• About Us
  • Advertise
  • Privacy & Policy
  • Contact Us
Thursday, September 3, 2026
ರಾಕೇಶ್ ಸೋಮಿನಕೊಪ್ಪ ಸಾರಥ್ಯದಲ್ಲಿ
yuvadhwani
Subscribe
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
No Result
View All Result
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
No Result
View All Result
yuvadhwani
No Result
View All Result
  • Home
  • ಶಿವಮೊಗ್ಗ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
Home Uncategorized

ಜೆ.ಎನ್.ಎನ್.ಸಿ.ಇ ಕಾಲೇಜಿನಲ್ಲಿ 6ಜಿ ಮೊಬೈಲ್ ನೆಟ್‌ವರ್ಕ್ಸ್‌ ಅಭಿವೃದ್ಧಿ ಕಾರ್ಯಕ್ರಮ

ಡಿಜಿಟಲ್ ನಾಗರಿಕತೆಗೆ ಹೊಸ ಆಯಾಮ ನೀಡುವ 6ಜಿ   | ಅನಿಂದ್ಯ ಸಾಹಾ

ರಾಕೇಶ್ ಸೋಮಿನಕೊಪ್ಪ by ರಾಕೇಶ್ ಸೋಮಿನಕೊಪ್ಪ
September 2, 2026
in Uncategorized
ಜೆ.ಎನ್.ಎನ್.ಸಿ.ಇ ಕಾಲೇಜಿನಲ್ಲಿ 6ಜಿ ಮೊಬೈಲ್ ನೆಟ್‌ವರ್ಕ್ಸ್‌ ಅಭಿವೃದ್ಧಿ ಕಾರ್ಯಕ್ರಮ
Share on FacebookShare on TwitterShare on WhatsApp
ಶಿವಮೊಗ್ಗ: ಮಾನವ ಮತ್ತು ಯಂತ್ರ ಸಂವಹನದ ಗಡಿಗಳನ್ನು ವಿಸ್ತರಿಸಿ, ಸ್ವಾಯತ್ತ ವ್ಯವಸ್ಥೆಗಳು ಮತ್ತು ಡಿಜಿಟಲ್ ಅನುಭವಗಳಿಗೆ ಹೊಸ ದಿಕ್ಕು ನೀಡುವಲ್ಲಿ, 6ಜಿ ತಂತ್ರಜ್ಞಾನವು ಡಿಜಿಟಲ್ ನಾಗರಿಕತೆಯ ಭವಿಷ್ಯಕ್ಕೆ ಹೊಸ ಆಯಾಮ ನೀಡಲಿದೆ ಎಂದು ಬೆಂಗಳೂರಿನ ತೇಜಸ್‌ ನೆಟ್‌ವರ್ಕ್ಸ್ ಕಂಪನಿ ಉಪಾಧ್ಯಕ್ಷರಾದ ಅನಿಂದ್ಯ ಸಾಹಾ ಅಭಿಪ್ರಾಯಪಟ್ಟರು.
ನಗರದ ಜೆ.ಎನ್‌.ಎನ್‌ ಇಂಜಿನಿಯರಿಂಗ್‌ ಕಾಲೇಜಿನಲ್ಲಿ  ಎಐಸಿಟಿಇ, ಎಲೆಕ್ಟ್ರಾನಿಕ್ಸ್ ಅಂಡ್ ಟೆಲಿಕಮ್ಯುನಿಕೇಷನ್ ಹಾಗೂ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ಐಡಿಯಾ ಲ್ಯಾಬ್‌ನಲ್ಲಿ ನಡೆದ  ‘ಅಡ್ವಾನ್ಸಸ್ ಇನ್ 6ಜಿ ಮೊಬೈಲ್ ನೆಟ್‌ವರ್ಕ್ಸ್’ ವಿಷಯ ಕುರಿತ 6 ದಿನಗಳ ಅಧ್ಯಾಪಕರ ವೃತ್ತಿಪರ ಅಭಿವೃದ್ಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
