ಹೊಳೆಹೊನ್ನೂರು: ಜಮೀನು ಹಾಗೂ ಅದರ ಹಣದ ವಿಚಾರವಾಗಿ ನಡೆದ ಜಗಳದಲ್ಲಿ ಅಣ್ಣನೇ ಸ್ವಂತ ತಮ್ಮನನ್ನು ಕುಡುಗೋಲಿನಿಂದ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ದಾಸರಕಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಸಂತೋಷ್(40) ಹಾಗೂ ಆರೋಪಿಯನ್ನು ರಾಮಪ್ಪ(40) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ > ಕಾರಿನಲ್ಲಿ ಕಾಣಿಸಿಕೊಂಡ ಆಕಸ್ಮಿಕ ಬೆಂಕಿ, ಹೊತ್ತಿ ಉರಿದ ಕಾರು
ಘಟನೆ ಹಿನ್ನೆಲೆ
ಪಾರ್ವತಪ್ಪ ಎನ್ನುವವರಿಗೆ ರಮೇಶ್, ಶ್ರೀನಿವಾಸ ಮತ್ತು ಸಂತೋಷ ಎಂಬ ಮೂವರು ಪುತ್ರರು ಇದ್ದರು. ಎಲ್ಲರೂ ಮದುವೆಯಾಗಿ ಪ್ರತ್ಯೇಕ ಕುಟುಂಬ ನಡೆಸುತ್ತಿದ್ದರು. ಸುಮಾರು 10-12 ವರ್ಷಗಳ ಹಿಂದೆ ಸಂತೋಷ ಮತ್ತು ಆತನ ಪತ್ನಿ ರಂಜಿತಾ ನಡುವೆ ವೈಮನಸ್ಸು ಉಂಟಾಗಿ, ರಂಜಿತಾ ತನ್ನ ಇಬ್ಬರು ಮಕ್ಕಳೊಂದಿಗೆ ತವರು ಮನೆ ಹಾರನಹಳ್ಳಿಯಲ್ಲಿ ವಾಸವಾಗಿದ್ದಳು. ಆ ಬಳಿಕ ಸಂತೋಷ ತಂದೆಯೊಂದಿಗೆ ವಾಸಿಸುತ್ತಿದ್ದನು. ಇತ್ತೀಚೆಗೆ ಕುಟುಂಬದ ಜಮೀನನ್ನು ಮೂವರು ಮಕ್ಕಳಿಗೆ ಸಮಾನವಾಗಿ ಹಂಚಿಕೆ ಮಾಡಲಾಗಿದ್ದು, ಪಾರ್ವತಮ್ಮ ಜೀವನೋಪಾಯಕ್ಕಾಗಿ ಉಳಿಸಿಕೊಂಡಿದ್ದ 6 ಗುಂಟೆ ಜಮೀನನ್ನು ಮಾರಾಟ ಮಾಡಿದ್ದರು. ಮಾರಾಟದಿಂದ ಬಂದ ಹಣವನ್ನು ತಂದೆ ಹಾಗೂ ಸಂತೋಷ ಇಟ್ಟುಕೊಂಡಿದ್ದ ವಿಚಾರವಾಗಿ ಹಿರಿಯ ಪುತ್ರ ರಮೇಶ್ ಅಸಮಾಧಾನ ಹೊಂದಿದ್ದನೆಂದು ತಿಳಿದುಬಂದಿದೆ. ಇದೇ ವಿಚಾರಕ್ಕೆ ಸಂಬಂಧಿಸಿ ರಮೇಶ್ ಆಗಾಗ ಸಂತೋಷನಿಗೆ ಬೆದರಿಕೆ ಹಾಕುತ್ತಿದ್ದ. ಮಂಗಳವಾರ ಬೆಳಗ್ಗೆ ಸುಮಾರು 9.45 ಗಂಟೆ ವೇಳೆ ಮನೆಯಲ್ಲಿ ವಾಗ್ವಾದ ಉಂಟಾಗಿ, ಕೋಪಗೊಂಡ ರಮೇಶ್ ಮನೆಯಲ್ಲಿದ್ದ ಕುಡುಗೋಲಿನಿಂದ ಸಂತೋಷನ ಬೆನ್ನು, ತೊಡೆ ಹಾಗೂ ಭುಜದ ಭಾಗಕ್ಕೆ ಬಲವಾಗಿ ಹ¯್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇದನ್ನೂ ಓದಿ > ನೀಟ್ ಪರೀಕ್ಷೆ ಅಕ್ರಮ, ಶಿವಮೊಗ್ಗದಲ್ಲಿ ಸಂಸದರ ಮನೆಗೆ ಯುವ ಕಾಂಗ್ರೆಸ್ ಮುತ್ತಿಗೆ ಯತ್ನ
ಗಾಯಗೊಂಡ ಸಂತೋಷನನ್ನು ಮೊದಲು ಹೊಳೆಹೊನ್ನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಧ್ಯಾಹ್ನ 12.45 ಗಂಟೆ ಸುಮಾರಿಗೆ ಸಂತೋಷ ಮೃತಪಟ್ಟಿದ್ದಾನೆ.
ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ರಾಮಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.
ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.















