• About Us
  • Advertise
  • Privacy & Policy
  • Contact Us
Tuesday, June 23, 2026
ರಾಕೇಶ್ ಸೋಮಿನಕೊಪ್ಪ ಸಾರಥ್ಯದಲ್ಲಿ
yuvadhwani
Subscribe
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
No Result
View All Result
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
No Result
View All Result
yuvadhwani
No Result
View All Result
  • Home
  • ಶಿವಮೊಗ್ಗ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
Home ಶಿವಮೊಗ್ಗ

ಮೇ 15ರಂದು “ವಿಶ್ವಬಂಧು” ನೂತನ ಗೋಶಾಲೆ ಆರಂಭ, ಮಾಜಿ DCM ಕೆ.ಎಸ್.ಈಶ್ವರಪ್ಪ

ರಾಕೇಶ್ ಸೋಮಿನಕೊಪ್ಪ by ರಾಕೇಶ್ ಸೋಮಿನಕೊಪ್ಪ
May 9, 2026
in ಶಿವಮೊಗ್ಗ
ಮೇ 15ರಂದು “ವಿಶ್ವಬಂಧು” ನೂತನ ಗೋಶಾಲೆ ಆರಂಭ, ಮಾಜಿ DCM ಕೆ.ಎಸ್.ಈಶ್ವರಪ್ಪ
Share on FacebookShare on TwitterShare on WhatsApp
ಶಿವಮೊಗ್ಗ: ಗೋಸೇವೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡುವ ಉದ್ಧೇಶದಿಂದ ಗೋವರ್ಧನ ಟ್ರಸ್ಟ್  ನಗರದ ಹೊರವಲಯ ಅಬ್ಬಲಗೆರೆಯಲ್ಲಿ ಮೇ 15ರಂದು ಬೆಳಿಗ್ಗೆ 11 ಗಂಟೆಗೆ “ವಿಶ್ವಬಂಧು” ಎಂಬ ನೂತನ ಗೋಶಾಲೆಯನ್ನು ಆರಂಭಿಸುವುದರ ಜೊತೆಗೆ “ಸಾವಯವ ಕೃಷಿಕರ ಟ್ರಸ್ಟ್”ನ ಉದ್ಘಾಟನಾ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಉಪಮುಖ್ಯಮಂತ್ರಿ, ಗೋವರ್ಧನ ಟ್ರಸ್ಟ್ ನ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಇದನ್ನೂ ಓದಿ >  ಸೊರಬದಲ್ಲಿ ಮದುವೆ ದಿಬ್ಬಣದ ಬಸ್ ಪಲ್ಟಿ, ತಪ್ಪಿದ ಬಾರಿ ಅನಾಹುತ
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,  ಅಬ್ಬಲಗೆರೆಯ ಓಂಪ್ರಕಾಶ್ ಅವರ ತೋಟದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು  ದಿವ್ಯ ಸಾನ್ನಿಧ್ಯವನ್ನು ವಹಿಸಲಿದ್ದಾರೆ. ನೂತನ ಗೋಶಾಲೆಗೆ ಶ್ರೀ ಮಠದಿಂದ 25 ಮಲೆನಾಡುಗಿಡ್ಡ ತಳಿಯ ಹಸುವನ್ನು ಆರಂಭಿಕವಾಗಿ ಕೊಡುಗೆ ನೀಡುತ್ತಿದ್ದಾರೆ ಎಂದ ಅವರು ಗೋರಕ್ಷಣೆಯ ಧ್ಯೇಯದೊಂದಿಗೆ ಪ್ರಾರಂಭವಾದ ಗೋವರ್ಧನ ಟ್ರಸ್ಟ್ ಈಗಾಗಲೇ ಗೋಸಂರಕ್ಷಣೆಯ ವಿಚಾರದಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ ಎಂದ ಅವರು ನಗರಕ್ಕೆ ಹತ್ತಿರವಿರುವ ಜೂರು ಗೋಶಾಲೆಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸುವುದು, ಗೋವುಗಳಿಗೆ ಮೇವು ಒದಗಿಸುವುದು ಅಲ್ಲದೆ ಖಯಿಲೆಯಿಂದ ಬಳಲುತ್ತಿರುವ ಬಿಡಾಡಿ ಗೋವುಗಳಿಗಾಗಿ ಪಶು ವೈದ್ಯಕೀಯ ಅಂಬ್ಯೂಲೆನ್ಸ್ ವೈವಸ್ಥೆಯನ್ನು ಮಾಡಲಾಗಿದೆ ಎಂದರು.
