ಭದ್ರಾವತಿ: ನ್ಯೂ ಟೌನ್ ಠಾಣೆ ಪೊಲೀಸರು ಜಾನುವಾರು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನೋರ್ವನನ್ನು ಬಂಧಿಸಿದ್ದು, ಆರೋಪಿಯ ಬಂಧನದಿಂದ 11 ವಿವಿಧ ಅಪರಾಧ ಪ್ರಕರಣಗಳು ಬೆಳಕಿಗೆ ಬಂದಿವೆ.
ಭದ್ರಾವತಿ ನಗರದ ಅಪ್ಪರ್ ಹುತ್ತಾ ನಿವಾಸಿ ದಿಲೀಪ್ ಎಸ್ ಯಾನೆ ಕರಿಯ (20) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಯಿಂದ 20,500 ನಗದು ಹಾಗೂ 95,500 ರೂ. ಮೌಲ್ಯದ 4 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ > ಈ ಮೂರು ಧರ್ಮ ಬಿಟ್ಟು ಬೇರೆ ಧರ್ಮಕ್ಕೆ ಕನ್ವರ್ಟ್ ಆದರೆ SC, ST ಸ್ಥಾನಮಾನ ರದ್ದು, ಸುಪ್ರೀಂ
ಕಳೆದ ಕೆಲ ತಿಂಗಳುಗಳ ಹಿಂದೆ ಭದ್ರಾವತಿಯ ಹೊಸಸಿದ್ದಾಪುರ ಗ್ರಾಮದ ವ್ಯಕ್ತಿಯೋರ್ವರ ಕೊಟ್ಟಿಗೆಯಲ್ಲಿ ಕಟ್ಟಿದ್ದ 2 ಹಸು ಹಾಗೂ 1 ಕರುವನ್ನು ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ಜಾನುವಾರು ಮಾಲೀಕರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಇದನ್ನೂ ಓದಿ > ಶಿವಮೊಗ್ಗ : ನಾಲ್ಕು ದಿನಗಳ ಕಾಲ ‘ಶೆಟ್ಟರ ಸಂತೆ’, ಶ್ರೀನಿವಾಸ ಕಲ್ಯಾಣೋತ್ಸವ
ತನಿಖೆಯ ವೇಳೆ ಆರೋಪಿಯನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಸದರಿ ಆರೋಪಿಯ 5 ಜಾನುವಾರು ಕಳ್ಳತನ ಪ್ರಕರಣ, 4 ದ್ವಿಚಕ್ರ ವಾಹನ ಕಳ್ಳತನ, 1 ಕೊಲೆ ಯತ್ನ, 1 ಹಲ್ಲೆ ಪ್ರಕರಣ ಸೇರಿದಂತೆ 11 ಪ್ರಕರಣಗಳಲ್ಲಿ ಭಾಗಿಯಾಗಿದ್ದ ವಿವರ ತಿಳಿದುಬಂದಿದೆ ಎಂದು ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
ಡಿವೈಎಸ್ಪಿ ಪ್ರಕಾಶ್ ರಾಥೋಡ್, ಇನ್ಸ್’ಪೆಕ್ಟರ್ ನಾಗಮ್ಮ ಮೇಲ್ವಿಚಾರಣೆಯಲ್ಲಿ ಸಬ್ ಇನ್ಸ್’ಪೆಕ್ಟರ್ ರಮೇಶ್ ಟಿ ನೇತೃತ್ವದಲ್ಲಿ ಪಿಎಐ ಕವಿತಾ, ಸಿಬ್ಬಂದಿಗಳಾದ ನವೀನ್, ಆದರ್ಶ, ಪ್ರಕಾಶ್, ಪ್ರಸನ್ನರವರು ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.














