• About Us
  • Advertise
  • Privacy & Policy
  • Contact Us
Saturday, May 9, 2026
ರಾಕೇಶ್ ಸೋಮಿನಕೊಪ್ಪ ಸಾರಥ್ಯದಲ್ಲಿ
yuvadhwani
Subscribe
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
No Result
View All Result
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
No Result
View All Result
yuvadhwani
No Result
View All Result
  • Home
  • ಶಿವಮೊಗ್ಗ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
Home ಶಿವಮೊಗ್ಗ

ಜೆ.ಎನ್.ಎನ್.ಸಿ.ಇ ಕಾಲೇಜಿನಲ್ಲಿ ನಡೆದ ಎಐಸಿಟಿಇ ಬೂಟ್ ಕ್ಯಾಂಪ್’ ಹೇಗಿತ್ತು?, ಪ್ರಸ್ತುತಗೊಂಡ 50 ಕ್ಕೂ ಹೆಚ್ಚು ಯೋಜನೆಗಳು

ರಾಕೇಶ್ ಸೋಮಿನಕೊಪ್ಪ by ರಾಕೇಶ್ ಸೋಮಿನಕೊಪ್ಪ
April 11, 2026
in ಶಿವಮೊಗ್ಗ
ಜೆ.ಎನ್.ಎನ್.ಸಿ.ಇ ಕಾಲೇಜಿನಲ್ಲಿ ನಡೆದ ಎಐಸಿಟಿಇ ಬೂಟ್ ಕ್ಯಾಂಪ್’ ಹೇಗಿತ್ತು?, ಪ್ರಸ್ತುತಗೊಂಡ 50 ಕ್ಕೂ ಹೆಚ್ಚು ಯೋಜನೆಗಳು
Share on FacebookShare on TwitterShare on WhatsApp
ಶಿವಮೊಗ್ಗ: ಕಳೆದ 5 ದಿನಗಳಿಂದ ಬೂಟ್‌ಕ್ಯಾಂಪ್‌ನ ವಿವಿಧ ಕ್ರಿಯಾಶೀಲ ಚಟುವಟಿಕೆಗಳು ಮತ್ತು ಉಪನ್ಯಾಸಗಳಿಂದ ಪ್ರೇರಣೆ ಪಡೆದ ವಿದ್ಯಾರ್ಥಿಗಳು, ತಮ್ಮದೇ ಸೃಜನಶೀಲ ಯೋಜನೆಗಳನ್ನು ರೂಪಿಸಿ, ಅವುಗಳಿಗೆ ನಾವೀನ್ಯತೆ ಹಾಗೂ ಉದ್ಯಮಶೀಲತೆಯ ಸ್ಪರ್ಶ ನೀಡುವಲ್ಲಿ ಸಫಲರಾಗಿದ್ದರು.
ಒಂದು ನಾವೀನ್ಯ ಆಲೋಚನೆಯಿಂದ ಹೊಸ ಉದ್ಯಮ ಸ್ಥಾಪನೆಯವರೆಗೆ ಇರುವ ಪ್ರತಿಯೊಂದು ಹೆಜ್ಜೆಗಳನ್ನು ವಿಮರ್ಶಿಸಿ, ವಾಸ್ತವತೆಗೆ ತಕ್ಕಂತೆ ನೆರೆದ್ದಿದ್ದವರ ಎದುರು ಪ್ರಸ್ತುತ ಪಡಿಸುವಲ್ಲಿ ಯಶಸ್ವಿಯಾಗಿದ್ದರು.
