ತೀರ್ಥಹಳ್ಳಿ: ಕಳೆದ ಎಪ್ರಿಲ್ ತಿಂಗಳಿನಲ್ಲಿ ತಾಲೂಕಿನ ಲಕ್ಕುಂದ ಗ್ರಾಮದಲ್ಲಿ ಒಂಟಿ ವೃದ್ಧೆ ಮನೆಯಲ್ಲಿದ್ದ ವೇಳೆ ನಡೆದ ಭಾರೀ ದರೋಡೆ ಪ್ರಕರಣವನ್ನು ಪತ್ತೆ ಮಾಡಲಾಗಿದ್ದು, ಕದ್ದ ಮಾಲಿನ ಸಹಿತ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ ಎಪ್ರಿಲ್ 21ರಂದು ಲಕ್ಕುಂದ ಗ್ರಾಮದ ಮನೆಯೊಂದರಲ್ಲಿ ಹಾಡಹಗಲೇ ದರೋಡೆ ಸಂಭವಿಸಿ ಮನೆಯಲ್ಲಿ ಒಬ್ಬರೇ ಇದ್ದ 74 ವರ್ಷದ ವೃದ್ಧೆಯನ್ನು ಕಟ್ಟಿಹಾಕಿ, ಅವರ ಮೈಮೇಲಿದ್ದ ಹಾಗೂ ಬೀರುವಿನಲ್ಲಿದ್ದ ಸುಮಾರು 18 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದರೋಡೆಕೋರರು ದೋಚಿದ್ದರು.
ಈ ಪ್ರಕರಣದ ಬೆನ್ನತ್ತಿದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ನಾಲ್ವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ.
ಇದನ್ನೂ ಓದಿ > ಸಾಗರ, ಭೀಕರ ಅಪಘಾತ, ಬೈಕ್ ಸಂಪೂರ್ಣ ಭಸ್ಮ, ಯುವಕ ಸ್ಥಳದಲ್ಲೇ ಸಾವು!
ಬಂಧಿತ ಆರೋಪಿಗಳನ್ನು ಭದ್ರಾವತಿಯ ಭರತ್(25), ಮಹಮ್ಮದ್ ಇಬ್ರಾಹಿಂದ ಮೀರಾ ಟಕ್ಕರ್(24), ಶಿವಮೊಗ್ಗದ ಅಶೋಕ(28) ಹಾಗೂ ತೀರ್ಥಹಳ್ಳಿ ಮೇಲಿನಕುರುವಳ್ಳಿಯ ಪಾರ್ತಿಪ್(25) ಎಂದು ಗುರುತಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎ.ಜಿ. ಕಾರಿಯಪ್ಪ, ತೀರ್ಥಹಳ್ಳಿ ಪೊಲೀಸ್ ಉಪಾಧೀಕ್ಷಕ ಅರವಿಂದ ಕಲಗುಜ್ಜಿ ಅವರುಗಳ ಮಾರ್ಗದರ್ಶನದಲ್ಲಿ ಮಾಳೂರು ಸರ್ಕಲ್ ಇನ್ಸ್’ಪೆಕ್ಟರ್ ಎಲ್. ರಾಜಶೇಖರ್ ಅವರ ಸಾರಥ್ಯದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು.
ಆಗುಂಬೆ ಪೊಲೀಸ್ ಠಾಣೆಯ ಪಿಎಸ್’ಐ ಶಿವನಗೌಡ, ಮಾಳೂರು ಪಿಐಎಸ್ ಸುನಿಲ್, ಎಎಸ್’ಐ ಉಮೇಶ್ ನಾಯ್ಕ, ಎಎಸ್’ಐ ರಂಗನಾಥ್ ಸಿಬ್ಬಂದಿಯವರಾದ ಅಂಗೇಗೌಡ, ಸುರಕ್ಷೀತ್, ಕಿರಣ್ ಕುಮಾರ್, ಕುಮಾರ್ ಜೋಸೆಫ್ ಮ್ಯಾಥ್ಯು, ಸುರೇಶ್ ನಾಯ್ಕ, ಜಯಕುಮಾರ್, ರಮೇಶ ಅಕ್ಕಸಾಲಿ, ವಿನಯ್ ಕುಮಾರ್, ಉಲ್ಲಾಸ್ ನಾಯ್ಕ, ಪ್ರಶಾಂತ.ಓ. ಅನಿಲ್, ನಾಗಾರ್ಜುನ್, ವಿಶ್ವನಾಥ, ಸುನಿಲ್, ಎಚ್.ಸಿ. ರವಿ, ಅರವಿಂದ, ಚಾಲಕರಾದ ಅವಿನಾಶ, ತಾಂತ್ರಿಕ ವಿಭಾಗದ ಸಿಬ್ಬಂದಿಯವರಾದ ಗುರುರಾಜ್ ಮತ್ತು ಇಂದ್ರೇಶ ರವರ ತಂಡವನ್ನು ರಚನೆ ಮಾಡಿ ಕಾರ್ಯಾಚರಣೆ ನಡೆಸಲಾಗಿತ್ತು.
ಇದನ್ನೂ ಓದಿ > ಮಹಿಳೆಯನ್ನು ಕಟ್ಟಿ ಹಾಕಿ ದರೋಡೆ, ಲಕ್ಷಾಂತರ ರೂ ಚಿನ್ನಾಭರಣ ಲೂಟಿ!
ಏನೆಲ್ಲಾ ವಶಪಡಿಸಿಕೊಳ್ಳಲಾಗಿದೆ?
70 ಗ್ರಾಂ ಬಂಗಾರದ ಆಭರಣಗಳು, ಅಂದಾಜು ಮೌಲ್ಯ 10 ಲP್ಷÀ 80,000 ರೂ.ಗಳು
56 ಗ್ರಾಂ ಬೆಳ್ಳ ವಸ್ತುಗಳ, ಅಂದಾಜು ಮೌಲ್ಯ 16,700 ರೂ.ಗಳು
ಕೃತ್ಯಕ್ಕೆ ಬಳಸಿದ ಬಿಳಿ ಬಣ್ಣದ 50 ಸಾವಿರ ರೂ ಮೌಲ್ಯದ ಸ್ಕೂಟಿ
ರೂ.ಗಳು
ಕೃತ್ಯಕ್ಕೆ ಬಳಸಿದ 50 ಸಾವಿರ ರೂ. ಮೌಲ್ಯದ ಸ್ಕೂಟಿ
ಒಟ್ಟು 11,96700 ರೂ.ಗಳ ಮಾಲುಗಳ ವಶ