5ಜಿಯಿಂದ 6ಜಿಯತ್ತ ಸಾಗುತ್ತಿರುವ ಮೊಬೈಲ್ ಸಂವಹನ ತಂತ್ರಜ್ಞಾನವು ಕೇವಲ ವೇಗದ ಪರಿವರ್ತನೆಯಲ್ಲ, ಮಾನವ ಬದುಕಿನ ಡಿಜಿಟಲ್ ಆಯಾಮವನ್ನೇ ಮರುರೂಪಿಸುವ ಮಹತ್ವದ ತಾಂತ್ರಿಕ ಕ್ರಾಂತಿಯಾಗಿದೆ. ಮೊಬೈಲ್ ನೆಟ್‌ವರ್ಕ್‌ನ ಪ್ರತಿಯೊಂದು ಪೀಳಿಗೆಯೂ ಮಾನವನ ಸಂವಹನ, ಕಾರ್ಯವಿಧಾನ ಮತ್ತು ಸಾಮಾಜಿಕ ಬದುಕಿಗೆ ಹೊಸ ಸಾಧ್ಯತೆಗಳನ್ನು ತೆರೆದಿದೆ. 4ಜಿ ತಂತ್ರಜ್ಞಾನವು ವೀಡಿಯೊ ಸ್ಟ್ರೀಮಿಂಗ್, ಸಾಮಾಜಿಕ ಮಾಧ್ಯಮ ಹಾಗೂ ಡಿಜಿಟಲ್ ಸೇವೆಗಳನ್ನು ಜನಸಾಮಾನ್ಯರ ಬೆರಳ ತುದಿಗೆ ತಂದರೆ, 5ಜಿ ಅತಿ ಕಡಿಮೆ ವಿಳಂಬದ ಸಂವಹನದ ಮೂಲಕ ಸ್ಮಾರ್ಟ್ ಕೈಗಾರಿಕೆಗಳು, ದೂರಸ್ಥ ವೈದ್ಯಕೀಯ ಸೇವೆಗಳು ಹಾಗೂ ಕೈಗಾರಿಕಾ ಸ್ವಯಂಚಾಲಿತ ವ್ಯವಸ್ಥೆಗಳಿಗೆ ಹೊಸ ವೇಗ ನೀಡಿದೆ.
ಇದನ್ನೂ ಓದಿ > > ಶಿವಮೊಗ್ಗ, ವೆಜ್, ನಾನ್‌ವೆಜ್ ಫುಡ್ ಕೋರ್ಟ್‌ಗಳಿಗೆ ಎಸಿ ತಂಡದ ದಿಢೀರ್ ದಾಳಿ
6ಜಿ ಈ ಪಯಣವನ್ನು ಮತ್ತಷ್ಟು ವಿಸ್ತರಿಸಿ, ಭೌತಿಕ ಮತ್ತು ಡಿಜಿಟಲ್ ಜಗತ್ತಿನ ನಡುವಿನ ಗಡಿರೇಖೆಯನ್ನೇ ಮಸುಕಾಗಿಸುವ ತಂತ್ರಜ್ಞಾನವಾಗಿ ರೂಪುಗೊಳ್ಳಲಿದೆ. ಕೃತಕ ಬುದ್ಧಿಮತ್ತೆ, ಟೆರಾಹೆರ್ಟ್ಜ್ ಸಂವಹನ, ಇಮ್ಮರ್ಸಿವ್ ಎಕ್ಸ್‌ಟೆಂಡೆಡ್ ರಿಯಾಲಿಟಿ, ಡಿಜಿಟಲ್ ಟ್ವಿನ್‌ಗಳು, ಸ್ವಾಯತ್ತ ವಾಹನಗಳು ಹಾಗೂ ಬೃಹತ್ ಪ್ರಮಾಣದ ಯಂತ್ರದಿಂದ ಯಂತ್ರಕ್ಕೆ ಸಂವಹನಗಳ ಸಮನ್ವಯದ ಮೂಲಕ 6ಜಿ, ಸಂಪರ್ಕಿಸುವ ಜಗತ್ತಿನಿಂದ, ಬುದ್ಧಿವಂತಿಕೆಯ ಜೊತೆಗೂಡಿ ಪರಸ್ಪರ ಪ್ರತಿಕ್ರಿಯಿಸುವ ಜಗತ್ತಾಗಿ ಬದಲಾಯಿಸುವ ಹೊಸ ತಾಂತ್ರಿಕ ಯುಗಕ್ಕೆ ದಾರಿ ಮಾಡಿಕೊಡಲಿದೆ ಎಂದು ವಿವರಿಸಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್. ನಾಗರಾಜ ಮಾತನಾಡಿ, ಹೋಲೋಗ್ರಾಫಿಕ್ ಕಮ್ಯುನಿಕೇಷನ್, ಹೋಲೋಗ್ರಾಫಿಕ್ ಸಂವಹನ, ಡಿಜಿಟಲ್ ಟ್ವಿನ್ ನೆಟ್‌ವರ್ಕ್‌ಗಳು ಹಾಗೂ ಕೃತಕ ಬುದ್ಧಿಮತ್ತೆ ಆಧಾರಿತ ಸ್ವಾಯತ್ತ ನೆಟ್‌ವರ್ಕ್ ನಿರ್ವಹಣೆಯಂತಹ ಅತ್ಯಾಧುನಿಕ ತಂತ್ರಜ್ಞಾನಗಳತ್ತ ದೂರಸಂಪರ್ಕ ಕ್ಷೇತ್ರ ಮುನ್ನಡೆಯುತ್ತಿರುವ ಸಂದರ್ಭದಲ್ಲಿ, ಅಧ್ಯಾಪಕರು ತಾಂತ್ರಿಕ ಬೆಳವಣಿಗೆಗಳಿಗೆ ನಿರಂತರವಾಗಿ ತಮ್ಮನ್ನು ತಾವು ನವೀಕರಿಸಿಕೊಳ್ಳುವುದು ಅತ್ಯಗತ್ಯ. ಹೊಸ ತಂತ್ರಜ್ಞಾನಗಳ ಜ್ಞಾನವು ತರಗತಿ ಕೊಠಡಿಗೆ ತಲುಪಿದಾಗ ಮಾತ್ರ, ಶೈಕ್ಷಣಿಕ ಪರಿಪಕ್ವತೆ ಮತ್ತಷ್ಟು ವಿಸ್ತರಿಸಲು ಸಾಧ್ಯ ಎಂದು ಹೇಳಿದರು.
ಇದನ್ನೂ ಓದಿ > >  ಯುವತಿಗೆ ನಿಶ್ಚಿತಾರ್ಥ, ಸಿಟ್ಟಿಗೆ ಬೈಕ್‌ಗಳಿಗೆ ಬೆಂಕಿ ಹಚ್ಚಿದ ಆರೋಪಿ ಬಂಧನ!
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಂಶೋಧನಾ ಡೀನ್ ಡಾ.ಎಸ್.ವಿ ಸತ್ಯನಾರಾಯಣ ಮಾತನಾಡಿ, ದೇಶದಾದ್ಯಂತ ಸ್ವೀಕರಿಸಲಾದ ಸುಮಾರು 1,500 ಪ್ರಸ್ತಾವನೆಗಳ ಪೈಕಿ, ಜೆಎನ್‌ಎನ್‌ ಕಾಲೇಜು ಎಐಸಿಟಿಇ ಅನುದಾನಕ್ಕೆ ಆಯ್ಕೆಯಾಗಿರುವುದು, ಇಲ್ಲಿನ ಬೋಧಕ ವರ್ಗದ ಸಂಶೋಧನಾ ದೃಷ್ಟಿಕೋನದ ಗುಣಮಟ್ಟವನ್ನು ಪ್ರತಿಬಿಂಬಿಸುತ್ತದೆ ಎಂದರು.
ಇದನ್ನೂ ಓದಿ > >  ಭದ್ರಾವತಿ, 3 ದಿನ ಈ ಪ್ರದೇಶಗಳಲ್ಲಿ ಇಡೀ ದಿನ ಕರೆಂಟ್ ಕಟ್, ಎಲ್ಲೆಲ್ಲಿ?
ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಪ್ರಮೋದ್ ಕುಮಾರ್ ಎಸ್., ಎಲೆಕ್ಟ್ರಾನಿಕ್ಸ್ ಅಂಡ್ ಟೆಲಿಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಸುರೇಂದ್ರ ಎಸ್, ಕಾರ್ಯಕ್ರಮ ಸಂಯೋಜಕರಾದ ಡಾ. ಅಶ್ವಿನಿ ಎಸ್.ಆರ್, ಡಾ. ಪ್ರೇಮಾ ಕೆ.ಎನ್. ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ರಾಜ್ಯದ ವಿವಿಧ ಇಂಜಿನಿಯರಿಂಗ್‌ ಕಾಲೇಜುಗಳ ಉಪನ್ಯಾಸಕರು ಹಾಗೂ ಸಂಶೋಧಕರು ಭಾಗವಹಿಸಿದ್ದರು.
Tags: 6G Mobile Networks Development Program at JNNCE Collegekannada newskannada news livelatest newsmalnad newsshimogashivamoggaರಾಷ್ಟ್ರೀಯ ಶಿಕ್ಷಣ ಸಮಿತಿಶಿವಮೊಗ್ಗ
Previous Post

