ಶಿವಮೊಗ್ಗ: ಕೊಡಚಾದ್ರಿ ಚಿಟ್ಸ್‌ನ ಯಶಸ್ಸಿನ ಹಿಂದಿನ ನಿಜವಾದ ಶಕ್ತಿ ನಮ್ಮ ಗ್ರಾಹಕರು. ಅವರ ವಿಶ್ವಾಸ, ಸಹಕಾರ ಮತ್ತು ಪ್ರೋತ್ಸಾಹವೇ ಸಂಸ್ಥೆಯನ್ನು ಇಂದಿನ ಮಟ್ಟಕ್ಕೆ ಬೆಳೆಸಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪರಶುರಾಮ್ ಕೆ ಎನ್ ಹೇಳಿದರು.
ಅವರು ಕೊಡಚಾದ್ರಿ ಚಿಟ್ಸ್ ಪ್ರೈ. ಲಿ. ವತಿಯಿಂದ ರಾಯಲ್ ಆರ್ಕಿಡ್ ಹೋಟೆಲ್‌ನಲ್ಲಿ ಆಯೋಜಿಸಿದ್ದ “ಅಭಿನಂದನ 2026-ಬಾಂಧವ್ಯದ ಬೆಸುಗೆ” ಎಂಬ ವಿಶೇಷ ಗ್ರಾಹಕರ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಇದನ್ನೂ ಓದಿ > ಎರಡು ಕಾರುಗಳ ನಡುವೆ ಭೀಕರ ಅಪಘಾತ, ವಾಹನಗಳು ಜಖಂ!
ಪಾರದರ್ಶಕ, ತಂತ್ರಜ್ಞಾನ ಆಧಾರಿತ ಹಾಗೂ ಗ್ರಾಹಕ ಸ್ನೇಹಿ ಸೇವೆಗಳನ್ನು ನೀಡುವ ಮೂಲಕ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಜನರ ಆರ್ಥಿಕ ಪ್ರಗತಿಗೆ ಕೈಜೋಡಿಸಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿರುವ ಗ್ರಾಹಕರನ್ನು ಸನ್ಮಾನಿಸಿ ಸ್ಮರಣಿಕೆ ನೀಡಿ ಅಭಿನಂದಿಸಿದರು.
ಇದನ್ನೂ ಓದಿ > ಸುತ್ತುಕೋಟೆ ಕೊಲೆ ಪ್ರಕರಣ, ಎಸ್ಪಿ ನಿಖಿಲ್ ಹೇಳಿದ್ದೇನು?
ಕಾರ್ಯಕ್ರಮದಲ್ಲಿ ಶಿವಮೊಗ್ಗ, ಹೊಸನಗರ, ಶಿಕಾರಿಪುರ, ತೀರ್ಥಹಳ್ಳಿ,ಚನ್ನಗಿರಿ, ತರೀಕೆರೆ, ಹೊನ್ನಾಳಿ ಸೇರಿದಂತೆ ವಿವಿಧ ಶಾಖೆಗಳ ಗ್ರಾಹಕರು, ಗಣ್ಯರು, ಸಂಸ್ಥೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.














