• About Us
  • Advertise
  • Privacy & Policy
  • Contact Us
Monday, October 26, 2026
ರಾಕೇಶ್ ಸೋಮಿನಕೊಪ್ಪ ಸಾರಥ್ಯದಲ್ಲಿ
yuvadhwani
Subscribe
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
No Result
View All Result
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
No Result
View All Result
yuvadhwani
No Result
View All Result
  • Home
  • ಶಿವಮೊಗ್ಗ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
Home ಶಿವಮೊಗ್ಗ

ಶಿವಮೊಗ್ಗದ ದಸರಾದಲ್ಲಿ ಅವಘಡ! ಎಸ್’ಪಿ ನಿಖಿಲ್, ಶಾಸಕ ಚೆನ್ನಬಸಪ್ಪ ಮೊದಲ ರಿಯಾಕ್ಷನ್‌.!  

ರಾಕೇಶ್ ಸೋಮಿನಕೊಪ್ಪ by ರಾಕೇಶ್ ಸೋಮಿನಕೊಪ್ಪ
October 21, 2026
in ಶಿವಮೊಗ್ಗ
ಶಿವಮೊಗ್ಗದ ದಸರಾದಲ್ಲಿ ಅವಘಡ! ಎಸ್’ಪಿ ನಿಖಿಲ್, ಶಾಸಕ ಚೆನ್ನಬಸಪ್ಪ ಮೊದಲ ರಿಯಾಕ್ಷನ್‌.!  
Share on FacebookShare on TwitterShare on WhatsApp

ಶಿವಮೊಗ್ಗ: ಶಿವಮೊಗ್ಗ ಪಾಲಿಕೆ ದಸರಾದ ಕೊನೆಯ ದಿನವಾದ ಇಂದು ಜಂಬೂ ಸವಾರಿ ವೇಳೆ ಆನೆಗಳು ದಿಕ್ಕೆಟ್ಟು ಓಡಿ ಅವಘಡ ಸೃಷ್ಠಿಯಾಗಿರುವ ಘಟನೆ ಕುರಿತಂತೆ ಶಾಸಕ ಚನ್ನಬಸಪ್ಪ ಹಾಗೂ ಜಿಲ್ಲಾ ರಕ್ಷಣಾಧಿಕಾರಿ ನಿಖಲ್ ಸಾರ್ವಜನಿರು ಆತಂಕ ಪಡದಂತೆ ಮನವಿ ಮಾಡಿದ್ದಾರೆ.

ಘಟನೆ ಕುರಿತಂತೆ ಮಾತನಾಡಿರುವ ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್, ಮೆರವಣಿಗೆ ಹೊರಟು ಸುಮಾರು 500 ಮೀಟರ್ ತಲುಪುವ ವೇಳೆ ಅಂಬಾರಿ ಹೊತ್ತ ಸೋಮಣ್ಣ ಎಂಬ ಆನೆ ಏಕಾಏಕಿ ಹಿಂದಕ್ಕೆ ಓಡಿ ಹೋಗಿದೆ. ಅದೃಷ್ಠವಷಾತ್ ಯಾರಿಗೂ ಯಾವುದೇ ರೀತಿಯಲ್ಲಿ ಹಾನಿಯಾಗಿಲ್ಲ. ಆದರೆ, ಚಾಮುಂಡೇಶ್ವರಿ ವಿಗ್ರಹ ಹಾಗೂ ಅಂಬಾರಿ ಕೆಳಕ್ಕೆ ಬಿದ್ದು ಹಾನಿಯಾಗಿದ್ದು, ತಕ್ಷಣವೇ ಅದನ್ನು ತೆರವುಗೊಳಿಸಲಾಗಿದೆ. ಆದರೆ, ಕೆಲವು ವಾಹನಗಳು ಜಖಂಗೊಂಡಿವೆ ಎಂದು ಮಾಹಿತಿ ನೀಡಿದ್ದಾರೆ. ಘಟನೆ ನಡೆದ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಅವರು ಸ್ಥಳಕ್ಕೆ ಆಗಮಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಇನ್ನು, ಘಟನೆ ಕುರಿತಂತೆ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ಇಂತಹ ಸಂದರ್ಭದಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸಹಕಾರ ನೀಡಿ. ಯಾರೂ ಸ್ಥಳಕ್ಕೆ ಆಗಮಿಸಬೇಡಿ. ಎಲ್ಲರೂ ಫ್ರೀಡಂ ಪಾರ್ಕ್’ಗೆ ತೆರಳಿ, ಅಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ > > ಶಿವಮೊಗ್ಗ ದಸರಾ, ಗಜಪಡೆಗೆ ಭರ್ಜರಿ ಸ್ವಾಗತ, ಆನೆಗಳಿಗೆ ತಾಲೀಮು ಹೇಗಿತ್ತು.?

