ಶಿವಮೊಗ್ಗ: ಗೃಹ ಬಳಕೆಯ ಸಿಲಿಂಡರ್ ಪೂರೈಕೆಯಲ್ಲಿ ಕೊರತೆ ಉಂಟಾಗಿರುವುದನ್ನು ವಿರೋಧಿಸಿ ಭದ್ರಾವತಿ ತಾಲ್ಲೂಕಿನ ಹೊಳೆಹೊನ್ನೂರು ಸಮೀಪದ ಮೂಡಲ ವಿಠಲಾಪುರ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ > ಶಿಕಾರಿಗೆ ಇಟ್ಟಿದ್ದ ಕಚ್ಚಾ ಬಾಂಬ್ ಸಿಡಿದು ಮಹಿಳೆಯ 5 ಬೆರಳು ಕಟ್?, ಘಟನೆ ನಡೆದಿದ್ದೇಲಿ?
ಮೂಡಲ ವಿಠಲಾಪುರದ ಬಸ್ ನಿಲ್ದಾಣದ ಬಳಿಯ ಗ್ಯಾಸ್ ಏಜೆನ್ಸಿ ಗೋಡೋನ್ ಎದುರು ನೂರಾರು ಖಾಲಿ ಸಿಲಿಂಡರ್‌ಗಳನ್ನು ಸಾಲಾಗಿ ಇಟ್ಟ ಗ್ರಾಮಸ್ಥರು ಅಲ್ಲಿಯೇ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದರು. ಇದರಿಂದ ಶಿವಮೊಗ್ಗ-ಚಿತ್ರದುರ್ಗ ನಡುವೆ ವಾಹನ ಸಂಚಾರ ಸ್ಥಗಿತಗೊಂಡು ಗಂಟೆಗೂ ಹೆಚ್ಚು ಕಾಲ ವಾಹನಗಳು ರಸ್ತೆಯಲ್ಲಿಯೇ ಸಾಲುಗಟ್ಟಿದವು.
ಇದನ್ನೂ ಓದಿ > ಮೊಣಕಾಲು ನೋವು ನಿವಾರಣಾ ಶಿಬಿರ, ಎಲ್ಲಿ?, ಯಾವಾಗ?
ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಬರಬೇಕು. ನಮಗೆ ಸಿಲಿಂಡರ್ ಕೊಡಿಸಬೇಕು. ಅಲ್ಲಿಯವರೆಗೂ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕೊಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಡು ಹಿಡಿದರು.
ರಸ್ತೆ ಸಂಚಾರ ಬಂದ್ ಆಗಿದ್ದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ ಕಚೇರಿಗಳಿಗೆ ತೆರಳುವವರು ತೊಂದರೆಗೊಳಗಾದರು.
ಸ್ಥಳಕ್ಕೆ ಬಂದ ಹೊಳೆಹೊನ್ನೂರು ಠಾಣೆ ಪೊಲೀಸರು, ಸಂಬಂಧಿಸಿದ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿ ಗ್ರಾಮಸ್ಥರ ಮನವೊಲಿಸಿ ರಸ್ತೆ ಸಂಚಾರ ಮುಕ್ತಗೊಳಿಸಿದರು.