ಇದನ್ನೂ ಓದಿ >  ಪ್ರೇಯಸಿಯೊಂದಿಗೆ ಸೇರಿ ಗಂಡನ ಕೊಲೆ, ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್
ವಿಷಮುಕ್ತ ಆಹಾರ, ಸಾವಯವ ಕೃಷಿ, ದೇಸಿ ಹಸುಗಳ ಸಂರಕ್ಷಣೆ, ಸಾವಯವ ಗೊಬ್ಬರ ತಯಾರಿಕೆ, ತಾರಸಿ ತೋಟ, ಕೃಷಿ ಉತ್ಪನ್ನಗಳ ಮೌಲ್ಯ ವರ್ದನೆ ಇನ್ನಿತರ ಉದ್ಧೇಶಗಳೊಂದಿಗೆ ನೂತನವಾಗಿ “ಸಾವಯವ ಕೃಷಿಕರ ಟ್ರಸ್ಟ್”ನ್ನೂ ಅಂದೇ ಉದ್ಘಾಟಿಸಲಾಗುವುದು. ನಗರ ಪ್ರದೇಶದ ಗೃಹಿಣಿಯರಿಗಾಗಿ ತಾರಸಿ ತೋಟ ಮಾಡುವ ಕುರಿತು ತರಬೇತಿ, ತರಕಾರಿ ಹಾಗೂ ಇನ್ನಿತರ ಬೆಳೆಗಳ ಬಿತ್ತನೆ ಬೀಜಗಳ ವಿತರಣೆ, ವಿಷಮುಕ್ತ ಆಹಾರ ಧಾನ್ಯಗಳನ್ನು, ತರಕಾರಿ ಬೆಳೆಗಳನ್ನು ಬೆಳೆಯಲು ರೈತರಿಗೆ ಉತ್ತ್ತೇಜನ ನೀಡುವುದರ ಮೂಲಕ ಪರಿಸರ ಸಂರಕ್ಷಣೆ, ಸಮಾಜದ ಸ್ವಾಸ್ತ್ಯ ಕಾಪಾಡುವ ನಿಟ್ಟಿನಲ್ಲಿ ಈ ಟ್ರಸ್ಟ್ ಕಾರ್ಯ ನಿರ್ವಹಿಸಲಿದೆ. ಟ್ರಸ್ಟಿನ ಅಧ್ಯಕ್ಷರಾಗಿ ಎಂ.ಎಂ.ಜಯಸ್ವಾಮಿ, ಉಪಾಧ್ಯಕ್ಷರಾಗಿ ದೇವೇಂದ್ರಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಡಾ.ಎಂ.ಎಸ್.ಪ್ರಶಾಂತ್,  ಕಾರ್ಯದರ್ಶಿಯಾಗಿ ಸುರೇಶ್, ಖಜಾಂಚಿಗಳಾಗಿ ಓಂಪ್ರಕಾಶ್ ನಿಯುಕ್ತಿಯಾಗಿದ್ದಾರೆ ಎಂದು ಮಾಹಿತಿ ನೀಡಿದರು.
 15ರಂದು  ಬೆಳಿಗ್ಗೆ ಶ್ರೀಗಳನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಗುವುದು. ಗೋರಕ್ಷಣೆ ಕಾರ್ಯಕ್ಕೆ ಗೋವರ್ಧನ ಟ್ರಸ್ಟ್ ಗೆ ಚಟ್ನಳ್ಳಿ ರಮೇಶ್ 6 ಎಕರೆ, ಭೂಪಾಳಂ ಶಿವಸ್ವಾಮಿ 3 ಎಕರೆ, ಶರಣ್ಯ ಸಂಸ್ಥೆ 2 ಎಕರೆ ಹಾಗೂ ಮಹೇಶ್ ಮೆಹ್ತಾ 2 ಎಕರೆ ಜಮೀನು ನೀಡಿ ಸಹಕರಿಸಿದ್ದಾರೆ. ಅವರಿಗೆ ಟ್ರಸ್ಟ್ ಆಭಾರಿಯಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆ.ಇ. ಕಾಂತೇಶ್, ಎಸ್.ಕೆ.ಶೇಷಾಚಲ, ಉಮೇಶ್ ಆರಾಧ್ಯ, ಪೂರ್ಣಾನಂದ, ಶ್ರೀಪಾದ ಭಟ್, ರಾಕೇಶ್, ಶುಭಾ ರಾಘವೇಂದ್ರ, ಪುಷ್ಪಾವತಿ, ಪ್ರಮಥ, ಸುಮತೀಂದ್ರಾಚಾರ್ ಮೊದಲಾದವರಿದ್ದರು.
Tags: “Vishwabandhu” new cow shelter to be inaugurated on May 15Govardhan Trust President K.S. EshwarappaK.S. Eshwarappa!kannada news livelatest newsshimogashivamogga
Previous Post