ಆತಂಕ ಬೇಡ : ಶಾಸಕ ಚನ್ನಬಸಪ್ಪ ಮನವಿ

ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಆನೆಗಳ ನಡುವೆ ಗುದ್ದಾಟ ಸಂಭವಿಸಿದ ಹಿನ್ನೆಲೆಯಲ್ಲಿ ಈ ಬಾರಿ ಅಂಬಾರಿ ಉತ್ಸವ ಇರುವುದಿಲ್ಲ ಎಂದು ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ತಿಳಿಸಿದ್ದಾರೆ.

ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡದೆ, ಆತಂಕಕ್ಕೆ ಒಳಗಾಗದೆ ದಸರಾ ಸಂಪ್ರದಾಯದ ಧಾರ್ಮಿಕ ಉತ್ಸವಗಳಲ್ಲಿ ಶ್ರದ್ಧಾ-ಭಕ್ತಿಯಿಂದ ಪಾಲ್ಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

ನಗರದ ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾಗಿರುವ ಅಂಬಾರಿ ಉತ್ಸವ ಈ ಬಾರಿ ನಡೆಯುವುದಿಲ್ಲವಾದರೂ, ಸಾಂಪ್ರದಾಯಿಕ ದೇವಾನುದೇವತೆಗಳ ಉತ್ಸವಗಳು ಹಾಗೂ ಅಲ್ಲಮಪ್ರಭು ಮೈದಾನದಲ್ಲಿ ನಡೆಯಲಿರುವ ಬನ್ನಿ ಮುಡಿಯುವ ಧಾರ್ಮಿಕ ಕಾರ್ಯಕ್ರಮಗಳು ಎಂದಿನಂತೆ ನಡೆಯಲಿವೆ ಎಂದು ಶಾಸಕರು ಸ್ಪಷ್ಟಪಡಿಸಿದ್ದಾರೆ.

ವದಂತಿಗಳಿಗೆ ಕಿವಿಗೊಡದಂತೆ ಮನವಿ

ಈ ಕುರಿತು ಸಾರ್ವಜನಿಕರಿಗೆ ಮನವಿ ಮಾಡಿರುವ ಶಾಸಕ ಎಸ್.ಎನ್. ಚನ್ನಬಸಪ್ಪ, ಶಿವಮೊಗ್ಗ ನಗರದ ಸಮಸ್ತ ನಾಗರಿಕರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು. ಯಾವುದೇ ರೀತಿಯ ಆತಂಕ ಅಥವಾ ಗೊಂದಲಕ್ಕೆ ಒಳಗಾಗದೆ ಸಾಂಪ್ರದಾಯಿಕ ದೇವಾನುದೇವತೆಗಳ ಉತ್ಸವಗಳಲ್ಲಿ ಎಂದಿನಂತೆ ಶ್ರದ್ಧಾ-ಭಕ್ತಿಯಿಂದ ಪಾಲ್ಗೊಳ್ಳಬೇಕು ಎಂದು ತಿಳಿಸಿದ್ದಾರೆ.

