ಶಿವಮೊಗ್ಗ: ಇಂದು ಬೆಳ್ಳಂಬೆಳಗ್ಗೆ ನಗರದ ಖಾಸಗಿ ಸಿಟಿ ಬಸ್’ವೊಂದು ಜಾನುವಾರುಗಳಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮವಾಗಿ ಒಂದು ಕರು ಜೀವಕಳೆದುಕೊಂಡು, ಇನ್ನೂ ಕೆಲವು ಕರುಗಳಿಗೆ ಗಂಭೀರ ಗಾಯಗಳಾದ ಘಟನೆ ವಿನೋಬ ನಗರದಲ್ಲಿ ನಡೆದಿದೆ.
ವಿನೋಬ ನಗರದ ಸವಿ ಬೇಕರಿ ಬಳಿಯಲ್ಲಿ ಇಂದು ಈ ಘಟನೆ ನಡೆದಿದ್ದು, ಡಿಕ್ಕಿ ಪರಿಣಾಮ ಒಂದು ಕರು ಸ್ಥಳದಲ್ಲೇ ನರಳಿ ನರಳಿ ಪ್ರಾಣಬಿಟ್ಟಿದೆ. ಇನ್ನು ಕೆಲವು ಕರುಗಳಿಗೆ ಗಾಯಗಾಗಿವೆ.
ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ವೇಗವಾಗಿ ಚಲಿಸುತ್ತಿದ್ದ ಖಾಸಗಿ ಸಿಟಿ ಬಸ್ ರಸ್ತೆಯಲ್ಲಿ ನಿಂತಿದ್ದ ಹಸುಗಳಿಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ಒಂದು ಸಣ್ಣ ಕರು ನರಳಿ ನರಳಿ ಸ್ಥಳದಲ್ಲೇ ಸಾವನ್ನಪ್ಪಿದೆ.
-
ಇದನ್ನೂ ಓದಿ > ಶಿವಮೊಗ್ಗ ಜಿಲ್ಲೆಯಲ್ಲಿ 226 ಜನರಿಗೆ ಹಾವು ಕಡಿತ, 3 ಸಾವು!
-
ಇದನ್ನೂ ಓದಿ > ಕೆ.ಎಸ್.ಈಶ್ವರಪ್ಪನವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಏನು?
ಘಟನೆಯಲ್ಲಿ ಇನ್ನೂ ಕೆಲವು ಕರುಗಳಿಗೆ ಗಂಭೀರವಾಗಿ ಗಾಯಗಳಾಗಿದ್ದು, ಒಂದು ಕರುವಿನ ಬಾಯಿಯಿಂದ ರಕ್ತಸ್ರಾವವಾಗುತ್ತಿದ್ದ ದೃಶ್ಯ ಮನಕಲುಕುವಂತಿತ್ತು.
ನಗರ ವ್ಯಾಪ್ತಿಯಲ್ಲಿ ಖಾಸಗಿ ಸಿಟಿ ಬಸ್ ವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಿಸಿದ ಪರಿಣಾಮ ಇಂತಹ ಘಟನೆ ನಡೆದಿದ್ದು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರುವಿನ ಸಾವಿಗೆ ಹಾಗೂ ಇನ್ನೂ ಕೆಲವು ಕರುಗಳಿಗೆ ಗಾಯಗಳಾಗಲು ಕಾರಣವಾದ ಖಾಸಗಿ ಸಿಟಿ ಬಸ್ ಚಾಲಕನ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.