ಯುವತಿಗೆ ನಿಶ್ಚಿತಾರ್ಥ, ಸಿಟ್ಟಿಗೆ ಬೈಕ್‌ಗಳಿಗೆ ಬೆಂಕಿ ಹಚ್ಚಿದ ಆರೋಪಿ ಬಂಧನ!

Next Post

ಶಾಲಾ ಕ್ರೀಡಾಕೂಟದಲ್ಲಿ ಅನಾಹುತ, ಡಿಸ್ಕಸ್ ತಲೆಗೆ ಬಿದ್ದು ದೈಹಿಕ ಶಿಕ್ಷಕನಿಗೆ ಗಂಭೀರ ಗಾಯ!

ರಾಕೇಶ್ ಸೋಮಿನಕೊಪ್ಪ

ರಾಕೇಶ್ ಸೋಮಿನಕೊಪ್ಪ

Next Post
ಶಾಲಾ ಕ್ರೀಡಾಕೂಟದಲ್ಲಿ ಅನಾಹುತ, ಡಿಸ್ಕಸ್ ತಲೆಗೆ ಬಿದ್ದು ದೈಹಿಕ ಶಿಕ್ಷಕನಿಗೆ ಗಂಭೀರ ಗಾಯ!

ಶಾಲಾ ಕ್ರೀಡಾಕೂಟದಲ್ಲಿ ಅನಾಹುತ, ಡಿಸ್ಕಸ್ ತಲೆಗೆ ಬಿದ್ದು ದೈಹಿಕ ಶಿಕ್ಷಕನಿಗೆ ಗಂಭೀರ ಗಾಯ!

  • Trending
  • Comments
  • Latest
ನ್ಯಾಷನಲ್ ಪಬ್ಲಿಕ್ ಶಾಲೆಯ ಸಾಧನೆ, ಸಿಬಿಎಸ್ಇ 10ನೇ ತರಗತಿಯಲ್ಲಿ 100% ಫಲಿತಾಂಶ