ದಸರಾ ಉತ್ಸವದ ಸಂದರ್ಭದಲ್ಲಿ ನಡೆದ ಘಟನೆಯಿಂದ ಸಾರ್ವಜನಿಕರಲ್ಲಿ ಉಂಟಾಗಿರುವ ಆತಂಕದ ನಡುವೆ, ಧಾರ್ಮಿಕ ಕಾರ್ಯಕ್ರಮಗಳ ಕುರಿತು ಸ್ಪಷ್ಟನೆ ನೀಡಿರುವ ಶಾಸಕರು, ಜನರು ಶಾಂತವಾಗಿ ಉತ್ಸವಗಳಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ > >  ಶಿವಮೊಗ್ಗ ದಸರಾ, ಆನೆಗಳ ಗುದ್ದಾಟ!, ಕೆಳಗೆ ಬಿದ್ದ ಅಂಬಾರಿ, ಮೆರವಣಿಗೆ ಈಗ ಸ್ಥಗಿತ!

ಅಂಬಾರಿ ಉತ್ಸವ ಇರುವುದಿಲ್ಲ

ಶಿವಮೊಗ್ಗ ದಸರಾ ಮೆರವಣಿಗೆಯ ವೇಳೆ ಸೋಮಣ್ಣ ಮತ್ತು ಬಹದ್ದೂರ್ ಆನೆಗಳ ನಡುವೆ ಗುದ್ದಾಟ ನಡೆದ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ದೇವಿಯ ವಿಗ್ರಹವಿದ್ದ ಮಂಟಪ ಕೆಳಕ್ಕೆ ಬಿದ್ದ ಘಟನೆ ಆತಂಕಕ್ಕೆ ಕಾರಣವಾಗಿತ್ತು. ಈ ಬೆಳವಣಿಗೆಯ ಬಳಿಕ ಈ ಬಾರಿ ಅಂಬಾರಿ ಉತ್ಸವವನ್ನು ನಡೆಸದಿರಲು ನಿರ್ಧರಿಸಲಾಗಿದೆ ಎಂದು ಶಾಸಕ ಚನ್ನಬಸಪ್ಪ ತಿಳಿಸಿದ್ದಾರೆ.

ಆದರೆ, ಅಂಬಾರಿ ಉತ್ಸವ ಇಲ್ಲದಿದ್ದರೂ ನಗರದ ಸಾಂಪ್ರದಾಯಿಕ ಧಾರ್ಮಿಕ ಆಚರಣೆಗಳು ಮುಂದುವರಿಯಲಿವೆ. ದಸರಾ ಸಂಪ್ರದಾಯದ ಭಾಗವಾಗಿ ನಡೆಯುವ ದೇವಾನುದೇವತೆಗಳ ಉತ್ಸವಗಳು ಹಾಗೂ ಬನ್ನಿ ಮುಡಿಯುವ ಕಾರ್ಯಕ್ರಮಗಳು ನಿಗದಿತ ರೀತಿಯಲ್ಲಿ ನಡೆಯಲಿವೆ ಎಂದು ಅವರು ಹೇಳಿದ್ದಾರೆ.

ಅಲ್ಲಮಪ್ರಭು ಮೈದಾನದಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮ

ಶಿವಮೊಗ್ಗ ನಗರದ ಐತಿಹಾಸಿಕ ಅಲ್ಲಮಪ್ರಭು ಮೈದಾನದಲ್ಲಿ (ಫ್ರೀಡಂ ಪಾರ್ಕ್) ಪವಿತ್ರ ಬನ್ನಿ ಮುಡಿಯುವ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಪೂಜಾ ಕೈಂಕರ್ಯದಲ್ಲಿ ಪಾಲ್ಗೊಳ್ಳಬೇಕು ಎಂದು ಶಾಸಕ ಚನ್ನಬಸಪ್ಪ ವಿನಂತಿಸಿದ್ದಾರೆ.

ದಸರಾ ಹಬ್ಬದ ಪ್ರಮುಖ ಧಾರ್ಮಿಕ ಆಚರಣೆಗಳಲ್ಲಿ ಒಂದಾದ ಬನ್ನಿ ಮುಡಿಯುವ ಕಾರ್ಯಕ್ರಮವು ಭಕ್ತಿಭಾವದಿಂದ ನಡೆಯಲಿದ್ದು, ಸಾರ್ವಜನಿಕರು ಯಾವುದೇ ಗೊಂದಲಕ್ಕೆ ಒಳಗಾಗದೆ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಅವರು ತಿಳಿಸಿದ್ದಾರೆ.