ಸೊರಬದಲ್ಲಿ ಮದುವೆ ದಿಬ್ಬಣದ ಬಸ್ ಪಲ್ಟಿ, ತಪ್ಪಿದ ಬಾರಿ ಅನಾಹುತ

Next Post

ಶಿವಮೊಗ್ಗ, ಮೇ 11 ರಂದು ಉದ್ಯೋಗಕ್ಕಾಗಿ ನೇರ ಸಂದರ್ಶನ

ರಾಕೇಶ್ ಸೋಮಿನಕೊಪ್ಪ

ರಾಕೇಶ್ ಸೋಮಿನಕೊಪ್ಪ

Next Post
JOB NEWS : ಶಿವಮೊಗ್ಗ : ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ

ಶಿವಮೊಗ್ಗ, ಮೇ 11 ರಂದು ಉದ್ಯೋಗಕ್ಕಾಗಿ ನೇರ ಸಂದರ್ಶನ

  • Trending
  • Comments
  • Latest
ನ್ಯಾಷನಲ್ ಪಬ್ಲಿಕ್ ಶಾಲೆಯ ಸಾಧನೆ, ಸಿಬಿಎಸ್ಇ 10ನೇ ತರಗತಿಯಲ್ಲಿ 100% ಫಲಿತಾಂಶ

ನ್ಯಾಷನಲ್ ಪಬ್ಲಿಕ್ ಶಾಲೆಯ ಸಾಧನೆ, ಸಿಬಿಎಸ್ಇ 10ನೇ ತರಗತಿಯಲ್ಲಿ 100% ಫಲಿತಾಂಶ

April 16, 2026
ಎಸ್.ಎಸ್.ಎಲ್.ಸಿ: ಎನ್ಇಎಸ್ ಶಾಲೆಗಳಿಗೆ ಉತ್ತಮ ಫಲಿತಾಂಶ

ಎಸ್.ಎಸ್.ಎಲ್.ಸಿ: ಎನ್ಇಎಸ್ ಶಾಲೆಗಳಿಗೆ ಉತ್ತಮ ಫಲಿತಾಂಶ

April 24, 2026
ಜೆ.ಎನ್.ಎನ್.ಸಿ.ಇ ಕಾಲೇಜಿನ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಹಿರಿಯ ವಿದ್ಯಾರ್ಥಿಗಳ ‘ಪವರ್ ಮೀಟ್’

ಜೆ.ಎನ್.ಎನ್.ಸಿ.ಇ ಕಾಲೇಜಿನ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಹಿರಿಯ ವಿದ್ಯಾರ್ಥಿಗಳ ‘ಪವರ್ ಮೀಟ್’

April 25, 2026
ಶಿವಮೊಗ್ಗ | ತುಂಗಾ ನದಿ ಸೇತುವೆ ಮೇಲೆ ಖಾಸಗಿ ಬಸ್-ಟಿಟಿ ಮುಖಾಮುಖಿ ಡಿಕ್ಕಿ

ಶಿವಮೊಗ್ಗ | ತುಂಗಾ ನದಿ ಸೇತುವೆ ಮೇಲೆ ಖಾಸಗಿ ಬಸ್-ಟಿಟಿ ಮುಖಾಮುಖಿ ಡಿಕ್ಕಿ

January 26, 2026
ಶಿವಮೊಗ್ಗ, ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ, ವಿದ್ಯಾರ್ಥಿನಿ ಸಾವು

ಶಿವಮೊಗ್ಗ, ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ, ವಿದ್ಯಾರ್ಥಿನಿ ಸಾವು

4
ಶಿವಮೊಗ್ಗ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು, ಆಗಿದ್ದೇನು?

ಶಿವಮೊಗ್ಗ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು, ಆಗಿದ್ದೇನು?

4
ಶಿಕಾರಿಪುರ | ಶಾಲಾ ಕೊಠಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಶಿಕ್ಷಕ

ಮಾವನನ್ನೇ ಕುತ್ತಿಗೆ ಸೀಳಿ ಹತ್ಯೆಗೆ ಯತ್ನಿಸಿದ ಅಳಿಯ, ಕಾರಣವೇನು?

3
ಶಿವಮೊಗ್ಗ, ಬೈಕ್ ವೀಲಿಂಗ್ ಮಾಡಿ ವಿಡಿಯೋ ಹರಿಬಿಟ್ಟ ಯುವಕರು, ಮುಂದೇನಾಯ್ತು?

ಶಿವಮೊಗ್ಗ, ಬೈಕ್ ವೀಲಿಂಗ್ ಮಾಡಿ ವಿಡಿಯೋ ಹರಿಬಿಟ್ಟ ಯುವಕರು, ಮುಂದೇನಾಯ್ತು?

3
ಎತ್ತಿನಗಾಡಿಯಿಂದ ಬಿದ್ದು ಕಾರ್ಮಿಕ ಸಾವು

ಮೋಟಾರ್ ಆನ್ ಮಾಡುವಾಗ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವು! ಆಗಿದ್ದೇನು?

June 23, 2026
ಎಸ್ಸಿ, ಎಸ್ಟಿ, ಬಿಪಿಎಲ್ ಫಲಾನುಭವಿಗಳು ಆತಂಕಕ್ಕೆ, ಕಲ್ಲೂರು ಮೇಘರಾಜ್ ಅವರ ಆಗ್ರಹವೇನು?

ಎಸ್ಸಿ, ಎಸ್ಟಿ, ಬಿಪಿಎಲ್ ಫಲಾನುಭವಿಗಳು ಆತಂಕಕ್ಕೆ, ಕಲ್ಲೂರು ಮೇಘರಾಜ್ ಅವರ ಆಗ್ರಹವೇನು?

June 23, 2026
ಜೂ.27:ನಾಡಪ್ರಭು ಕೆಂಪೇಗೌಡ  ಜಯಂತಿ, ಕಸಾಪ ಅಧ್ಯಕ್ಷ ಡಿ.ಮಂಜುನಾಥ್‌ ಗೆ ಕೆಂಪೇಗೌಡ ಪ್ರಶಸ್ತಿ

ಜೂ.27:ನಾಡಪ್ರಭು ಕೆಂಪೇಗೌಡ  ಜಯಂತಿ, ಕಸಾಪ ಅಧ್ಯಕ್ಷ ಡಿ.ಮಂಜುನಾಥ್‌ ಗೆ ಕೆಂಪೇಗೌಡ ಪ್ರಶಸ್ತಿ

June 23, 2026
ಶಿವಮೊಗ್ಗ, ಔಷಧ ಮಹಾವಿದ್ಯಾಲಯದಲ್ಲಿ ಔಷಧ ವಿತರಕರಿಗೆ ವಿಶೇಷ ಕಾರ್ಯಾಗಾರ

ಶಿವಮೊಗ್ಗ, ಔಷಧ ಮಹಾವಿದ್ಯಾಲಯದಲ್ಲಿ ಔಷಧ ವಿತರಕರಿಗೆ ವಿಶೇಷ ಕಾರ್ಯಾಗಾರ

June 23, 2026

Recent News

Facebook Twitter
yuvadhwani

ಶಿವಮೊಗ್ಗ ಸುದ್ದಿಗಳ ಜೊತೆಗೆ ರಾಜ್ಯದ ಪ್ರಚಲಿತ ವಿದ್ಯಮಾನಗಳ ಸುದ್ದಿಗಳನ್ನು ಓದಲು ಯುವಧ್ವನಿ ನ್ಯೂಸ್ ಪೋರ್ಟಲ್ ಗೆ ತಮಗೆ ಸುಸ್ವಾಗತ. ವಿಭಿನ್ನ, ವಿಶೇಷ, ಉತ್ತಮ ಗುಣಮಟ್ಟದ ಸುದ್ದಿಗಳನ್ನು ಓದುಗ ಮನಸ್ಸುಗಳಿಗೆ ಮುಟ್ಟಿಸಲು ಬದ್ದರಾಗಿದ್ದೇವೆ.

Follow Us

Browse by Category

  • Uncategorized
  • what is the reason?
  • ಅಂಕಣಗಳು
  • ಆರೋಗ್ಯ
  • ಕ್ರೈಂ ನ್ಯೂಸ್
  • ತೀರ್ಥಹಳ್ಳಿ
  • ದೇಶ
  • ಭದ್ರಾವತಿ
  • ರಾಜ್ಯ
  • ವಿಶೇಷ
  • ಶಿಕಾರಿಪುರ
  • ಶಿವಮೊಗ್ಗ
  • ಸಾಗರ
  • ಸೊರಬ
  • ಹೊಸನಗರ

Recent News

ಎತ್ತಿನಗಾಡಿಯಿಂದ ಬಿದ್ದು ಕಾರ್ಮಿಕ ಸಾವು

ಮೋಟಾರ್ ಆನ್ ಮಾಡುವಾಗ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವು! ಆಗಿದ್ದೇನು?

June 23, 2026
ಎಸ್ಸಿ, ಎಸ್ಟಿ, ಬಿಪಿಎಲ್ ಫಲಾನುಭವಿಗಳು ಆತಂಕಕ್ಕೆ, ಕಲ್ಲೂರು ಮೇಘರಾಜ್ ಅವರ ಆಗ್ರಹವೇನು?

ಎಸ್ಸಿ, ಎಸ್ಟಿ, ಬಿಪಿಎಲ್ ಫಲಾನುಭವಿಗಳು ಆತಂಕಕ್ಕೆ, ಕಲ್ಲೂರು ಮೇಘರಾಜ್ ಅವರ ಆಗ್ರಹವೇನು?

June 23, 2026

Copyright © 2026 Yuva Dhwani. Designed by KIPL