ನವದೆಹಲಿ : ಸುಮಾರು ನಾಲ್ಕು ವರ್ಷಗಳ ನಂತರ ತೈಲ ಕಂಪನಿಗಳು ದರದಲ್ಲಿ ಪರಿಷ್ಕರಣೆ ಮಾಡಿದ್ದು, ಇದರಂತೆ ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಪ್ರತಿ ಲೀಟರ್’ಗೆ 3 ರೂ. ಏರಿಕೆಯಾಗಿದೆ.
ಮಧ್ಯಪ್ರಾಚ್ಯದಲ್ಲಿ ಮುಂದುವರಿದಿರುವ ಯುದ್ಧ #War ಹಾಗೂ ಉದ್ವಿಗ್ನ ಪರಿಸ್ಥಿತಿ ಪರಿಣಾಮ ಇದೀಗ ಭಾರತಕ್ಕೂ ತಟ್ಟಿದ್ದು, ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಲೀಟರ್’ಗೆ ರೂ.3ರಷ್ಟು ಹೆಚ್ಚಳ ಮಾಡಲಾಗಿದೆ.
ಇದನ್ನೂ ಓದಿ > ನಟ ದರ್ಶನ್ ಗೆ ಬಿಗ್ ಶಾಕ್, ಸದ್ಯಕ್ಕಿಲ್ಲ ಜಾಮೀನು, ಕಾರಣವೇನು?
ತೈಲ ಕಂಪನಿಗಳು ನಾಲ್ಕು ವರ್ಷದ ಹಿಂದೆ ದರವನ್ನು ಪರಿಷ್ಕರಣೆ ಮಾಡಿದ್ದವು. ಇದೀಗ ಯುದ್ಧದ ಹಾಗೂ ಜಾಗತಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ದರವನ್ನು ಪರಿಷ್ಕರಣೆ ಮಾಡಿವೆ.
ಇದರಂತೆ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರವು ರೂ.94.77ರಿಂದ ರೂ.97.77ಕ್ಕೆ ಏರಿಕೆಯಾದರೆ, ಡೀಸೆಲ್ ದರವು ರೂ.89.67ರಿಂದ ರೂ.90.67ಕ್ಕೆ ಹೆಚ್ಚಳವಾಗಿದೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಪರಿಷ್ಕೃತ ದರಗಳ ಪ್ರಕಾರ, ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 102.92 ರೂ.ಗಳಿಂದ 106.17 ರೂ.ಗಳಿಗೆ ಏರಿಕೆಯಾಗಿದ್ದು, ಪ್ರತಿ ಲೀಟರ್ಗೆ 3.27 ರೂ.ಗಳಷ್ಟು ಹೆಚ್ಚಳವಾಗಿದೆ. ಡೀಸೆಲ್ ಬೆಲೆ ಲೀಟರ್ಗೆ 90.99 ರೂ.ಗಳಿಂದ 94.10 ರೂ.ಗಳಿಗೆ ಏರಿಕೆಯಾಗಿದ್ದು, ಪ್ರತಿ ಲೀಟರ್ಗೆ 3.12 ರೂ.ಗಳಷ್ಟು ಹೆಚ್ಚಳವಾಗಿದೆ. XP95 ಪೆಟ್ರೋಲ್ ಬೆಲೆಯೂ ಲೀಟರ್ಗೆ 112.40 ರೂ.ಗಳಿಂದ 115.66 ರೂ.ಗಳಿಗೆ ಏರಿಕೆಯಾಗಿದೆ. ಮಂಗಳೂರಿನಲ್ಲಿ ಪೆಟ್ರೋಲ್ ಲೀಟರ್ಗೆ 105.35 ರೂ. ಡೀಸೆಲ್ ಗೆ 93.30 ರೂ. ಇದೆ.
ಇದನ್ನೂ ಓದಿ > ಕೆ.ಎಸ್. ಈಶ್ವರಪ್ಪ ಹೇಳಿಕೆಗೆ ಆಕ್ರೋಶ, ಕಾಂಗ್ರೆಸ್ ಮುಖಂಡ ಮಧುಸೂದನ್ ಕೊಟ್ಟ ಸವಾಲೇನು?
ಶಿವಮೊಗ್ಗ ಜಿಲ್ಲೆಯಲ್ಲಿ ಪೆಟ್ರೋಲ್, ಡೀಸೆಲ್ ದರದ ವಿವರ
ಪೆಟ್ರೋಲ್ ದರ: ಮೇ 14ರವರೆಗೆ ಪ್ರತಿ ಲೀಟರ್ಗೆ ₹103.86 ಇತ್ತು. ಮೇ 15ರಿಂದ ₹106.86ಕ್ಕೆ ಹೆಚ್ಚಳವಾಗಿದೆ.
ಡೀಸೆಲ್ ದರ: ಮೇ 14ರವರೆಗೆ ಪ್ರತಿ ಲೀಟರ್ಗೆ ₹92.07 ಇತ್ತು. ಇಂದಿನಿಂದ ₹95.07ಕ್ಕೆ ಹೆಚ್ಚಳ ಆಗಿದೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆಗಳು ಹೊಸ ದರ ಜಾರಿಗೆ ತಂದಿವೆ.















