ಶಿವಮೊಗ್ಗ: ತೀರ್ಥಹಳ್ಳಿ ಪಟ್ಟಣದ ಆಗುಂಬೆ ಬಸ್ ನಿಲ್ದಾಣದ ಬಳಿ ನಿಲ್ಲಿಸಲಾಗಿದ್ದ ಖಾಸಗಿ ಬಸ್ಸಿನ ಬ್ರೇಕ್ ಏಕಾಏಕಿ ಫೇಲ್ ಆಗಿ ರಿವರ್ಸ್ ಚಲಿಸಿದ ಪರಿಣಾಮ 4 ಕಾರುಗಳು ಹಾಗೂ 1 ಬೈಕ್ ಜಖಂಗೊಂಡಿರುವ ಘಟನೆ ಬುಧವಾರ (ಇಂದು) ಸಂಜೆ ಸಂಭವಿಸಿದೆ.
ಇದನ್ನೂ ಓದಿ > > ಶಿವಮೊಗ್ಗ, ವೆಜ್, ನಾನ್‌ವೆಜ್ ಫುಡ್ ಕೋರ್ಟ್‌ಗಳಿಗೆ ಎಸಿ ತಂಡದ ದಿಢೀರ್ ದಾಳಿ
ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಆಗುಂಬೆ ಬಸ್ ನಿಲ್ದಾಣದ ಬಳಿ ನಿಲ್ಲಿಸಿದ್ದ ಖಾಸಗಿ ಬಸ್ ಇದ್ದಕ್ಕಿದ್ದಂತೆ ನಿಯಂತ್ರಣ ತಪ್ಪಿ ಹಿಂದಕ್ಕೆ ಚಲಿಸಿದೆ. ಈ ವೇಳೆ ಹಿಂಭಾಗದಲ್ಲಿದ್ದ ಕಾರುಗಳಿಗೆ ಬಸ್ ರಭಸವಾಗಿ ಡಿಕ್ಕಿ ಹೊಡೆದಿದ್ದು, ಸರಣಿ ಡಿಕ್ಕಿಯ ರಭಸಕ್ಕೆ 4ಕ್ಕೂ ಹೆಚ್ಚು ಕಾರುಗಳು ನಜ್ಜುಗುಜ್ಜಾಗಿವೆ. 1 ಬೈಕ್ ಜಖಂಗೊಂಡಿದೆ. ಆದರೆ ಘಟನೆ ವೇಳೆ ಕಾರುಗಳಲ್ಲಿದ್ದ ಸಾರ್ವಜನಿಕರು ಹಾಗೂ ರಸ್ತೆಬದಿಯಲ್ಲಿದ್ದ ಜನರು ಅಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಇದನ್ನೂ ಓದಿ > > ಶಾಲಾ ಕ್ರೀಡಾಕೂಟದಲ್ಲಿ ಅನಾಹುತ, ಡಿಸ್ಕಸ್ ತಲೆಗೆ ಬಿದ್ದು ದೈಹಿಕ ಶಿಕ್ಷಕನಿಗೆ ಗಂಭೀರ ಗಾಯ!
ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ತನಿಖೆ ಮುಂದುವರಿಸಿದ್ದಾರೆ.














