ಶಿವಮೊಗ್ಗ: ದೇಶದಲ್ಲಿ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯ ಹೊರೆ ಜನರ ಮೇಲೆ ಬಿದಿದ್ದು, ಸೋಮವಾರ ಪೆಟ್ರೋಲ್ ದರವನ್ನು ಲೀಟರ್‌ಗೆ ರೂ.2.61 ಹಾಗೂ ಡೀಸೆಲ್ ದರವನ್ನು ರೂ.2.71 ಹೆಚ್ಚಿಸಲಾಗಿದೆ. ಕಳೆದ ಎರಡು ವಾರಗಳಲ್ಲಿ ಇದು ನಾಲ್ಕನೇ ಬಾರಿ ನಡೆದ ದರ ಏರಿಕೆಯಾಗಿದೆ.
ಮೇ 15 ರಿಂದ ಆರಂಭವಾದ ಈ ಸರಣಿ ಏರಿಕೆಯಿಂದ ಒಟ್ಟಾರೆ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಸುಮಾರು ರೂ.7.5 ರಷ್ಟು ಹೆಚ್ಚಳವಾಗಿರುವುದು ಸಾಮಾನ್ಯ ಜನರಲ್ಲಿ ಆತಂಕ ಮೂಡಿಸಿದೆ.
ಶಿವಮೊಗ್ಗದಲ್ಲಿ ಎಷ್ಟಿದೆ ರೇಟ್?
ಶಿವಮೊಗ್ಗದಲ್ಲಿ ಪೆಟ್ರೋಲ್ ಬೆಲೆ ನಿನ್ನೆ ಲೀಟರ್‌ಗೆ 108.99 ಇದ್ದ ದರವು ಇಂದು 111.83 ಗೆ ಏರಿಕೆಯಾಗಿದೆ. ಡೀಸೆಲ್ ಬೆಲೆ ನಿನ್ನೆ ಲೀಟರ್‌ಗೆ 97.07 ಇದ್ದ ದರವು ಇಂದು 99.88 ತಲುಪಿದೆ., ಪವರ್ ಪೆಟ್ರೋಲ್ ಬೆಲೆ ನಿನ್ನೆ ಲೀಟರ್‌ಗೆ 118.93 ಇದ್ದ ದರವು 121.76 ಗೆ ತಲುಪಿದೆ.
ಇದನ್ನೂ ಓದಿ > ಶಿವಮೊಗ್ಗದಲ್ಲಿ ಕ್ರಿಕೆಟ್ ಬೆಟ್ಟಿಂಗ್, ಆರು ಮಂದಿ ಬಂಧನ!
ಇದನ್ನೂ ಓದಿ > ಪವರ್ ಚಾನಲ್‌ಗೆ ಹಾರಿ ಅಂಚೆ ಇಲಾಖೆಯ ನಿವೃತ್ತ ಸೇವಕ ಆತ್ಮಹತ್ಯೆ
ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಿಂದ ಮುಂದಿನ ದಿನಗಳಲ್ಲಿ ಬಸ್, ಆಟೋ, ಟ್ಯಾಕ್ಸಿ ದರಗಳೂ ಏರಬಹುದಾದ ಸಾಧ್ಯತೆ ಇದೆ. ಸರಕು ಸಾಗಣೆ ವೆಚ್ಚ ಹೆಚ್ಚಾದರೆ ತರಕಾರಿ, ಹಣ್ಣು, ದಿನಸಿ ಸೇರಿದಂತೆ ಸಾಮಾನ್ಯ ಬಳಕೆಯ ವಸ್ತುಗಳ ಬೆಲೆಯೂ ಹೆಚ್ಚಾಗುವ ಸಾಧ್ಯತೆ ಇದೆ. ಈಗಾಗಲೇ ದುಬಾರಿ ಜೀವನದಿಂದ ಬಳಲುತ್ತಿರುವ ಜನರಿಗೆ ಈ ಇಂಧನ ದರ ಏರಿಕೆ ಮತ್ತೊಂದು ದೊಡ್ಡ ಹೊರೆ ಆಗಿದೆ.