ನಗರದ  ಜೆ.ಎನ್‌.ಎನ್‌ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಎಐಸಿಟಿಇ ನೇತೃತ್ವದಲ್ಲಿ ಭಾರತ ಶಿಕ್ಷಣ ಸಚಿವಾಲಯ, ವಾದ್ವಾನಿ ಫೌಂಡೇಷನ್‌ ಹಾಗೂ ಎಸ್‌ಬಿಐ ಫೌಂಡೇಷನ್‌ ಸಂಯುಕ್ತಾಶ್ರಯದಲ್ಲಿ  ಏರ್ಪಡಿಸಿದ್ದ ಐದು ದಿನಗಳ ನಾವೀನ್ಯತೆ ಮತ್ತು ಉದ್ಯಮಶೀಲತೆ ಬೂಟ್‌ ಕ್ಯಾಂಪ್‌ ಕಾರ್ಯಕ್ರಮದ ಸಮಾರೋಪದ ದಿನ, ವಿದ್ಯಾರ್ಥಿಗಳ ಆವಿಷ್ಕಾರಾತ್ಮಕ ಯೋಚನೆಗಳಿಗೆ ಪ್ರೇರಣಾದಾಯಕ ವೇದಿಕೆಯಾಗಿ ರೂಪಗೊಂಡಿತ್ತು.
ದೇಶದ ವಿವಿಧ ಕಾಲೇಜಿನ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ, ಸುಮಾರು 50 ಕ್ಕೂ ಹೆಚ್ಚು ಯೋಜನೆಗಳು ಪ್ರಸ್ತುತಗೊಂಡವು.  ಎಐ ಮತ್ತು ಐಓಟಿಯಂತಹ ಆಧುನಿಕ ತಂತ್ರಜ್ಞಾನಗಳ ತಳಹದಿಯಲ್ಲಿ, ತಮ್ಮ ಸುತ್ತಲಿನ ಸಮಸ್ಯೆಗಳಿಗೆ ನವೀನತೆಯ ಪರಿಹಾರ ನೀಡುವಲ್ಲಿ ಉತ್ಸುಕರಾಗಿದ್ದರು.
ಇದನ್ನೂ ಓದಿ >  ನಾಳೆ ಶಿವಮೊಗ್ಗದ ಈ ಪ್ರದೇಶಗಳಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ
ವಿಶೇಷವಾಗಿ ಆಂಧ್ರಪ್ರದೇಶದ ನರಸರಾವಪೇಟ ಇಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳ ತಂಡ ಪ್ರಸ್ತುತ ಪಡಿಸಿದ, ಬೆರಳುಗಳನ್ನು ಕಳೆದುಕೊಂಡವರಿಗೆ ಸಹಾಯಕವಾಗುವ ‘ಪ್ರೋಸ್ಥೆಟಿಕ್ ಲಿಂಬ್’ ಹೆಸರಿನ ಕೃತಕ ಸಾಧನದ ಯೋಜನೆ, ಡೈ-ಕಟ್ ಮುದ್ರಣ ತಂತ್ರಜ್ಞಾನ ಬಳಸಿ  ಮಕ್ಕಳಲ್ಲಿ ಡಿಜಿಟಲ್ ರಹಿತ ಶಿಕ್ಷಣಕ್ಕೆ ಉತ್ತೇಜಿಸುವ ‘ಎಜುಕೇಷನಲ್ ಹೆಕ್ಸಾ ಕ್ಯೂಬ್’, ಜೆ.ಎನ್‌.ಎನ್‌.ಸಿ ಕಾಲೇಜು ವಿದ್ಯಾರ್ಥಿಗಳ ತಂಡ ಪ್ರಸ್ತುತಪಡಿಸಿದ ಕೃತಕ ಬುದ್ದಿಮತ್ತೆ ಆಧಾರಿತ  ಡಿಜಿಟಲ್ ವಂಚನೆಗಳನ್ನು ತಡೆಯುವ ಹಾಗೂ ಆನ್‌ಲೈನ್ ವ್ಯವಸ್ಥೆಗಳ ನಂಬಿಕೆಯನ್ನು ಹೆಚ್ಚಿಸುವಂತಹ  ‘ಫ್ರಾಡ್‌ಲೆನ್ಸ್ ಟೆಕ್ನಾಲಜೀಸ್’ ಯೋಜನೆ, ಅದೇ ಕಾಲೇಜಿನ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ, ತಮ್ಮದೆ ಪ್ರೊಪೈಲ್‌ ನಿರ್ಮಿಸಿ ಸೂಕ್ತವಾದ ವಿದ್ಯಾರ್ಥಿ ವೇತನವನ್ನು ಹುಡುಕಿ, ಅರ್ಜಿ ಸಲ್ಲಿಸುವಂತಹ  ಕೇಂದ್ರಿಕೃತ ತಂತ್ರಜ್ಞಾನ ವೇದಿಕೆ, ತಮಿಳುನಾಡಿನ ಧೀರಜ್‌ಲಾಲ್ ಗಾಂಧಿ ಕಾಲೇಜ್ ಆಫ್ ಟೆಕ್ನಾಲಜಿ ತಂಡ ಪ್ರಸ್ತುತಪಡಿಸಿದ, ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಉಳಿಯುವ ಆಹಾರವನ್ನು ಹತ್ತಿರದ ಗ್ರಾಹಕರು ಹಾಗೂ ಎನ್‌ಜಿಒಗಳೊಂದಿಗೆ ಸಂಪರ್ಕಿಸುವಂತಹ ಸರ್‌ಪ್ಲಸ್‌ಸಿಂಕ್‌ ಯೋಚನೆಗಳು ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾದವು.
ಇದನ್ನೂ ಓದಿ >  ಕೂಡಲೇ ನೇಮಕಾತಿ ಪ್ರಾರಂಭಿಸಲು ಶಿವಮೊಗ್ಗದಲ್ಲಿ ಸ್ಪರ್ಧಾತ್ಮಕ ಆಕಾಂಕ್ಷಿಗಳಿಂದ ಬೃಹತ್ ಪ್ರತಿಭಟನೆ
ಶುಕ್ರವಾರ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳ ತಂಡಕ್ಕೆ ಅಭಿನಂದನಾ ಪತ್ರ ವಿತರಿಸಲಾಯಿತು. ಕಳೆದ 5 ದಿನಗಳಲ್ಲಿ ವಿದ್ಯಾರ್ಥಿಗಳು ಉದ್ಯಮಶೀಲ ವಿಷಯಗಳ ಕುರಿತ ಉಪನ್ಯಾಸದ ಜೊತೆಗೆ ಅಮೃತನೋನಿ ಸಂಸ್ಥೆ ಮತ್ತು ಎಐಸಿಟಿಇ ಐಡಿಯಾ ಲ್ಯಾಬ್‌ಗೆ ಭೇಟಿ ನೀಡಿ ನಾವೀನ್ಯತೆ ಮತ್ತು ಉದ್ಯಮಶೀಲತೆ ಕುರಿತು ಮಾಹಿತಿ ಪಡೆದರು. ಎಐಸಿಟಿಇ ಇನೋವೇಶನ್‌ ಕೇಂದ್ರದ ಪ್ರಾದೇಶಿಕ ಸಂಯೋಜಕರಾದ ಅಶೀಷ್‌ ತ್ರಿಪಾಠಿ,  ವಾದ್ವಾನಿ ಫೌಂಡೇಶನ್ ಸಂಪನ್ಮೂಲ ವ್ಯಕ್ತಿ ಡಾ.ಸುಪ್ರಭ,  ಕಾಲೇಜಿನ ಸಂಶೋಧನಾ ಡೀನ್‌ ಡಾ.ಎಸ್.ವಿ.ಸತ್ಯನಾರಾಯಣ, ಎಐಸಿಟಿಇ ಜೆಎನ್‌ಎನ್‌ಸಿಇ ಐಡಿಯಾ ಲ್ಯಾಬ್‌ ಸಂಯೋಜಕ ಡಾ.ಎಂ.ಎಚ್.ಮೋಯಿನುದ್ದಿನ್‌ ಖಾನ್‌, ಬೂಟ್‌ಕ್ಯಾಂಪ್‌ ಸಂಯೋಜಕ ಕೆ.ಎಲ್.ಅರುಣ್‌ ಕುಮಾರ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Tags: AICTE Boot Camp'How was the 'AICTE Boot Camp' held at JNNCE College? More than 50 projects presentedJNNCE Collegekannada news livelatest newsNESರಾಷ್ಟ್ರೀಯ ಶಿಕ್ಷಣ ಸಮಿತಿಶಿವಮೊಗ್ಗ
Previous Post

