ತೀರ್ಥಹಳ್ಳಿ: ಗಡಿಕಲ್ ಗ್ರಾಮದಲ್ಲಿ ಮಧ್ಯರಾತ್ರಿ ಗೋವುಗಳ ಕಳವಿಗೆ ಯತ್ನಿಸಿದ್ದ ಇಬ್ಬರನ್ನು ತೀರ್ಥಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗದ ರೋಷನ್ ಬೇಗ್, ಇಮ್ರಾನ್ ಬಂಧಿತರು. ಇವರಿಂದ ಅಂದಾಜು 4 ಲಕ್ಷ ಮೌಲ್ಯದ ಎರ್ಟಿಗಾ ಕಾರು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ > ನಡುರಸ್ತೆಯಲ್ಲೇ ಧಗಧಗನೇ ಹೊತ್ತಿ ಉರಿದ ಕಾರು!
ಡಿವೈಎಸ್ಪಿ ಅರವಿಂದ್ ಕಲಗುಜ್ಜಿ, ಇನ್‌ಸ್ಪೆಕ್ಟರ್ ಇಮ್ರಾನ್ ಬೇಗ್, ಪಿಎಸ್‌ಐಗಳಾದ ಸುಷ್ಮಾ ಆರ್., ಯುವರಾಜ್ ಹಾಗೂ ಸಿಬ್ಬಂದಿ ಲಿಂಗೇಗೌಡ, ಕುಮಾರ, ಪ್ರಸನ್ನ, ದೀಪಕ್, ಪ್ರದೀಪ ಕೆ.ಪಿ., ಮಂಜುನಾಥ್ ಹಂಪಿಹೊಳಿ ಮತ್ತು ಪ್ರಮೋದ್ ಜೆ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ > ಜಲ್ ಜೀವನ್ ಮಿಷನ್ ಪೈಪ್ ಕಳ್ಳತನ, ಆರೋಪಿ ಬಂಧನ














