ಶಿವಮೊಗ್ಗ: ದಸರಾ ಉತ್ಸವದ ಮೆರವಣಿಗೆಯಲ್ಲಿ ಸಕ್ರೆಬೈಲು ಆನೆ ಬಿಡಾರದಿಂದ ಕರೆತರಲಾಗಿದ್ದ ಸೋಮಣ್ಣ ಮತ್ತು ಬಹದ್ದೂರ್ ಆನೆಗಳು ಪರಸ್ಪರ ಗುದ್ದಾಡಿಕೊಂಡ ಘಟನೆಯಿಂದ ಗಾಂಧಿ ಬಜಾರ್‌ನಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಸಿತು.!
ಇದನ್ನೂ ಓದಿ > > ಶಿವಮೊಗ್ಗ ದಸರಾ, ಗಜಪಡೆಗೆ ಭರ್ಜರಿ ಸ್ವಾಗತ, ಆನೆಗಳಿಗೆ ತಾಲೀಮು ಹೇಗಿತ್ತು.?
ದಸರಾ ಮೆರವಣಿಗೆಯಲ್ಲಿ ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ಹೊತ್ತು ಸಾಗುತ್ತಿದ್ದ ಸೋಮಣ್ಣ ಆನೆ ಹಾಗೂ ಬಹದ್ದೂರ್ ಆನೆಗಳ ನಡುವೆ ಗುದ್ದಾಟ ನಡೆದಿದೆ ಎನ್ನಲಾಗಿದೆ. ಈ ವೇಳೆ ಸೋಮಣ್ಣ ಆನೆಯ ಮೇಲಿದ್ದ ದೇವಿಯ ವಿಗ್ರಹವು ಮಂಟಪ ಸಮೇತ ಕೆಳಕ್ಕೆ ಬಿದ್ದಿದೆ ಎಂದು ತಿಳಿದುಬಂದಿದೆ.

ಜನನಿಬಿಡ ಪ್ರದೇಶದಲ್ಲಿ ನಡೆದ ಘಟನೆಯಿಂದ ಸಾರ್ವಜನಿಕರು ಆತಂಕಕ್ಕೊಳಗಾದರು. ಘಟನೆಯ ಹಿನ್ನೆಲೆಯಲ್ಲಿ ಅಂಬಾರಿ ಮೆರವಣಿಗೆ ಸ್ಥಗಿತಗೊಂಡಿತು ಎಂದು ತಿಳಿದುಬಂದಿದೆ.
ಇದನ್ನೂ ಓದಿ > >ಶಿವಮೊಗ್ಗ: ಆಯುಧ ಪೂಜೆಗೆ ಕಾರು ಖರೀದಿಸಿ ಹೊರ ಬರ್ತಿದ್ದಂತೆ ಅಪಘಾತ!
ದಸರಾ ಸಂಭ್ರಮದ ನಡುವೆ ನಡೆದ ಈ ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಆನೆಗಳ ಗುದ್ದಾಟಕ್ಕೆ ನಿಖರ ಕಾರಣ ಹಾಗೂ ಘಟನೆಯಿಂದ ಉಂಟಾದ ಹಾನಿಯ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ














