ಭದ್ರಾವತಿ : ಕರುಗಳು ಸೇರಿ 10 ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಪ್ರಕರಣವನ್ನು ಪೊಲೀಸರು ಪತ್ತೆ ಮಾಡಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದಂತೆ ಬೊಲೇರೋ ವಾಹನ ಹಾಗೂ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ > ಜೂನ್ 20 ರಂದು ಉದ್ಯೋಗ ನೇರ ಸಂದರ್ಶನ
ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಕಸಾಯಿ ಖಾನೆಗೆ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪೊಲೀಸರು ಪತ್ತೆಹಚ್ಚಿ, 10 ಜಾನುವಾರುಗಳೊಂದಿಗೆ ಬೊಲೆರೋ ವಾಹನವನ್ನು ವಶಕ್ಕೆ ಪಡೆದಿದ್ದು, ಚಾಲಕನನ್ನು ಬಂಧಿಸಿದ್ದಾರೆ.
ಗೋವು ಅಕ್ರಮ ಸಾಗಾಟದ ಖಚಿತ ಮಾಹಿತಿ
ಇಂದು ಬೆಳಿಗ್ಗೆ ಸುಮಾರು 11.00 ಗಂಟೆ ವೇಳೆಯಲ್ಲಿ 112 ತುರ್ತು ಸೇವೆಯ ಕರ್ತವ್ಯದಲ್ಲಿದ್ದ ಎಎಸ್’ಐ ಮನೋಹರ್ ಅವರಿಗೆ ಗೋವುಗಳನ್ನು ಸಿದ್ದಿಪುರದಿಂದ ಹೊಳೆಹೊನ್ನೂರು ಕಡೆಗೆ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ ಎಂಬು ಖಚಿತ ಮಾಹಿತಿ ದೊರೆತಿದೆ.
ತಕ್ಷಣವೇ ಕ್ರಮ ಕೈಗೊಂಡ ಮನೋಹರ್ ಅವರು ಹೊಳೆಹೊನ್ನೂರು ಸಮೀಪದ ಕನಸಿನಕಟ್ಟೆ ಕ್ರಾಸ್ ಬಳಿ ತೆರಳಿ ನಿಗಾವಹಿಸಿದರು. ಈ ವೇಳೆ ಅನುಮಾನಾಸ್ಪದವಾಗಿ ಜಾನುವಾರುಗಳನ್ನು ತುಂಬಿಕೊಂಡು ಬರುತ್ತಿದ್ದ ಬೊಲೆರೋ ವಾಹನವನ್ನು ತಡೆದು ಪರಿಶೀಲಿಸುವ ವೇಳೆ ಗೋವುಗಳನ್ನು ತುಂಬಿಕೊಂಡಿದ್ದ ವಾಹನ ಪತ್ತೆಯಾಯಿತು.
ನಂತರ ಕಾನೂನು ಸುವ್ಯವಸ್ಥೆ ಹಾಗೂ ಜಾನುವಾರುಗಳ ರಕ್ಷಣೆಯ ದೃಷ್ಟಿಯಿಂದ ವಾಹನವನ್ನು ಠಾಣಾ ಆವರಣಕ್ಕೆ ಕರೆ ತಂದು ವಿಚಾರಣೆ ಮಾಡಲಾಯಿತು.
ಇದನ್ನೂ ಓದಿ > ಹಾವು ಬಿಟ್ಟು ಯುವತಿ ಕೊಲೆಗೆ ಯತ್ನ, ಇಬ್ಬರು ಆರೋಪಿಗಳ ಬಂಧನ!
ವಾಹನದಲ್ಲಿ ಎರಡು ಕರುಗಳು ಸೇರಿ ಒಟ್ಟು 10 ಗೋವುಗಳು ಇದ್ದವು. ಜಾನುವಾರುಗಳನ್ನು ಸಾಗಾಟ ಮಾಡುವ ವೇಳೆ ಯಾವುದೇ ಸುರಕ್ಷತಾ ಕ್ರಮಗಳನ್ನು ಪಾಲಿಸದೆ, ಅತಿಯಾಗಿ ತುಂಬಿಕೊಂಡಿರುವುದು ಬೆಳಕಿಗೆ ಬಂದಿದೆ.
ಗೋವುಗಳ ಸಾಗಾಟಕ್ಕೆ ಸಂಬಂಧಿಸಿದಂತೆ ಬೊಲೇರೋ ಚಾಲಕ ಹೊನ್ನಾಳಿಯ ಮುನೀರ್ ಎಂಬಾತನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ತಾನು ಹೊನ್ನಾಳಿ ಸಂತೆಯಿಂದ ತಂದಿರುವುದಾಗಿ ಹೇಳಿದ್ದಾನೆ. ಆದರೆ, ಇದಕ್ಕೆ ಸಂಬಂಧಿಸಿದಂತೆ ಆತನ ಬಳಿ ಯಾವುದೇ ರೀತಿಯ ಪರವಾನಗಿ ಅಥವಾ ಖರೀದಿ ದಾಖಲೆಗಳು ಇಲ್ಲ ಎಂಬುದನ್ನು ಪೊಲೀಸರ ಬಳಿ ಒಪ್ಪಿಕೊಂಡಿದ್ದಾನೆ.
ಇದನ್ನೂ ಓದಿ > ಎಂಪಿಎಂ ಬಡಾವಣೆಗೆ ಹೊಸ ಕೆಎಸ್‌ಆರ್‌ಟಿಸಿ ಬಸ್ ಸೇವೆ ಆರಂಭ
ಪ್ರಾಥಮಿಕ ತನಿಖೆಯಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಕಸಾಯಿ ಖಾನೆಗೆ ಸಾಗಾಟ ಮಾಡಲಾಗುತ್ತಿದೆ ಎಂಬ ಅನುಮಾನ ವ್ಯಕ್ತವಾಗಿದ್ದು, ಸಂಬಂಧಪಟ್ಟ ಕಾನೂನುಗಳ ಉಲ್ಲಂಘನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿನ್ನೆಲೆಗಳಲ್ಲಿ ಬೊಲೆರೋ ವಾಹನ ಹಾಗೂ ಚಾಲಕವನ್ನು ವಶಕ್ಕೆ ಪಡೆದು, ಚಾಲಕ ಮುನೀರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಜಾನುವಾರುಗಳನ್ನು ಸುರಕ್ಷಿತವಾಗಿ ಸಂರಕ್ಷಿಸುವ ಕ್ರಮ ಕೈಗೊಳ್ಳಲಾಗಿದೆ. ಎಎಸ್’ಐ ಕೃಷ್ಣನಾಯಕ್ ಅವರ ನೇತೃತ್ವದಲ್ಲಿ ತನಿಖೆ ಮುಂದುವರೆದಿದೆ.














