ಶಿವಮೊಗ್ಗ : ಶಿವಮೊಗ್ಗ ತಾಲೂಕಿನ ಕುಂಸಿ ಸಮೀಪದ ಚೋರಡಿ ವಲಯ ಅರಣ್ಯ ವ್ಯಾಪ್ತಿಯ ಗಿಳಾಲಗುಂಡಿ ಅರಣ್ಯ ಪ್ರದೇಶದಲ್ಲಿ ಸಾಗುವಾನಿ ಮರ ಕಡಿದು ಓಮಿನಿ ವಾಹನಕ್ಕೆ ತುಂಬಿಸುತ್ತಿದ್ದ ಆರೋಪಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಇದನ್ನೂ ಓದಿ > ಪೊಲೀಸರಿಂದ 10 ಕಡೆ ಏಕಕಾಲಕ್ಕೆ ದಾಳಿ, 6 ಜನ ಶಂಕಿತರು ವಶಕ್ಕೆ!
ಆನಂದಪುರಂ ಸಮೀಪದ ಸರಗುಂದ ಗ್ರಾಮದ ಸುಧನ್ (24) ಬಂಧಿತ ಆರೋಪಿ. ಈತ ಗಿಳಾಲಗುಂಡಿ ಅರಣ್ಯದಲ್ಲಿ ಸಾಗುವಾನಿ ಮರವನ್ನು ಕಡಿದು, 6 ತುಂಡುಗಳನ್ನಾಗಿ ಕತ್ತರಿಸಿ ಓಮಿನಿ ವಾಹನದಲ್ಲಿ ತುಂಬುತ್ತಿದ್ದಾಗ ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿ ದಾಳಿ ನಡೆಸಿದ್ದಾರೆ. ಕಾರ್ಯಾಚರಣೆ ವೇಳೆ ಕಳವಿಗೆ ಬಳಸಿದ್ದ ಓಮಿನಿ ವಾಹನ, ಮರ ಕತ್ತರಿಸುವ ಮಿಷನ್ ಗರಗಸ ಹಾಗೂ ಸಾಗುವಾನಿ ಮರದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ > ತುಂಗಾ ಡ್ಯಾಮ್ ಭರ್ತಿ, ಗೇಟ್‌ಗಳ ಮೂಲಕ ನದಿಗೆ ನೀರು
ಚೋರಡಿ ವಲಯ ಅರಣ್ಯಾಧಿಕಾರಿ ಗೀತಾ ವಿಠಲ್ ನಾಯ್ಕ ಅವರ ಮಾರ್ಗದರ್ಶನದಲ್ಲಿ ಡಿಆರ್‌ಎಫ್‌ಒ ಚೇತನ್ ಕುಮಾರ್, ಅಶೋಕ್ ಮತ್ತು ಬೀಟ್ ಫಾರೆಸ್ಟ್ ಅಧಿಕಾರಿಗಳಾದ ಪ್ರದೀಶ್, ಅಸ್ರಾರ್ ಖಾನ್, ಭೋಜಪ್ಪ ಮತ್ತು ಪ್ರವೀಣ್ ಈ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.
ಇದನ್ನೂ ಓದಿ > ನ್ಯಾಷನಲ್ ಗೋಲ್ಡ್ & ಡೈಮಂಡ್‌ಗೆ 18ರ ಸಂಭ್ರಮ, 70 ಲಕ್ಷದ ಬಹುಮಾನ ಗೆಲ್ಲುವ ಅವಕಾಶ!