ನ್ಯಾಷನಲ್ ಪಬ್ಲಿಕ್ ಶಾಲೆಯ ಸಾಧನೆ, ಸಿಬಿಎಸ್ಇ 10ನೇ ತರಗತಿಯಲ್ಲಿ 100% ಫಲಿತಾಂಶ

April 16, 2026
ಎಸ್.ಎಸ್.ಎಲ್.ಸಿ: ಎನ್ಇಎಸ್ ಶಾಲೆಗಳಿಗೆ ಉತ್ತಮ ಫಲಿತಾಂಶ

ಎಸ್.ಎಸ್.ಎಲ್.ಸಿ: ಎನ್ಇಎಸ್ ಶಾಲೆಗಳಿಗೆ ಉತ್ತಮ ಫಲಿತಾಂಶ

April 24, 2026
ಹೊಳೆಹೊನ್ನೂರು, ಸಿಕ್ಕ ಬಂಗಾರ ಮರಳಿಸಿದ ತಂದೆ, ಮಗ!

ಹೊಳೆಹೊನ್ನೂರು, ಸಿಕ್ಕ ಬಂಗಾರ ಮರಳಿಸಿದ ತಂದೆ, ಮಗ!

July 10, 2026
ಜೆ.ಎನ್.ಎನ್.ಸಿ.ಇ ಕಾಲೇಜಿನ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಹಿರಿಯ ವಿದ್ಯಾರ್ಥಿಗಳ ‘ಪವರ್ ಮೀಟ್’

ಜೆ.ಎನ್.ಎನ್.ಸಿ.ಇ ಕಾಲೇಜಿನ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಹಿರಿಯ ವಿದ್ಯಾರ್ಥಿಗಳ ‘ಪವರ್ ಮೀಟ್’

April 25, 2026
ಶಿವಮೊಗ್ಗ, ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ, ವಿದ್ಯಾರ್ಥಿನಿ ಸಾವು

ಶಿವಮೊಗ್ಗ, ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ, ವಿದ್ಯಾರ್ಥಿನಿ ಸಾವು

4
ಶಿವಮೊಗ್ಗ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು, ಆಗಿದ್ದೇನು?

ಶಿವಮೊಗ್ಗ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು, ಆಗಿದ್ದೇನು?

4
ಶಿಕಾರಿಪುರ | ಶಾಲಾ ಕೊಠಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಶಿಕ್ಷಕ

ಮಾವನನ್ನೇ ಕುತ್ತಿಗೆ ಸೀಳಿ ಹತ್ಯೆಗೆ ಯತ್ನಿಸಿದ ಅಳಿಯ, ಕಾರಣವೇನು?

3
ಶಿವಮೊಗ್ಗ, ಬೈಕ್ ವೀಲಿಂಗ್ ಮಾಡಿ ವಿಡಿಯೋ ಹರಿಬಿಟ್ಟ ಯುವಕರು, ಮುಂದೇನಾಯ್ತು?

ಶಿವಮೊಗ್ಗ, ಬೈಕ್ ವೀಲಿಂಗ್ ಮಾಡಿ ವಿಡಿಯೋ ಹರಿಬಿಟ್ಟ ಯುವಕರು, ಮುಂದೇನಾಯ್ತು?

3
ನೀರಿನಲ್ಲಿ ಅಡಗಿ ಕುಳಿತ ಆರೋಪಿ, ಹೆಡೆಮುರಿ ಕಟ್ಟಿದ ಭದ್ರಾವತಿ ಪೊಲೀಸ್

ನೀರಿನಲ್ಲಿ ಅಡಗಿ ಕುಳಿತ ಆರೋಪಿ, ಹೆಡೆಮುರಿ ಕಟ್ಟಿದ ಭದ್ರಾವತಿ ಪೊಲೀಸ್

September 3, 2026
ಜೀವ ಉಳಿಸುವ ಮಹಾಕಾರ್ಯಕ್ಕೆ ಪೊಲೀಸರ ಹೆಜ್ಜೆ, 73 ಮಂದಿ ರಕ್ತದಾನ

ಜೀವ ಉಳಿಸುವ ಮಹಾಕಾರ್ಯಕ್ಕೆ ಪೊಲೀಸರ ಹೆಜ್ಜೆ, 73 ಮಂದಿ ರಕ್ತದಾನ

September 3, 2026
ಬ್ರೇಕ್ ಫೇಲ್, ರಿವರ್ಸ್ ಚಲಿಸಿದ ಬಸ್, 4 ಕಾರು 1 ಬೈಕ್ ಜಖಂ!

