ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಲಿಂಗಾಪುರ ಗ್ರಾಮದ ಸೌತೆಮಕ್ಕಿಯಲ್ಲಿ ಕುಟುಂಬದವರು ಮನೆಯ ಒಳಗೆ ಮಲಗಿದ್ದಾಗಲೇ ಮನೆಯೊಂದರ ಬಾಗಿಲು ಮುರಿದು ಕಳ್ಳತನಕ್ಕೆ ಯತ್ನಿಸಿರುವ ಘಟನೆ ನಡೆದಿದೆ.
ಇದನ್ನೂ ಓದಿ > ಎರಡು ಕಾರುಗಳ ನಡುವೆ ಭೀಕರ ಅಪಘಾತ, ವಾಹನಗಳು ಜಖಂ!
ರೈತ ರಾಮದಾಸ್ ಕೆ.ಪಿ. ಎಂಬುವವರ ಮನೆಯಲ್ಲಿ ಕೃತ್ಯ ನಡೆದಿದೆ. ರಾಮದಾಸ್ ಹಾಗೂ ಅವರ ಪತ್ನಿ ಮತ್ತು ಸಂಬಂಧಿ ಮುಕುಂದ ಎಂಬುವವರು ರಾತ್ರಿ ಊಟ ಮುಗಿಸಿ ಮನೆಯೊಳಗೆ ಮಲಗಿದ್ದರು. ಕಳೆದ ತಡರಾತ್ರಿ ಬಂದ ಕಳ್ಳರು, ಮನೆಯ ಮುಂದೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾವನ್ನು ಒಡೆದು ಹಾಕಿದ್ದಾರೆ. ಬಳಿಕ ಮನೆಯ ಹಿಂಬಾಗಿಲಿನ ಚಿಲಕ ಹಾಕಿ, ಆಯುಧದಿಂದ ಮುಂಭಾಗದ ಬಾಗಿಲನ್ನು ಒಡೆಯಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ > ಸುತ್ತುಕೋಟೆ ಕೊಲೆ ಪ್ರಕರಣ, ಎಸ್ಪಿ ನಿಖಿಲ್ ಹೇಳಿದ್ದೇನು?
ಬೆಳಗ್ಗೆ ಮನೆಯವರು ಎದ್ದು ನೋಡಿದಾಗ ಬಾಗಿಲು ಜಖಂಗೊಂಡಿರುವುದು ಹಾಗೂ ಸಿಸಿಟಿವಿ ಕ್ಯಾಮೆರಾ ಹಾಳಾಗಿರುವುದು ಬೆಳಕಿಗೆ ಬಂದಿದೆ. ಬಾಗಿಲು ಒಡೆಯಲು ಸಾಧ್ಯವಾಗದ ಕಾರಣ ಕಳ್ಳತನ ಯತ್ನ ವಿಫಲವಾಗಿದೆ.
ಇದನ್ನೂ ಓದಿ > ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರಿಗೆ ಕೆ.ಎಸ್. ಈಶ್ವರಪ್ಪ ಸಲಹೆ, ಸೂಚನೆ
ಈ ಕುರಿತು ಮಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














