ಶಿವಮೊಗ್ಗ: ಕೃಷಿ ಕಾಲೇಜಿನ ಸಮೀಪ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಯುವಕನನ್ನು ಇಆರ್ಎಸ್ಎಸ್ 112 ಸಿಬ್ಬಂದಿ ರಕ್ಷಿಸಿದ್ದಾರೆ.
ಸ್ಥಳೀಯ ಯುವಕ ಮರವೊಂದಕ್ಕೆ ಹಗ್ಗ ಬಿಗಿದು ನೇಣು ಹಾಕಿಕೊಳ್ಳಲು ಮುಂದಾಗಿದ್ದಾಗ ಇದನ್ನು ಗಮನಿಸಿದ ಸ್ಥಳೀಯರು 112 ಸಹಾಯವಾಣಿಗೆ ಕರೆ ಮಾಡಿದ್ದರು. ಸ್ಥಳಕ್ಕೆ ಬಂದ ವಿನೋಬನಗರ ಪೊಲೀಸ್ ಠಾಣೆಯ ಎಎಸ್ಐ ಹೇಮಾವತಿ ಹಾಗೂ ಇಆರ್ವಿ ವಾಹನದ ಚಾಲಕ ಅಣ್ಣಪ್ಪ ಯುವಕನ ರಕ್ಷಣೆಗೆ ಮಾಡಿದ್ದಾರೆ. ಆತನಿಗೆ ಬುದ್ಧಿವಾದ ಹೇಳಿ ಕುಟುಂಬಸ್ಥರೊಂದಿಗೆ ಕಳುಹಿಸಿದ್ದಾರೆ.
ಇದನ್ನೂ ಓದಿ ಭದ್ರಾವತಿ, ಜಾತಿ ನಿಂದನೆ, ಐವರು ಆರೋಪಿಗಳಿಗೆ 2 ವರ್ಷ ಜೈಲು
ನೇಣು ಹಾಕಿಕೊಂಡು ಒದ್ದಾಡುತ್ತಿದ್ದ ಆತನನ್ನು ಕೆಳಗಿಳಿಸಿ ಪ್ರಥಮ ಚಿಕಿತ್ಸೆ ಒದಗಿಸುವ ಮೂಲಕ ಪಾರು ಮಾಡಿದ್ದಾರೆ.
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 7483162573, yuvadhwanismg@gmail.com