ಬ್ರೇಕ್ ಫೇಲ್, ರಿವರ್ಸ್ ಚಲಿಸಿದ ಬಸ್, 4 ಕಾರು 1 ಬೈಕ್ ಜಖಂ!

September 2, 2026
ಶಾಲಾ ಕ್ರೀಡಾಕೂಟದಲ್ಲಿ ಅನಾಹುತ, ಡಿಸ್ಕಸ್ ತಲೆಗೆ ಬಿದ್ದು ದೈಹಿಕ ಶಿಕ್ಷಕನಿಗೆ ಗಂಭೀರ ಗಾಯ!

ಶಾಲಾ ಕ್ರೀಡಾಕೂಟದಲ್ಲಿ ಅನಾಹುತ, ಡಿಸ್ಕಸ್ ತಲೆಗೆ ಬಿದ್ದು ದೈಹಿಕ ಶಿಕ್ಷಕನಿಗೆ ಗಂಭೀರ ಗಾಯ!

September 2, 2026

Recent News

Facebook Twitter
yuvadhwani

ಶಿವಮೊಗ್ಗ ಸುದ್ದಿಗಳ ಜೊತೆಗೆ ರಾಜ್ಯದ ಪ್ರಚಲಿತ ವಿದ್ಯಮಾನಗಳ ಸುದ್ದಿಗಳನ್ನು ಓದಲು ಯುವಧ್ವನಿ ನ್ಯೂಸ್ ಪೋರ್ಟಲ್ ಗೆ ತಮಗೆ ಸುಸ್ವಾಗತ. ವಿಭಿನ್ನ, ವಿಶೇಷ, ಉತ್ತಮ ಗುಣಮಟ್ಟದ ಸುದ್ದಿಗಳನ್ನು ಓದುಗ ಮನಸ್ಸುಗಳಿಗೆ ಮುಟ್ಟಿಸಲು ಬದ್ದರಾಗಿದ್ದೇವೆ.

Follow Us

Browse by Category

  • Uncategorized
  • what is the reason?
  • ಅಂಕಣಗಳು
  • ಆರೋಗ್ಯ
  • ಕ್ರೈಂ ನ್ಯೂಸ್
  • ತೀರ್ಥಹಳ್ಳಿ
  • ದೇಶ
  • ಭದ್ರಾವತಿ
  • ರಾಜ್ಯ
  • ವಿಶೇಷ
  • ಶಿಕಾರಿಪುರ
  • ಶಿವಮೊಗ್ಗ
  • ಸಾಗರ
  • ಸೊರಬ
  • ಹೊಸನಗರ

Recent News

ನೀರಿನಲ್ಲಿ ಅಡಗಿ ಕುಳಿತ ಆರೋಪಿ, ಹೆಡೆಮುರಿ ಕಟ್ಟಿದ ಭದ್ರಾವತಿ ಪೊಲೀಸ್

ನೀರಿನಲ್ಲಿ ಅಡಗಿ ಕುಳಿತ ಆರೋಪಿ, ಹೆಡೆಮುರಿ ಕಟ್ಟಿದ ಭದ್ರಾವತಿ ಪೊಲೀಸ್

September 3, 2026
ಜೀವ ಉಳಿಸುವ ಮಹಾಕಾರ್ಯಕ್ಕೆ ಪೊಲೀಸರ ಹೆಜ್ಜೆ, 73 ಮಂದಿ ರಕ್ತದಾನ

ಜೀವ ಉಳಿಸುವ ಮಹಾಕಾರ್ಯಕ್ಕೆ ಪೊಲೀಸರ ಹೆಜ್ಜೆ, 73 ಮಂದಿ ರಕ್ತದಾನ

September 3, 2026

Copyright © 2026 Yuva Dhwani. Designed by KIPL