ಶಿವಮೊಗ್ಗ: ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯ ಚಿನ್ನೆಗೌಡ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ 17 ವರ್ಷದೊಳಗಿನ ವಿದ್ಯಾರ್ಥಿಗಳ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಅನಾಹುತ ಸಂಭವಿಸಿದೆ.
ಇದನ್ನೂ ಓದಿ > > ಶಿವಮೊಗ್ಗ, ವೆಜ್, ನಾನ್‌ವೆಜ್ ಫುಡ್ ಕೋರ್ಟ್‌ಗಳಿಗೆ ಎಸಿ ತಂಡದ ದಿಢೀರ್ ದಾಳಿ
ಕ್ರೀಡಾಕೂಟದ ವೇಳೆ ವಿದ್ಯಾರ್ಥಿಯೊಬ್ಬ ಎಸೆದ ಡಿಸ್ಕಸ್ ಆಕಸ್ಮಿಕವಾಗಿ ದೈಹಿಕ ಶಿಕ್ಷಕ ಕಮಲಾಕರ್ ಅವರ ತಲೆಗೆ ಬಿದ್ದಿದೆ. ಡಿಸ್ಕಸ್ ಬಡಿದ ಪರಿಣಾಮ ಶಿಕ್ಷಕರ ತಲೆಗೆ ಗಂಭೀರ ಗಾಯವಾಗಿದ್ದು, ತೀವ್ರ ರಕ್ತಸ್ರಾವ ಉಂಟಾಗಿದೆ.
ಘಟನೆ ಬಳಿಕ ತಕ್ಷಣವೇ ಗಾಯಗೊಂಡ ಶಿಕ್ಷಕ ಕಮಲಾಕರ್ ಅವರನ್ನು ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ > ಯುವತಿಗೆ ನಿಶ್ಚಿತಾರ್ಥ, ಸಿಟ್ಟಿಗೆ ಬೈಕ್‌ಗಳಿಗೆ ಬೆಂಕಿ ಹಚ್ಚಿದ ಆರೋಪಿ ಬಂಧನ!
ಕ್ರೀಡಾಕೂಟದ ವೇಳೆ ನಡೆದ ಈ ಘಟನೆಯಿಂದ ಕ್ರೀಡಾಂಗಣದಲ್ಲಿ ಕೆಲಕಾಲ ಭೀತಿ ಮತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಇದನ್ನೂ ಓದಿ > > ಭದ್ರಾವತಿ, 3 ದಿನ ಈ ಪ್ರದೇಶಗಳಲ್ಲಿ ಇಡೀ ದಿನ ಕರೆಂಟ್ ಕಟ್, ಎಲ್ಲೆಲ್ಲಿ?














