ಭದ್ರಾವತಿ: ಹೃದಯಾಘಾತದಿಂದ ಮೃತಪಟ್ಟ ಮಗಳ ಅಂಗಾಂಗ ದಾನ ಮಾಡುವ ಮೂಲಕ ಪೋಷಕರು ಮಾನವೀಯತೆ ಮೆರೆದಿದ್ದಾರೆ.
ಭದ್ರಾವತಿಯ ಹಳೆನಗರದ ಸುಭಾಷ್ ನಗರದ ನಿವಾಸಿ ಕುಮಾರ್ ಮತ್ತು ಲೀಲಾ ಎಂಬುವರ ಪುತ್ರಿ ಕೀರ್ತನಾ ಕೆ.(23) ಭಾನುವಾರ ಮೃತಪಟ್ಟಿದ್ದರು. ಅವರ ಅಂಗಾಂಗಗಳನ್ನು ದಾನ ಮಾಡಲಾಗಿದೆ.
ಇದನ್ನೂ ಓದಿ > ಜೂನ್ 6 ರಂದು ಈ ಗ್ರಾಮಗಳಲ್ಲಿ ಇಡೀ ದಿನ ಕರೆಂಟ್ ಇರಲ್ಲ, ಎಲ್ಲೇಲ್ಲಿ?
ಕೀರ್ತನಾ ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಇವರು ಕರ್ತವ್ಯದಲ್ಲಿದ್ದಾಗ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ನೆಲಕ್ಕುರುಳಿ ಬಿದ್ದಿದ್ದು, ಅವರನ್ನು ಚಿಕಿತ್ಸೆಗೆ ಒಳಪಡಿಸಿ ಭದ್ರಾವತಿಯಲ್ಲಿನ ಅವರ ತಂದೆ ಕುಮಾರ್‌ಗೆ ಫೋನ್ ಮಾಡಿ ವಿಷಯ ಮುಟ್ಟಿಸಿದ್ದಾರೆ.
ಇದನ್ನೂ ಓದಿ > ಶಿವಮೊಗ್ಗದ ಅಭಿಮಾನಿಗೆ ನಟ ರಾಕಿಂಗ್ ಸ್ಟಾರ್ ಯಶ್ ಸಾಂತ್ವನ, ಕಾರಣವೇನು?
ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಿದ್ದರೂ ಸಹ ಚಿಕಿತ್ಸೆಗೆ ಸ್ಪಂದಿಸದೇ ಸಾವು ಕಂಡಿದ್ದಾರೆ.
ಮಗಳು ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದುದರಿಂದ, ಹಲವು ಬಾರಿ ನನ್ನ ಬಳಿ ಸಾವಿನ ನಂತರ ಅಂಗಾಂಗ ದಾನ ಮಾಡುವ ಇಂಗಿತ ವ್ಯಕ್ತಪಡಿಸಿದ್ದಳು. ಅವಳ ಇಚ್ಛೆಯಂತೆ ಈ ಕಾರ್ಯ ನಡೆಸಿದ್ದೇವೆ ಎಂದು ಕೀರ್ತನಾ ತಂದೆ ಕುಮಾರ್ ವಿ. ಹೇಳಿದ್ದಾರೆ. ಮಗಳ ಸಾವಿನ ನಂತರವೂ ಆಕೆ ಸಾರ್ಥಕತೆ ಮೆರೆದ ಹೆಮ್ಮೆ ನಮ್ಮದು ಎಂದು ತಾಯಿ ಲೀಲಾ ತಿಳಿಸಿದ್ದಾರೆ.