ನಾಳೆ ಶಿವಮೊಗ್ಗದ ಈ ಪ್ರದೇಶಗಳಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ

Next Post

ಶಿವಮೊಗ್ಗದಲ್ಲಿ ನಡೆಯಲಿದೆ ಬೃಹತ್‌ ಸೈಕಲ್‌, ಕಾರ್‌, ಬೈಕ್‌  ರ‍್ಯಾಲಿ, ಕಾರಣವೇನು?

ರಾಕೇಶ್ ಸೋಮಿನಕೊಪ್ಪ

ರಾಕೇಶ್ ಸೋಮಿನಕೊಪ್ಪ

Next Post
ಶಿವಮೊಗ್ಗದಲ್ಲಿ ನಡೆಯಲಿದೆ ಬೃಹತ್‌ ಸೈಕಲ್‌, ಕಾರ್‌, ಬೈಕ್‌  ರ‍್ಯಾಲಿ, ಕಾರಣವೇನು?

ಶಿವಮೊಗ್ಗದಲ್ಲಿ ನಡೆಯಲಿದೆ ಬೃಹತ್‌ ಸೈಕಲ್‌, ಕಾರ್‌, ಬೈಕ್‌  ರ‍್ಯಾಲಿ, ಕಾರಣವೇನು?

  • Trending
  • Comments
  • Latest
ನ್ಯಾಷನಲ್ ಪಬ್ಲಿಕ್ ಶಾಲೆಯ ಸಾಧನೆ, ಸಿಬಿಎಸ್ಇ 10ನೇ ತರಗತಿಯಲ್ಲಿ 100% ಫಲಿತಾಂಶ

ನ್ಯಾಷನಲ್ ಪಬ್ಲಿಕ್ ಶಾಲೆಯ ಸಾಧನೆ, ಸಿಬಿಎಸ್ಇ 10ನೇ ತರಗತಿಯಲ್ಲಿ 100% ಫಲಿತಾಂಶ

April 16, 2026
ಎಸ್.ಎಸ್.ಎಲ್.ಸಿ: ಎನ್ಇಎಸ್ ಶಾಲೆಗಳಿಗೆ ಉತ್ತಮ ಫಲಿತಾಂಶ

ಎಸ್.ಎಸ್.ಎಲ್.ಸಿ: ಎನ್ಇಎಸ್ ಶಾಲೆಗಳಿಗೆ ಉತ್ತಮ ಫಲಿತಾಂಶ

April 24, 2026
ಜೆ.ಎನ್.ಎನ್.ಸಿ.ಇ ಕಾಲೇಜಿನ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಹಿರಿಯ ವಿದ್ಯಾರ್ಥಿಗಳ ‘ಪವರ್ ಮೀಟ್’

ಜೆ.ಎನ್.ಎನ್.ಸಿ.ಇ ಕಾಲೇಜಿನ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಹಿರಿಯ ವಿದ್ಯಾರ್ಥಿಗಳ ‘ಪವರ್ ಮೀಟ್’

April 25, 2026
ಶಿವಮೊಗ್ಗ | ತುಂಗಾ ನದಿ ಸೇತುವೆ ಮೇಲೆ ಖಾಸಗಿ ಬಸ್-ಟಿಟಿ ಮುಖಾಮುಖಿ ಡಿಕ್ಕಿ

ಶಿವಮೊಗ್ಗ | ತುಂಗಾ ನದಿ ಸೇತುವೆ ಮೇಲೆ ಖಾಸಗಿ ಬಸ್-ಟಿಟಿ ಮುಖಾಮುಖಿ ಡಿಕ್ಕಿ

January 26, 2026
ಶಿವಮೊಗ್ಗ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು, ಆಗಿದ್ದೇನು?

ಶಿವಮೊಗ್ಗ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು, ಆಗಿದ್ದೇನು?

4
ಶಿಕಾರಿಪುರ | ಶಾಲಾ ಕೊಠಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಶಿಕ್ಷಕ

ಮಾವನನ್ನೇ ಕುತ್ತಿಗೆ ಸೀಳಿ ಹತ್ಯೆಗೆ ಯತ್ನಿಸಿದ ಅಳಿಯ, ಕಾರಣವೇನು?

3
ಶಿವಮೊಗ್ಗ ಸೀಗೆಹಟ್ಟಿಯ  ‘ಶಿವಚೌಡಿ ಧರಣಿ’ ಇನ್ನಿಲ್ಲ, ವಿಭಿನ್ನವಾಗಿ ತಿಥಿ ಕಾರ್ಯ

ಶಿವಮೊಗ್ಗ ಸೀಗೆಹಟ್ಟಿಯ  ‘ಶಿವಚೌಡಿ ಧರಣಿ’ ಇನ್ನಿಲ್ಲ, ವಿಭಿನ್ನವಾಗಿ ತಿಥಿ ಕಾರ್ಯ

2
ಶಿವಮೊಗ್ಗ, ಖಾಸಗಿ ಬಸ್-ಆಟೋ ಮುಖಾಮುಖಿ ಡಿಕ್ಕಿ, ಓರ್ವ ಯುವಕ ಸಾವು

ಶಿವಮೊಗ್ಗ, ಖಾಸಗಿ ಬಸ್-ಆಟೋ ಮುಖಾಮುಖಿ ಡಿಕ್ಕಿ, ಓರ್ವ ಯುವಕ ಸಾವು

2
ಬೆಂಗಳೂರಿನಿಂದ ಕುಂದಾಪುರಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಪಲ್ಟಿ!