ಧಾರ್ಮಿಕ ಸಂಪ್ರದಾಯಗಳಿಗೆ ಅಡ್ಡಿಯಿಲ್ಲ

ಅಂಬಾರಿ ಉತ್ಸವ ರದ್ದಾಗಿರುವ ಹಿನ್ನೆಲೆಯಲ್ಲಿ ದಸರಾ ಆಚರಣೆಗಳ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲ ಉಂಟಾಗದಂತೆ ಶಾಸಕ ಚನ್ನಬಸಪ್ಪ ಸ್ಪಷ್ಟನೆ ನೀಡಿದ್ದಾರೆ. ಅಂಬಾರಿ ಉತ್ಸವ ನಡೆಯದಿದ್ದರೂ ದೇವಾನುದೇವತೆಗಳ ಸಾಂಪ್ರದಾಯಿಕ ಉತ್ಸವಗಳು ಹಾಗೂ ಅಲ್ಲಮಪ್ರಭು ಮೈದಾನದ ಬನ್ನಿ ಮುಡಿಯುವ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಅವರು ತಿಳಿಸಿದ್ದಾರೆ.

ಒಟ್ಟಿನಲ್ಲಿ, ಶಿವಮೊಗ್ಗ ದಸರಾ ಉತ್ಸವದಲ್ಲಿ ಈ ಬಾರಿ ಅಂಬಾರಿ ಮೆರವಣಿಗೆ ಇರುವುದಿಲ್ಲ. ಆದರೆ ಧಾರ್ಮಿಕ ಆಚರಣೆಗಳು ಮುಂದುವರಿಯಲಿದ್ದು, ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡದೆ ಶಾಂತಿ ಮತ್ತು ಭಕ್ತಿಯಿಂದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಶಾಸಕ ಎಸ್.ಎನ್. ಚನ್ನಬಸಪ್ಪ ಮನವಿ ಮಾಡಿದ್ದಾರೆ.

Tags: kannada news livelatest newsmalnad newsMishap at Shivamogga Dasara! Initial reactions from SP Nikhil and MLA Chennabasappa!MLA Chennabasappa!shimogashivamoggaSP Nikhilಶಿವಮೊಗ್ಗ
Previous Post

ಶಿವಮೊಗ್ಗ ದಸರಾ, ಆನೆಗಳ ಗುದ್ದಾಟ!, ಕೆಳಗೆ ಬಿದ್ದ ಅಂಬಾರಿ, ಮೆರವಣಿಗೆ ಈಗ ಸ್ಥಗಿತ!

Next Post

ಶಿವಮೊಗ್ಗ ದಸರಾ ಆನೆ ಅವಘಡದ ಬೆನ್ನಲ್ಲೇ ಅರಣ್ಯ ಇಲಾಖೆ ಅಲರ್ಟ್‌: ಜಂಬೂಸವಾರಿಗೆ ಹೊಸ ರೂಲ್ಸ್‌!

ರಾಕೇಶ್ ಸೋಮಿನಕೊಪ್ಪ

ರಾಕೇಶ್ ಸೋಮಿನಕೊಪ್ಪ

Next Post
ಶಿವಮೊಗ್ಗ ದಸರಾ, ಆನೆಗಳ ಗುದ್ದಾಟ!, ಕೆಳಗೆ ಬಿದ್ದ ಅಂಬಾರಿ,  ಮೆರವಣಿಗೆ ಈಗ ಸ್ಥಗಿತ!

ಶಿವಮೊಗ್ಗ ದಸರಾ ಆನೆ ಅವಘಡದ ಬೆನ್ನಲ್ಲೇ ಅರಣ್ಯ ಇಲಾಖೆ ಅಲರ್ಟ್‌: ಜಂಬೂಸವಾರಿಗೆ ಹೊಸ ರೂಲ್ಸ್‌!

