆ. ಕ್ಯಾಂಟರ್.ನ ಇಂಜಿನ್.ನಲ್ಲಿ ವೈಯರ್ ಶಾರ್ಟ್ ಆಗಿ ಬೆಂಕಿ ಹತ್ತಿದ್ದಾಗ ಕ್ಯಾಂಟರ್.ನ ಚಾಲಕ ಮತ್ತು ಕ್ಲೀನರ್ ಕ್ಯಾಂಟರ್.ನಿಂದ ಕೆಳಕ್ಕೆ ಹಾರಿ ಅಪಾಯದಿಂದ ಪಾರಾಗಿದ್ದಾರೆ.
ಸುದ್ದಿ ತಿಳಿದ ಕೂಡಲೇ ತರೀಕೆರೆಯಿಂದ ಸ್ಥಳಕ್ಕೆ ಅಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಕ್ಯಾಂಟರ್.ಗೆ ಹತ್ತಿದ್ದ ಬೆಂಕಿ ನಂದಿಸುತ್ತಿದ್ದಾಗ ಕ್ಯಾಂಟರ್.ನ ಟಯರ್ ಬ್ಲಾಸ್ಟ್ ಆದ ರಭಸಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಶಿವಪ್ರಸಾದ್ ಅವರಿಗೆ ಹಣೆ ಮತ್ತು ಕೈಬೆರಳಿಗೆ ಪೆಟ್ಟಾಗಿದೆ.
ಇದನ್ನೂ ಓದಿ > > ಅಪಘಾತದಲ್ಲಿ ಗಾಯಗೊಂಡಿದ್ದ ಪೊಲೀಸ್ ಕಾನ್ಸ್ಟೇಬಲ್ ಸಾವು!
ಕೂಡಲೇ ಅವರಿಗೆ ತರೀಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಶಿವಮೊಗ್ಗ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಲಾಗಿದೆ ಎಂದು ತಿಳಿದು ಬಂದಿದೆ.