ಬೆಂಗಳೂರಿನಿಂದ ಕುಂದಾಪುರಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಪಲ್ಟಿ!

May 8, 2026
ಬೇಸೂರು ಅಣು ವಿದ್ಯುತ್ ಸ್ಥಾವರಕ್ಕೆ ವಿರೋಧ, ಸಿಡಿದೆದ್ದ ಜನ!

ಬೇಸೂರು ಅಣು ವಿದ್ಯುತ್ ಸ್ಥಾವರಕ್ಕೆ ವಿರೋಧ, ಸಿಡಿದೆದ್ದ ಜನ!

May 8, 2026
ಸಾಗರ, ಅಂಬೇಡ್ಕರ್ ಸರ್ಕಲ್‌ನಲ್ಲಿ ಕಾರುಗಳ ನಡುವೆ ಡಿಕ್ಕಿ, ಡಿವೈಡರ್ ಏರಿ ಸ್ಕೂಟಿಗೆ ಗುದ್ದಿದ ಕಾರ್!

ಸಾಗರ, ಅಂಬೇಡ್ಕರ್ ಸರ್ಕಲ್‌ನಲ್ಲಿ ಕಾರುಗಳ ನಡುವೆ ಡಿಕ್ಕಿ, ಡಿವೈಡರ್ ಏರಿ ಸ್ಕೂಟಿಗೆ ಗುದ್ದಿದ ಕಾರ್!

May 8, 2026
ಮೇ.10 -11 : ಟೀಮ್‌ ಈಶ್ವರ್‌ ಮಲ್ಪೆಯಿಂದ ಉಚಿತ ಕಿವಿ ಶ್ರವಣ ತಪಾಸಣೆ ಶಿಬಿರ

ಮೇ.10 -11 : ಟೀಮ್‌ ಈಶ್ವರ್‌ ಮಲ್ಪೆಯಿಂದ ಉಚಿತ ಕಿವಿ ಶ್ರವಣ ತಪಾಸಣೆ ಶಿಬಿರ

May 7, 2026

Recent News

Facebook Twitter
yuvadhwani

ಶಿವಮೊಗ್ಗ ಸುದ್ದಿಗಳ ಜೊತೆಗೆ ರಾಜ್ಯದ ಪ್ರಚಲಿತ ವಿದ್ಯಮಾನಗಳ ಸುದ್ದಿಗಳನ್ನು ಓದಲು ಯುವಧ್ವನಿ ನ್ಯೂಸ್ ಪೋರ್ಟಲ್ ಗೆ ತಮಗೆ ಸುಸ್ವಾಗತ. ವಿಭಿನ್ನ, ವಿಶೇಷ, ಉತ್ತಮ ಗುಣಮಟ್ಟದ ಸುದ್ದಿಗಳನ್ನು ಓದುಗ ಮನಸ್ಸುಗಳಿಗೆ ಮುಟ್ಟಿಸಲು ಬದ್ದರಾಗಿದ್ದೇವೆ.

Follow Us

Browse by Category

  • Uncategorized
  • ಅಂಕಣಗಳು
  • ಆರೋಗ್ಯ
  • ಕ್ರೈಂ ನ್ಯೂಸ್
  • ತೀರ್ಥಹಳ್ಳಿ
  • ದೇಶ
  • ಭದ್ರಾವತಿ
  • ರಾಜ್ಯ
  • ವಿಶೇಷ
  • ಶಿಕಾರಿಪುರ
  • ಶಿವಮೊಗ್ಗ
  • ಸಾಗರ
  • ಸೊರಬ
  • ಹೊಸನಗರ

Recent News

ಬೆಂಗಳೂರಿನಿಂದ ಕುಂದಾಪುರಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಪಲ್ಟಿ!

ಬೆಂಗಳೂರಿನಿಂದ ಕುಂದಾಪುರಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಪಲ್ಟಿ!

May 8, 2026
ಬೇಸೂರು ಅಣು ವಿದ್ಯುತ್ ಸ್ಥಾವರಕ್ಕೆ ವಿರೋಧ, ಸಿಡಿದೆದ್ದ ಜನ!

ಬೇಸೂರು ಅಣು ವಿದ್ಯುತ್ ಸ್ಥಾವರಕ್ಕೆ ವಿರೋಧ, ಸಿಡಿದೆದ್ದ ಜನ!

May 8, 2026

Copyright © 2026 Yuva Dhwani. Designed by KIPL