  • Trending
  • Comments
  • Latest
ನ್ಯಾಷನಲ್ ಪಬ್ಲಿಕ್ ಶಾಲೆಯ ಸಾಧನೆ, ಸಿಬಿಎಸ್ಇ 10ನೇ ತರಗತಿಯಲ್ಲಿ 100% ಫಲಿತಾಂಶ

ನ್ಯಾಷನಲ್ ಪಬ್ಲಿಕ್ ಶಾಲೆಯ ಸಾಧನೆ, ಸಿಬಿಎಸ್ಇ 10ನೇ ತರಗತಿಯಲ್ಲಿ 100% ಫಲಿತಾಂಶ

April 16, 2026
ಎಸ್.ಎಸ್.ಎಲ್.ಸಿ: ಎನ್ಇಎಸ್ ಶಾಲೆಗಳಿಗೆ ಉತ್ತಮ ಫಲಿತಾಂಶ

ಎಸ್.ಎಸ್.ಎಲ್.ಸಿ: ಎನ್ಇಎಸ್ ಶಾಲೆಗಳಿಗೆ ಉತ್ತಮ ಫಲಿತಾಂಶ

April 24, 2026
ಹೊಳೆಹೊನ್ನೂರು, ಸಿಕ್ಕ ಬಂಗಾರ ಮರಳಿಸಿದ ತಂದೆ, ಮಗ!

ಹೊಳೆಹೊನ್ನೂರು, ಸಿಕ್ಕ ಬಂಗಾರ ಮರಳಿಸಿದ ತಂದೆ, ಮಗ!

July 10, 2026
ಶಿವಮೊಗ್ಗ ದಸರಾ, ಆನೆಗಳ ಗುದ್ದಾಟ!, ಕೆಳಗೆ ಬಿದ್ದ ಅಂಬಾರಿ,  ಮೆರವಣಿಗೆ ಈಗ ಸ್ಥಗಿತ!

ಶಿವಮೊಗ್ಗ ದಸರಾ, ಆನೆಗಳ ಗುದ್ದಾಟ!, ಕೆಳಗೆ ಬಿದ್ದ ಅಂಬಾರಿ, ಮೆರವಣಿಗೆ ಈಗ ಸ್ಥಗಿತ!

October 21, 2026
ಶಿವಮೊಗ್ಗ, ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ, ವಿದ್ಯಾರ್ಥಿನಿ ಸಾವು

ಶಿವಮೊಗ್ಗ, ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ, ವಿದ್ಯಾರ್ಥಿನಿ ಸಾವು

4
ಶಿವಮೊಗ್ಗ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು, ಆಗಿದ್ದೇನು?

ಶಿವಮೊಗ್ಗ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು, ಆಗಿದ್ದೇನು?

4
ಶಿಕಾರಿಪುರ | ಶಾಲಾ ಕೊಠಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಶಿಕ್ಷಕ

ಮಾವನನ್ನೇ ಕುತ್ತಿಗೆ ಸೀಳಿ ಹತ್ಯೆಗೆ ಯತ್ನಿಸಿದ ಅಳಿಯ, ಕಾರಣವೇನು?

3
ಶಿವಮೊಗ್ಗ, ಬೈಕ್ ವೀಲಿಂಗ್ ಮಾಡಿ ವಿಡಿಯೋ ಹರಿಬಿಟ್ಟ ಯುವಕರು, ಮುಂದೇನಾಯ್ತು?

ಶಿವಮೊಗ್ಗ, ಬೈಕ್ ವೀಲಿಂಗ್ ಮಾಡಿ ವಿಡಿಯೋ ಹರಿಬಿಟ್ಟ ಯುವಕರು, ಮುಂದೇನಾಯ್ತು?

3
ಶಿವಮೊಗ್ಗ, 72 ದ್ವಿಚಕ್ರ ವಾಹನಗಳು ವಶಕ್ಕೆ, ಮಾಲೀಕರಿಗೆ ದಂಡ, ಪೊಲೀಸರ ಎಚ್ಚರಿಕೆ!, ಕಾರಣವೇನು?

