ಶಿವಮೊಗ್ಗ : ಕಾರ್ಮಿಕ ಸಚಿವರಾಗಿ ರಾಜ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಹಿಂದಾ ನಾಯಕ ಸಂತೋಷ್‌ಲಾಡ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಶಿವಮೊಗ್ಗ ಜಿಲ್ಲಾ ಕ್ಷತ್ರೀಯ ಮರಾಠ ಸಮಾಜದ ವತಿಯಿಂದ ಇಂದು ಗೋಪಿವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಮಾಜದ ಜಿಲ್ಲಾಧ್ಯಕ್ಷ ಸಚಿನ್ ಶಿವಾಜಿರಾವ್ ಸಿಂಧ್ಯಾ ಮಾತನಾಡಿ, ಸಂತೋಷ್‌ಲಾಡ್ ಅವರು ಅಹಿಂದಾ ನಾಯಕರಾಗಿ ಎಲ್ಲಾ ಸಮುದಾಯದವರಿಗೆ ನೆರವಿನ ಹಸ್ತ ನೀಡಿದ್ದಾರೆ. ತಮ್ಮ ಫೌಂಡೇಷನ್ ಮೂಲಕ ಕಡು ಬಡವರಿಗೆ 4800 ಉಚಿತ ಬೋರ್ ತೋಡಿಸಿ ನೀರಿನ ಸೌಲಭ್ಯವನ್ನು ಕಲ್ಪಿಸಿದ್ದಾರೆ. ಸಾವಿರಾರು ಜನರಿಗೆ ಸ್ವ-ಉದ್ಯೋಗ ಕಲ್ಪಿಸಿದ್ದಾರೆ. ಕಾಶ್ಮೀರದ ದುರ್ಘಟನೆಯಲ್ಲಿ ಕನ್ನಡಿಗರ ಮೇಲೆ ಹಲ್ಲೆಯಾದಾಗ ಗಾಯಾಳುಗಳಿಗೆ ವಿಶೇಷ ಸೌಲಭ್ಯ ಕಲ್ಪಿಸಿದ್ದರು ಮತ್ತು ಮೃತಪಟ್ಟವರ ಶರೀರವನ್ನು ವಿಶೇಷ ವಿಮಾನದ ಮೂಲಕ ರಾಜ್ಯಕ್ಕೆ ತೆಗೆದುಕೊಂಡು ಬರುವಲ್ಲಿ ವಿಶೇಷ ಪಾತ್ರವಹಿಸಿದ್ದರು. ಜನಾನುರಾಗಿಯಾಗಿರುವ ಇವರಿಗೆ ಡಿ.ಕೆ.ಶಿವಕುಮಾರ್ ಸಚಿವ ಸಂಪುಟದಲ್ಲಿ ಉಪಮುಖ್ಯಮಂತ್ರಿ ಸ್ಥಾನ ನೀಡಲೇಬೇಕು. ಕಾಂಗ್ರೆಸ್ಸಿನ ಕಟ್ಟಾಳು ಆದ ಮತ್ತು ಪಕ್ಷದ ಸಂಘಟನೆಗೆ ಅವಿರತವಾಗಿ ಶ್ರಮಪಟ್ಟ ಇವರಿಗೆ ಸೂಕ್ತ ಸ್ಥಾನಮಾನ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಒಂದು ವೇಳೆ ಉಪಮುಖ್ಯಮಂತ್ರಿ ಸ್ಥಾನ ನೀಡದಿದ್ದರೆ ರಾಜ್ಯಾದ್ಯಂತ ಕ್ಷತ್ರೀಯ ಮರಾಠ ಸಮಾಜದಿಂದ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಎಐಸಿಸಿ ನಾಯಕರಾದ ರಾಹುಲ್‌ಗಾಂಧಿ, ಸೋನಿಯಾಗಾಂಧಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ, ವೇಣುಗೋಪಾಲ್, ರಂಜಿತ್ ಸುರ್ಜೇವಾಲ ಇವರಿಗೆ ಈಗಾಗಲೇ ನಮ್ಮ ಮನವಿಯನ್ನು ಫ್ಯಾಕ್ಸ್‌ಮೂಲಕ ಕಳುಹಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮಹಿಳಾ ಅಧ್ಯಕ್ಷೆ ಕವಿತ್ ಥೋರತ್, ನಿರ್ದೇಶಕಿ ಗೀತಾ ಸತೀಶ್, ಮೀರಾ ಬಾಯಿ, ಶಿಕಾರಿಪುರ ದಾಕ್ಷಾಯಿಣಿ, ಅರ್ಜುನ್ ರಾವ್, ರವಿ ಕುಮಾರ್, ರಾಮಚಂದ್ರರಾವ್ ನಿತಿನ್ ದಿನೇಶ್ ಚೌವ್ಹಾಣ್, ಅರ್ಜುನ್‌ರಾವ್, ಕೆ.ಎಲ್.ರಮೇಶ್ ಇತರರಿದ್ದರು.
-
ಇದನ್ನೂ ಓದಿ > ಫಾರಂ ಹೌಸ್‌ನಿಂದ ನಾಯಿ ಹೊತ್ತೊಯ್ದ ಚಿರತೆ!
-
ಇದನ್ನೂ ಓದಿ > ಸಾಗರ-ಶಿವಮೊಗ್ಗ ಮಧ್ಯೆ ಹೆದ್ದಾರಿ ಬಂದ್!, ಇಲ್ಲಿದೆ ಪರ್ಯಾಯ ಮಾರ್ಗದ ವಿವರ
-
ಇದನ್ನೂ ಓದಿ > ಈ ದಿನಗಳಲ್ಲಿ ಶಿವಮೊಗ್ಗ-ಬೆಂಗಳೂರು ಶತಾಬ್ದಿ ರೈಲು ರದ್ದು, ತಾಳಗುಪ್ಪ, ತುಮಕೂರು ಸೇರಿ 10 ರೈಲುಗಳ ಅಪ್ಡೇಟ್
-
ಇದನ್ನೂ ಓದಿ > ಶಿವಮೊಗ್ಗದಲ್ಲಿ ರಾತ್ರಿ ಪೊಲೀಸರಿಂದ ಲಾಠಿ ಚಾರ್ಜ್














