ಶಿವಮೊಗ್ಗ : ಶಿಕಾರಿಪುರ ತಾಲ್ಲೂಕಿನ ಅರಶಿಣಗೆರೆ ಗ್ರಾಮದಲ್ಲಿ ಕಳೆದ ರಾತ್ರಿ ಮಳೆ– ಗಾಳಿಯಿಂದಾಗಿ ಮನೆ ಮುಂದಿನ ತಗಡಿನ ಚಾವಣಿ ಕುಸಿದು ಬಿದ್ದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ನಿಸಾರ್ ಅಹಮದ್ (52) ಮೃತ ವ್ಯಕ್ತಿ. ಅವರು ರಾತ್ರಿ ಊಟವಾದ ನಂತರ ಮನೆ ಎದುರು ಕುಳಿತಿದ್ದರು. ಈ ವೇಳೆ ಗಾಳಿ ಮಳೆ ಆರಂಭಗೊಂಡು ಒಮ್ಮೆಲೆ ಚಾವಣಿ ಮೈಮೇಲೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು.
ಇದನ್ನೂ ಓದಿ > ಏಸೂರು ಕೊಟ್ಟರೂ ಬೇಸೂರು ಕೊಡೆವು, ಪಾದಯಾತ್ರೆ ಅಭೂತಪೂರ್ವ ಯಶಸ್ಸು! ಯಾರೆಲ್ಲಾ ಭಾಗವಹಿಸಿದ್ದರು?
ಅವರ ಮಗ ಹಾಗೂ ಅಕ್ಕಪಕ್ಕದ ಮನೆಯವರು ತಗಡಿನ ಅಡಿಯಲ್ಲಿ ಸಿಲುಕಿದ್ದ ಅವರನ್ನು ರಕ್ಷಿಸಿ ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ಸಾವನಪ್ಪಿದ್ದಾರೆ.
ಇದನ್ನೂ ಓದಿ > ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ಶಿವಮೊಗ್ಗ ವಕೀಲರ ನಿಯೋಗ ಸಿಎಂಗೆ ಮನವಿ, ಮನವಿ ಪತ್ರದಲ್ಲೇನಿದೆ?