ಶಿವಮೊಗ್ಗ, 72 ದ್ವಿಚಕ್ರ ವಾಹನಗಳು ವಶಕ್ಕೆ, ಮಾಲೀಕರಿಗೆ ದಂಡ, ಪೊಲೀಸರ ಎಚ್ಚರಿಕೆ!, ಕಾರಣವೇನು?

October 26, 2026
ಪತ್ರಿಕಾ ವಿತರಕರ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಪತ್ರಿಕಾ ವಿತರಕರ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

October 26, 2026
ಹೊಳೆಹೊನ್ನೂರು | ವಾಹನ ಡಿಕ್ಕಿ, ಅರಸೀಕೆರೆ ಮೂಲದ ವ್ಯಕ್ತಿ ಸಾವು!

ವಿಷ ಸೇವಿಸಿದ್ದ ಗೃಹಿಣಿ ಆಸ್ಪತ್ರೆಯಲ್ಲಿ ಸಾವು, ಕಾರಣವೇನು?

October 26, 2026
ಅ.30ರಿಂದ ಕೃಷಿ ಮೇಳ, 600ಕ್ಕೂ ಹೆಚ್ಚು ಮಳಿಗೆಗಳು, AI ತಂತ್ರಜ್ಞಾನ, ಹೊಸ ತಳಿಗಳ ಅನಾವರಣ!

ಅ.30ರಿಂದ ಕೃಷಿ ಮೇಳ, 600ಕ್ಕೂ ಹೆಚ್ಚು ಮಳಿಗೆಗಳು, AI ತಂತ್ರಜ್ಞಾನ, ಹೊಸ ತಳಿಗಳ ಅನಾವರಣ!

October 26, 2026

Recent News

Facebook Twitter
yuvadhwani

ಶಿವಮೊಗ್ಗ ಸುದ್ದಿಗಳ ಜೊತೆಗೆ ರಾಜ್ಯದ ಪ್ರಚಲಿತ ವಿದ್ಯಮಾನಗಳ ಸುದ್ದಿಗಳನ್ನು ಓದಲು ಯುವಧ್ವನಿ ನ್ಯೂಸ್ ಪೋರ್ಟಲ್ ಗೆ ತಮಗೆ ಸುಸ್ವಾಗತ. ವಿಭಿನ್ನ, ವಿಶೇಷ, ಉತ್ತಮ ಗುಣಮಟ್ಟದ ಸುದ್ದಿಗಳನ್ನು ಓದುಗ ಮನಸ್ಸುಗಳಿಗೆ ಮುಟ್ಟಿಸಲು ಬದ್ದರಾಗಿದ್ದೇವೆ.

Follow Us

Browse by Category

  • Uncategorized
  • what is the reason?
  • ಅಂಕಣಗಳು
  • ಆರೋಗ್ಯ
  • ಕ್ರೈಂ ನ್ಯೂಸ್
  • ತೀರ್ಥಹಳ್ಳಿ
  • ದೇಶ
  • ಭದ್ರಾವತಿ
  • ರಾಜ್ಯ
  • ವಿಶೇಷ
  • ಶಿಕಾರಿಪುರ
  • ಶಿವಮೊಗ್ಗ
  • ಸಾಗರ
  • ಸೊರಬ
  • ಹೊಸನಗರ

Recent News

ಶಿವಮೊಗ್ಗ, 72 ದ್ವಿಚಕ್ರ ವಾಹನಗಳು ವಶಕ್ಕೆ, ಮಾಲೀಕರಿಗೆ ದಂಡ, ಪೊಲೀಸರ ಎಚ್ಚರಿಕೆ!, ಕಾರಣವೇನು?

ಶಿವಮೊಗ್ಗ, 72 ದ್ವಿಚಕ್ರ ವಾಹನಗಳು ವಶಕ್ಕೆ, ಮಾಲೀಕರಿಗೆ ದಂಡ, ಪೊಲೀಸರ ಎಚ್ಚರಿಕೆ!, ಕಾರಣವೇನು?

October 26, 2026
ಪತ್ರಿಕಾ ವಿತರಕರ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಪತ್ರಿಕಾ ವಿತರಕರ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

October 26, 2026

Copyright © 2026 Yuva Dhwani. Designed by KIPL